ಕಳೆದ ವರ್ಷ ರಸ್ತೆ ಹೊಂಡಕ್ಕೆ ಬಲಿಯಾದವರ ಲೆಕ್ಕ

Subscribe to Oneindia Kannada

ನವದೆಹಲಿ, ಆಗಸ್ಟ್, 02: ರಸ್ತೆ ಹೊಂಡಗಳು ಅವು ತಂದಿಡುವ ಅಪಾಯಕ್ಕೆ ಬಲಿಯಾಗುವ ಕುಟುಂಬಗಳ ನೋವಿನ ಬಗ್ಗೆ ಹೊಸದಾಗಿ ಹೇಳುವುದು ಏನಿಲ್ಲ. ಮಹಾನಗರಗಳಲ್ಲಿ ಅದೆಷ್ಟೋ ಜನ ರಸ್ತೆ ಹೊಂಡಕ್ಕೆ ತಮ್ಮ ಪ್ರಾಣವನ್ನೇ ತೆತ್ತಿದ್ದಾರೆ. ಕೇಂದ್ರ ಸಾರಿಗೆ ಸಚಿವಾಲಯ ರಸ್ತೆ ಹೊಂಡಕ್ಕೆ ಬಲಿಯಾದವರ ಅಂಕಿ ಅಂಶಗಳನ್ನು ನೀಡಿದ್ದು ಒಂದು ಕ್ಷಣ ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ

ರಸ್ತೆಯಲ್ಲಿನ ಹೊಂಡಗಳು, ವೇಗ ನಿಯಂತ್ರಕಗಳು, ವಿವಿಧ ಕಾಮಗಾರಿಗೆ ಅಗೆದ ಪರಿಣಾಮಕ್ಕೆ ಕಳೆದ ವರ್ಷ ಅಂದರೆ 2015ರಲ್ಲಿ ದೇಶಾದ್ಯಂತ ಸಂಭವಿಸಿದ ಅಪಘಾತದಲ್ಲಿ 10,876 ಜನರು ಪ್ರಾಣ ತೆತ್ತಿದ್ದಾರೆ. ಇದರಲ್ಲಿ ರಸ್ತೆ ಹೊಂಡಕ್ಕೆ ಬಲಿಯಾದರವ ಸಂಖ್ಯೆ 3,416! [ಎಚ್ಚರ ! ಬಲಿಗಾಗಿ ಕಾದಿವೆ, ಬೆಂಗ್ಳೂರ್ ರಸ್ತೆಗುಂಡಿಗಳು]

Bad roads killed over 10k people in India, 2015

ಇದು ದಾಖಲೆಗೆ ಸಿಕ್ಕ ಲೆಕ್ಕ, ಇನ್ನು ಎಷ್ಟೋ ಪ್ರಕರಣಗಳು ದಾಖಲಾಗದೇ ಹೋಗಿವೆ ಇದೆ ಎಂದು ಸಾರಿಗೆ ಸಚಿವಾಲಯದ ಮಾಜಿ ಮುಖ್ಯಸ್ಥ ಅನೀಶ್ ಕುಮಾರ್ ಹೇಳಿದ್ದಾರೆ.[ವೀಲಿಂಗ್ ಮಾಡಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳು]

ಮಹಾರಾಷ್ಟ್ರದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ಹೆಚ್ಚಿದೆ. ಆದರೆ ಉತ್ತರ ಪ್ರದೇಶದಲ್ಲಿ ಕಡಿಮೆಯಾಗಿದೆ. ರಸ್ತೆ ಮೃತ್ಯುಕೂಪದ ಲೆಕ್ಕಾಚಾರದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಬೇಡದ ದಾಖಲೆಯಲ್ಲಿ ಮಹಾರಾಷ್ಟ್ರ(812), ಉತ್ತರ ಪ್ರದೇಶ (679) ಮಧ್ಯಪ್ರದೇಶ (420) ಪಶ್ಚಿಮ ಬಂಗಾಳ (251) ಬಿಹಾರ (228) ಕ್ರಮವಾಗಿ ಸ್ಥಾನ ಪಡೆದುಕೊಂಡಿವೆ.

2014ರ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿತ್ತು. ಆದರೆ ಈ ಸಾರಿ ಸುಧಾರಣೆ ಮಾಡಿಕೊಂಡಿದ್ದು ಕೆಟ್ಟ ದಾಖಲೆ ಪಟ್ಟಿಯಲ್ಲಿ ಟಾಪ್ ಸ್ಥಾನ ಕಳೆದುಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to road transport ministry data, 10,876 accidents were reported last year(2015) due to potholes across the country. Many accidents go unreported and there is no detailed investigation into causes of road deaths in our country," said Ashish Kumar, former chief of the transport research wing.
Please Wait while comments are loading...