Get Updates
Get notified of breaking news, exclusive insights, and must-see stories!

ಹೌದು, ಅಯೋಧ್ಯೆಗೆ ಬಂದ ಇಟ್ಟಿಗೆಗಳು ರಾಮಮಂದಿರ ನಿರ್ಮಾಣಕ್ಕಾಗಿಯೇ

ಘಟನೆ ಒಂದು: ಆರು ತಿಂಗಳ ಹಿಂದೆ ದಿವಂಗತ ಅಶೋಕ್ ಸಿಂಘಾಲ್ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಸಭೆ ಸೇರಿದ್ದ ಸಂಘ ಪರಿವಾರದ ಮುಖಂಡರು ಮತ್ತು ರಾಮಜನ್ಮ ಭೂಮಿ ನ್ಯಾಸ ಟ್ರಸ್ಟಿನ ಸದಸ್ಯರು, ರಾಮಮಂದಿರ ನಿರ್ಮಾಣಕ್ಕೆ ಮೊದಲ ಹೆಜ್ಜೆಯಾಗಿ ಭಕ್ತರಿಂದ ಇಟ್ಟಿಗೆ/ಕಲ್ಲು ಕಾಣಿಕೆ ಪಡೆಯುವ ಮಹತ್ವದ ನಿರ್ಧಾರಕ್ಕೆ ಬಂದಿದ್ದರು.

ಘಟನೆ ಎರಡು: ಈ ಹಿಂದೆ ಮಂದಿರ ನಿರ್ಮಾಣಕ್ಕೆ ಬಂದಂತಹ ಲೋಡ್ ಗಟ್ಟಲೆ ಇಟ್ಟಿಗೆ ಏನಾಯಿತು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಪರಿವಾರದ ಮುಖಂಡರು ನೀಡದಿದ್ದರೂ, ಗುರಗಾಂವ್ ನಲ್ಲಿ ನಡೆದ ಭಾರೀ ಸಾರ್ವಜನಿಕ ಸಭೆಯಲ್ಲಿ ಅಶೋಕ್ ಸಿಂಘಾಲ್ ಆರು ತಿಂಗಳ ನಂತರ ಮಂದಿರ ನಿರ್ಮಾಣ ಕಾರ್ಯ ಪುನರಾರಂಭಗೊಳ್ಳಲಿದೆ ಎಂದು ಘೋಷಿಸಿದ್ದರು.

ಘಟನೆ ಮೂರು: ತರಾತುರಿಯಲ್ಲಿ ಮಂದಿರ ನಿರ್ಮಾಣ ಮಾಡದೇ ಸಮಸ್ತ ಹಿಂದೂ ಸಮುದಾಯದ ಪ್ರೀತಿ, ಭಕ್ತಿಯಿಂದ ಮಂದಿರ ನಿರ್ಮಾಣವಾಗ ಬೇಕು ಎನ್ನುವುದು ನಮ್ಮ ವಾದ, ಅದಕ್ಕಾಗಿ ಕಾಯೋಣ, ಕನಸಿನ ರಾಮಮಂದಿರ ನಿರ್ಮಾಣ ಮಾಡೋಣ, ಇಂದಲ್ಲಾ ನಾಳೆ ಆಗೇ ಆಗುತ್ತೆ ಎನ್ನುವ ಬಲಾಢ್ಯ RSS ಸಂಘಟನೆಯ ನಿಲುವಿನಿಂದ ಮಂದಿರ ನಿರ್ಮಾಣದ ಸ್ಪೀಡ್ ಮತ್ತು ಉತ್ಸಾಹಕ್ಕೆ ಕೊಂಚ ಬ್ರೇಕ್ ಬಿದ್ದಿತ್ತು.

ಘಟನೆ ನಾಲ್ಕು: ಭಾನುವಾರ (ಡಿ 20) ಅಯೋಧ್ಯೆಗೆ ಎರಡು ಲಾರಿಯಷ್ಟು ಶಿಲಾನ್ಯಾಸ ಪೂಜೆಗೊಂಡ ಇಟ್ಟಿಗೆ/ಕಲ್ಲುಗಳು ರಾಜಸ್ಥಾನದಿಂದ ಅಯೋಧ್ಯೆಗೆ ಬಂದಿಳಿದಿವೆ. ವಿಶ್ವ ಹಿಂದೂ ಪರಿಷತ್ ಒಡೆತನದ ಜಾಗದಲ್ಲಿ ಎಲ್ಲಾ ಕಲ್ಲುಗಳನ್ನು ಅನ್ಲೋಡ್ ಮಾಡಲಾಗಿದೆ. ಹಾಗೂ, ಬಂದಂತಹ ಕಲ್ಲುಗಳು ಮಂದಿರ ನಿರ್ಮಾಣಕ್ಕಾಗಿಯೇ ಎಂದು ಸಂಘ ಪರಿವಾರ ಸ್ಪಷ್ಟ ಪಡಿಸಿದೆ ಎಂದು ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಘಟನೆ ಐದು: ಮಂದಿರ ನಿರ್ಮಾಣಕ್ಕೆ ಎರಡು ಲಾರಿ ಕಲ್ಲುಗಳು ಬಂದಿರುವ ಮಾಹಿತಿಯಿಂದ ಬೆಚ್ಚೆತ್ತಿರುವ ಉತ್ತರ ಪ್ರದೇಶ ಸರಕಾರ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದೆ. ಜೊತೆಗೆ, ಫೈಸ್ಲಾಬಾದ್ ಜಿಲ್ಲಾಧಿಕಾರಿಯಿಂದ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷರಿಂದ ಕ್ಷಣಕ್ಷಣದ ಬೆಳವಣಿಗೆಯ ಬಗ್ಗೆ ಗೃಹ ಇಲಾಖೆಗೆ ಸುದ್ದಿ ರವಾನಿಸುವಂತೆ ಸಿಎಂ ಅಖಿಲೇಶ್ ಯಾದವ್ ಸೂಚಿಸಿದ್ದಾರೆ.

ಮಂದಿರ ನಿರ್ಮಾಣದ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ರಾಮಜನ್ಮಭೂಮಿ

ರಾಮಜನ್ಮಭೂಮಿ

ಲೋಕಸಭೆಯಲ್ಲಿ ಎರಡು ಸೀಟಿನಿಂದ ಈಗ ಅಧಿಕಾರಕ್ಕೇರುವಂತಾಗಲು ಬಿಜೆಪಿಗೆ ರಾಮಜನ್ಮಭೂಮಿ ವಿಚಾರ ಕೂಡಾ ಒಂದು. ಅಂದು ಲಾಲ್ ಕೃಷ್ಣ ಅಡ್ವಾಣಿ ರಥಯಾತ್ರೆ ನಡೆಸಿ ಪಕ್ಷದ ಬಲವನ್ನು ಎರಡರಿಂದ 85ಕ್ಕೆ ಏರಿಸಿದ್ದರು. ಅದಾದ ನಂತರ ಬ್ರಿಟಿಷರ ಕಾಲದಿಂದಲೂ ಜೀವಂತವಾಗಿ ಉಳಿದಿರುವ ಅಯೋಧ್ಯ ಸಮಸ್ಯೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಯಥೇಚ್ಚವಾಗಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಈಗ ಅಧಿಕಾರದಲ್ಲಿರುವ ಮೋದಿ ಸರಕಾರದ ಚುನಾವಣಾ ಪ್ರಣಾಳಿಕೆಯಲ್ಲೂ ಅಯೋಧ್ಯೆ ಮಂದಿರ ನಿರ್ಮಾಣದ ಪ್ರಸ್ತಾವನೆಯಿದೆ.

ಅಶೋಕ್ ಸಿಂಘಾಲ್

ಅಶೋಕ್ ಸಿಂಘಾಲ್

ಪ್ರಖರ ಹಿಂದೂವಾದಿ ಸಿಂಘಾಲ್ ನಿಧನವಾದ ನಂತರ ರಾಮಮಂದಿರ ನಿರ್ಮಾಣದ ವಿಚಾರ ನೇಪಥ್ಯಕ್ಕೆ ಸರಿಯಬಹುದು ಎನ್ನುವ ಮಾತೂ ಕೇಳಿ ಬರುತ್ತಿತ್ತು. ಆದರೆ, ರಾಮಜನ್ಮ ಭೂಮಿ ನ್ಯಾಸ ಟ್ರಸ್ಟ್, ಸಾಧು ಸಂತರು, ಹಿಂದೂಪರ ಸಂಘಟನೆಗಳ ತೀವ್ರ ಒತ್ತಡದಿಂದಾಗಿ ವಿಶ್ವಹಿಂದೂ ಪರಿಷತ್ತಿಗೆ ಮಂದಿರ ನಿರ್ಮಾಣದ ವಿಚಾರ ಮತ್ತೆ ಎತ್ತದೇ ಬೇರೆ ದಾರಿಯಿರಲಿಲ್ಲ ಎನ್ನುವ ಮಾಹಿತಿಯಿದೆ. (ಚಿತ್ರ : ಪಿಟಿಐ)

ಮೋದಿ ಸರಕಾರದಿಂದ ಅನುಮತಿ

ಮೋದಿ ಸರಕಾರದಿಂದ ಅನುಮತಿ

ನಮಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ. ರಾಮ ಮಂದಿರ ನಿರ್ಮಾಣಕ್ಕೆ ನಾವು ಸನ್ನದ್ಧರಾಗಿದ್ದೇವೆ, ಇನ್ನೂ ಹೆಚ್ಚಿನ ಕಲ್ಲುಗಳು ಅಯೋಧ್ಯೆ ತಲುಪಲಿದೆ ಎಂದು ವಿಎಚ್ಪಿ ಮುಖಂಡ ಗೋಪಾಲದಾಸ್ ಹೇಳಿರುವುದಲ್ಲಿ ಎಷ್ಟು ಸತ್ಯ ಇದೆಯೋ ತಿಳಿಯದು, ಆದರೆ ಮೊದಲೇ ಅಸಹಿಷ್ಣುತೆಯ ಬೇಗುದಿಯಿಂದ ಬಳಲುತ್ತಿರುವುವರಿಗೆ ಮೋದಿ ವಿರುದ್ದ ತಿರುಗಿ ಬೀಳಲು ಇನ್ನೊಂದು ಪ್ರಭಲ ಅಸ್ತ್ರ ಸಿಕ್ಕಂತಾಗುವುದಂತೂ ಖಂಡಿತ.

ಬಾಬರಿ ಮಸೀದಿ ಆಕ್ಷನ್ ಕಮಿಟಿ

ಬಾಬರಿ ಮಸೀದಿ ಆಕ್ಷನ್ ಕಮಿಟಿ

ಅಯೋಧ್ಯೆಗೆ ಇಟ್ಟಿಗೆ ಬಂದಿಳಿದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಈ ಸಂಬಂಧ ಖಾರವಾಗಿ ಪ್ರತಿಕ್ರಿಯಿಸಿರುವ ಬಾಬರಿ ಮಸೀದಿ ಆಕ್ಷನ್ ಕಮಿಟಿ ಸಂಚಾಲಕ ಜಫರ್‌ ಯಾದ್ ಜಿಲಾನಿ, ಅಯೋಧ್ಯೆ ಕೇಸು ಈಗ ಸರ್ವೋಚ್ಚ ನ್ಯಾಯಾಲಯದ ಅಂಗಣದಲ್ಲಿದೆ. ರಾಜಸ್ಥಾನದಿಂದ ಇಲ್ಲಿಗೆ ಕಲ್ಲುಗಳು ಬಂದಿರುವುದು ಬರೀ ಮತಬ್ಯಾಂಕಿನ ಗಿಮಿಕ್. ಸಂಘ ಪರಿಪಾರ ಮಂದಿರ ನಿರ್ಮಾಣ ಸಂಬಂಧ ಸುಪ್ರೀಂ ಅನುಮತಿಯಿಲ್ಲದೆ ಯಾವುದೇ ಹೆಜ್ಜೆ ಇಡುವಂತಿಲ್ಲ. ಒಂದು ವೇಳೆ ತಪ್ಪು ದಾರಿ ಹಿಡಿದರೆ ಅದು ಕಾನೂನಿನ ಉಲ್ಲಂಘನೆಯಾದಂತೆ. ಆದರೂ ಉತ್ತರಪ್ರದೇಶ ಸರಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಜಿಲಾನಿ ಒತ್ತಾಯಿಸಿದ್ದಾರೆ.

ಮಂದಿರ ನಿರ್ಮಾಣಕ್ಕೆ ಬೇಕಾಗಿರುವ ಕಲ್ಲುಗಳು

ಮಂದಿರ ನಿರ್ಮಾಣಕ್ಕೆ ಬೇಕಾಗಿರುವ ಕಲ್ಲುಗಳು

ಮಂದಿರ ನಿರ್ಮಾಣಕ್ಕೆ 2.25 ಲಕ್ಷ ಕ್ಯೂಬಿಕ್ ಅಡಿ ಕಲ್ಲು ಬೇಕಾಗುತ್ತದೆ. 1.25 ಲಕ್ಷ ಕ್ಯೂಬಿಕ್ ಅಡಿ ಈಗಾಗಲೇ ಸಂಗ್ರಹವಾಗಿ ನಮ್ಮ ಕಸ್ಟಡಿಯಲ್ಲಿದೆ. ಇನ್ನು ಬೇಕಾಗಿರುವ ಕಲ್ಲುಗಳನ್ನು ಹಿಂದೂ ಭಕ್ತರಿಂದ ಸಂಗ್ರಹಿಸುತ್ತೇವೆಂದು ಅಶೋಕ್ ಸಿಂಘಾಲ್ ಜೂನ್ ತಿಂಗಳಲ್ಲಿ ಹೇಳಿದ್ದರು. ಇದಾದ ನಂತರ ವಿಎಚ್ಪಿ ಮುಖಂಡ ಪ್ರವೀಣ್ ತೊಗಾಡಿಯಾ ಕೂಡಾ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಂದಿರ ನಿರ್ಮಾಣಕ್ಕೆ ಅನುಮತಿ ಸಿಗಬಹುದು ಎನ್ನುವ ಹೇಳಿಕೆಯನ್ನು ನೀಡಿ ರಾಮಮಂದಿರ ನಿರ್ಮಾಣದ ವಿಚಾರ ಮತ್ತೆ ಆರಂಭವಾಗುವ ಮುನ್ಸೂಚನೆ ನೀಡಿದ್ದರು.(ಚಿತ್ರ : ಪಿಟಿಐ)

ಅಲಹಾಬಾದ್ ನ್ಯಾಯಾಲಯ

ಅಲಹಾಬಾದ್ ನ್ಯಾಯಾಲಯ

ಅಲಹಾಬಾದ್ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯು ಸುಪ್ರೀಂಕೋರ್ಟ್ ಮುಂದಿದೆ. ಈ ಅರ್ಜಿ ಸಲ್ಲಿಸಿ ಐದು ವರ್ಷ ಮೇಲಾಗಿದೆ. ಇದಲ್ಲದೇ, ಇತರ ಹನ್ನೆರಡು ಕೇಸ್ ಸುಪ್ರೀಂಕೋರ್ಟ್ ನಲ್ಲಿದೆ. ನ್ಯಾಯಾಲಯ ಇದುವರೆಗೆ ಅಫಿಡವಿಟ್ ವರ್ಗಾಯಿಸಿದ್ದನ್ನು ಬಿಟ್ಟರೆ ಈ ಕೇಸ್ ಕುಂಟುತ್ತಲೇ ಇದೆ ಎಂದು ಬಾಬ್ರಿ ಮಸೀದಿ ಕಮಿಟಿಯ ಡಾ. ಎಸ್ ಕ್ಯು ಆರ್ ಇಲಿಯಾಸ್ 'ಒನ್ ಇಂಡಿಯಾ' ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನ್ಯಾಯಾಲಯ ತೀರ್ಪು

ನ್ಯಾಯಾಲಯ ತೀರ್ಪು

ವಿವಾದಿತ ಭೂಮಿಯನ್ನು ಮೂರು ವಿಭಾಗಗಳನ್ನಾಗಿ ಮಾಡಿ ಮೂರು ಅರ್ಜಿದಾರರಿಗೆ ಹಂಚಲು ಅಲಹಾಬಾದ್ ಹೈಕೋರ್ಟಿನ ಮೂರು ನ್ಯಾಯ ಮೂರ್ತಿಗಳ ಪೀಠ ಸೂಚಿಸಿತ್ತು. ರಾಮಲಲ್ಲಾನ ವಿಗ್ರಹವಿರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ, ಇನ್ನುಳಿದ ಒಂದು ಭಾಗವನ್ನು ಸುನ್ನಿ ವಕ್ಫ್ ಮಂಡಳಿ ಮತ್ತು ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ತೀರ್ಪು ನೀಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+