ಮಾನವೀಯತೆ ಮರೆತ ಆಟೋ ಡ್ರೈವರ್: ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತೊಯ್ದ ಪತಿ
ಒಡಿಶಾದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಹಣವಿಲ್ಲದೆ ಪತ್ನಿ ಶವವನ್ನು ಹಳ್ಳಿಗೆ ಕರೆದೊಯ್ಯಲು ಪತಿ ಮಾಡಿದ್ದು ಏನು?
ವಿಶಾಖಪಟ್ಟಣಂ ಫೆಬ್ರವರಿ 9: ಒಡಿಶಾದಲ್ಲಿ ಪತ್ನಿ ಮೃತದೇಹವನ್ನು ಸಾಗಿಸಲು ಹಣವಿಲ್ಲದ ಪತಿ ತನ್ನ ಹೆಗಲ ಮೇಲೆ ಮೃತದೇಹವನ್ನು ಹೊತ್ತುಕೊಂಡು ಹೋದ ಹೃದಯವಿದ್ರಾವಕ ಘಟನೆ ನಡೆದಿದೆ. ಒಡಿಶಾದಲ್ಲಿ ಪತ್ನಿಯ ಶವವನ್ನು ಭುಜದ ಮೇಲೆ ಹೊತ್ತುಕೊಂಡು ಮನೆಗೆ ತೆರಳುತ್ತಿದ್ದ 33 ವರ್ಷದ ಬುಡಕಟ್ಟು ಯುವಕನಿಗೆ ಆಂಧ್ರಪ್ರದೇಶದ ಪೊಲೀಸರು ನೆರವಾಗಿದ್ದಾರೆ.
ಆಟೋ ರಿಕ್ಷಾ ಚಾಲಕ ಅವರನ್ನು ಮನೆಗೆ ಕರೆದೊಯ್ಯಲು ನಿರಾಕರಿಸಿದ್ದರಿಂದ ವ್ಯಕ್ತಿ ತನ್ನ ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗಿದ್ದಾನೆ. ವಾಹನವನ್ನು ವ್ಯವಸ್ಥೆ ಮಾಡಲು ಅವರ ಬಳಿ ಹಣವಿಲ್ಲದ ಕಾರಣ ಅವರು ಪತ್ನ ಶವವನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶದ ವಿಜಯನಗರಂನಲ್ಲಿರುವ ಕೆಲವು ಸ್ಥಳೀಯರು ಆತನನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಅವರು ಅವನಿಗೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಿದರು. ಒಡಿಶಾದ ಕೊರಾಪುಟ್‌ನ ಎಡೆ ಸಮುಲು ಎಂಬಾತ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತ್ನಿಯನ್ನು ವಿಶಾಖಪಟ್ಟಣದ ಸಂಗಿವಲಸದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆಗೆ ಸ್ಪಂದಿಸದ ಕಾರಣ ಆಕೆಯನ್ನು ವೈದ್ಯರು ಒಡಿಶಾದ ಸೊರಡಾಕ್ಕೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು.

ಆಸ್ಪತ್ರೆಯಿಂದ ಸುಮಾರು 130 ಕಿಮೀ ದೂರದಲ್ಲಿರುವ ತನ್ನ ಹಳ್ಳಿಗೆ ಹಿಂತಿರುಗಲು ಅವರು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದರು. ಆದರೆ ಅವರ ಪತ್ನಿ ವಿಜಯನಗರದ ಬಳಿ ಮಧ್ಯದಲ್ಲಿ ನಿಧನರಾದರು. ಎಡೆ ಸಮುಲು ಆಟೋ ರಿಕ್ಷಾ ಚಾಲಕನಿಗೆ 2,000 ಪಾವತಿಸಿದನು. ಆದರೆ ಅದರ ನಂತರ ಸಾಗಲು ಆತನ ಬಳಿ ಹಣವಿರಲಿಲ್ಲ. ಆಟೋ ಚಾಲಕ ಹಣ ನೀಡದೇ ಸಾಗಲು ನಿರಾಕರಿಸಿದ್ದಾರೆ. ಎಡೆ ಸಮುಲು ತನ್ನ ಹೆಂಡತಿಯ ಶವವನ್ನು ಭುಜದ ಮೇಲೆ ಹೊತ್ತುಕೊಂಡು ಹಲವಾರು ಕಿ.ಮೀ ನಡೆದಿದ್ದಾರೆ.
ಸ್ಥಳೀಯರು ವ್ಯಕ್ತಿಯನ್ನು ಗಮನಿಸಿದ ನಂತರ, ಪೊಲೀಸ್ ಇನ್ಸ್‌ಪೆಕ್ಟರ್ ಟಿ.ವಿ.ತಿರುಪತಿ ರಾವ್ ಮತ್ತು ಸಬ್ ಇನ್‌ಸ್ಪೆಕ್ಟರ್ ಕಿರಣ್ ಕುಮಾರ್ ನಾಯ್ಡು ಅವರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು 10,000 ಸಂಗ್ರಹಿಸಿದರು. ಬಳಿಕ ಆತನನ್ನು ಕಳುಹಿಸಿಕೊಡಲಾಯಿತು. ಮಾನವೀಯತೆ ಮರೆತ ಜನರ ನಡುವೆಯೂ ನೆರವಾಗುವ ಜನರಿಂದ ನಾವು ಹಲವು ಪಾಠ ಕಲಿಯುತ್ತೇವೆ. ಇಂತಹ ಘಟನೆಗಳಿಮದ ನಾವು ನಮ್ಮವರು ಎನ್ನುವ ಮನೋಭಾವ ಗಟ್ಟಿಯಾಗಿ ಉಳಿಯುತ್ತದೆ.












Click it and Unblock the Notifications