ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್‌ಪೋರ್ಟ್ ಅರ್ಜಿಗೆ ತಂದೆ ಹೆಸರು ಕಡ್ಡಾಯವಲ್ಲ

By Madhusoodhan
|
Google Oneindia Kannada News

ನವದೆಹಲಿ, ಆಗಸ್ಟ್, 23: ಪಾಸ್ ಪೋರ್ಟ್ ಅರ್ಜಿಯಲ್ಲಿ ತಂದೆಯ ಹೆಸರು ನಮೂದಿಸುವುದು ಕಡ್ಡಾಯ ಎಂದು ಅಧಿಕಾರಿಗಳು ಅರ್ಜಿದಾರ ಅಥವಾ ನಾಗರಿಕರ ಮೇಲೆ ಒತ್ತಡ ಹೇರುವುದು ಸಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಅರ್ಜಿದಾರರೊಬ್ಬರು ತಂದೆಯ ಹೆಸರನ್ನು ನಮೂದಿಸಿಲ್ಲ ಎಂಬ ಕಾರಣಕ್ಕೆ ಪಾಸ್ ಪೋರ್ಟ್ ನ್ನು ನವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಅಭ್ಯರ್ಥಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2007ರಲ್ಲಿ ನೀಡಲಾಗಿದ್ದ ಪಾಸ್ ಪೋರ್ಟ್ ನ್ನು ನವೀಕರಿಸಲು ಅಧಿಕಾರಿಗಳು ನಿರಾಕರಿಸಿದ್ದು, ಹಳೆಯ ಪಾಸ್ ಪೋರ್ಟ್ ನ್ನು ಅಧಿಕಾರಿಗಳು ರದ್ದು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.[ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?]

passport

ಅರ್ಜಿಯನ್ನು ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಸಚ್ ದೇವ್ ಅವರಿದ್ದ ಏಕಸದಸ್ಯ ಪೀಠವು, ಪಾಸ್ ಪೋರ್ಟ್ ಅರ್ಜಿಯಲ್ಲಿ ತಂದೆಯ ಹೆಸರು ನಮೂದಿಸಲೇಬೇಕೆಂದು ಅಧಿಕಾರಿಗಳು ಅರ್ಜಿದಾರರ ಮೇಲೆ ಒತ್ತಡ ಹೇರಬಾರದು. ಕಾನೂನು ತಂದೆ ಹೆಸರು ಕಡ್ಡಾಯ ಎಂದು ಎಲ್ಲಿಯೂ ಹೇಳಿಲ್ಲ ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.[ಆನ್ ಲೈನ್ ನಲ್ಲೇ ಪಾಸ್ ಪೋರ್ಟ್ ವೇರಿಫಿಕೇಷನ್!]

ಸಾಫ್ಟ್ ವೇರ್ ಬದಲಿಸಿ:
ಪಾಸ್ ಪೋರ್ಟ್ ಕಚೇರಿಯ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರು ಮೆಲ್ಬರ್ನ್ ನಲ್ಲಿದ್ದು 2017 ರವರೆಗೆ ಅವರು ಅಲ್ಲಿಯೇ ನೆಲೆಸಿರುತ್ತಾರೆ. ಹಾಗಾಗಿ ಅವದಿ ಮುಗಿಯುವ ಮುನ್ನವೇ ಪಾಸ್ ಪೋರ್ಟ್ ನ್ನು ನವೀಕರಣ ಮಾಡಲು ಅರ್ಜಿ ಸಲ್ಲಿಕೆ ಮಾಡಿದ್ದರು. ಪಾಸ್ ಪೋರ್ಟ್ ನವೀಕರಣಕ್ಕೆ ತಂದೆಯ ಹೆಸರು ದಾಖಲಿಸಲೇಬೇಕಾಗುತ್ತದೆ. ಇಲ್ಲವಾದರೆ, ಆ ಅರ್ಜಿಯನ್ನು ಸಾಫ್ಟ್ ವೇರ್ ಪರಿಗಣಿದೇ ತಿರಸ್ಕರಿಸುತ್ತದೆ ಇದು ನೈಜ ಸಮಸ್ಯೆ ಎಂಬ ವಿವರ ನೀಡಿದರು.[10 ದಿನದಲ್ಲಿ ಪಾಸ್ ಪೋರ್ಟ್ ಪಡೆಯುವುದು ಹೇಗೆ?]

ಆದರೆ ವಕೀಲರ ಈ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂಜೀವ್ ಸಚ್ ದೇವ್ ಅವರು, ಸಾಫ್ಟ್ ವೇರ್ ವ್ಯವಸ್ಥೆಯನ್ನು ಪರಿಷ್ಕರಿಸಿ. ಅರ್ಜಿಯಲ್ಲಿ ತಂದೆ ಹೆಸರು ನಮೂದಿಸಿಲ್ಲದ ಅರ್ಜಿಯನ್ನೂ ಪರಿಗಣನೆಗೆ ತೆಗೆದುಕೊಳ್ಳುವಂತೆ ಮಾಡಿ ಎಂದು ಹೇಳಿದರು.

English summary
Passport authorities cannot insist upon mentioning the name of an applicant's father in the travel document, the Delhi High Court said. "There is no legal requirement for insisting upon the father's name in the passport," Justice Sanjeev Sachdeva said while referring to an earlier judgement passed by the high court in May this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X