'ಸಿನಿಮಾ ಭಾಗವಾಗಿ ರಾಷ್ಟ್ರಗೀತೆ ಪ್ರಸಾರವಾದರೆ ಎದ್ದು ನಿಲ್ಲಬೇಕಿಲ್ಲ'

Written By: Ramesh
Subscribe to Oneindia Kannada

ನವದೆಹಲಿ, ಫೆಬ್ರವರಿ. 14: ಸಿನಿಮಾದ ಭಾಗವಾಗಿ ಅಂದರೆ ಚಿತ್ರ ಪ್ರಸಾರವಾಗುತ್ತಿದ್ದ ಸಂದರ್ಭದಮಧ್ಯದಲ್ಲಿ ರಾಷ್ಟ್ರಗೀತೆ ಪ್ರಸಾರವಾದರೆಆ ವೇಳೆಯಲ್ಲಿ ಪ್ರೇಕ್ಷಕರು ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಆದರೆ, ಚಿತ್ರಮಂದಿರಗಳಲ್ಲಿ ಚಲನಚಿತ್ರ ಆರಂಭಕ್ಕೂ ಮುನ್ನ ಮೊಳಗುವ ರಾಷ್ಟ್ರಗೀತೆ ವೇಳೆ ಎಲ್ಲರೂ ಎದ್ದು ನಿಂತು ಗೌರವಿಸುವುದು ಕಡ್ಡಾಯವಾಗಿದೆ.

ಮಂಗಳವಾರ ಸುಪ್ರೀಂಕೋರ್ಟ್ ಈ ಕುರಿತು ತೀರ್ಪು ನೀಡಿದೆ. ಚಲನಚಿತ್ರದ ಭಾಗವಾಗಿ ರಾಷ್ಟ್ರಗೀತೆ ಪ್ರಸಾರವಾದರೆ ಜನರು ಎದ್ದುನಿಂತು ಗೌರವ ಸಲ್ಲಿಸಬೇಕಿಲ್ಲ ಎಂದು ಹೇಳಿದೆ. [ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ, ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ]

Audience need not stand when National Anthem is part of film: Supreme Court

ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್ ದೇಶಾದ್ಯಂತ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಕಡ್ಡಾಯವಾಗಿ ಪ್ರಸಾರ ಮಾಡಬೇಕು ಎಂದು ಆದೇಶ ನೀಡಿತ್ತು.

ರಾಷ್ಟ್ರಗೀತೆ ಪ್ರಸಾರವಾಗುವಾಗ ಪರದೆ ಮೇಲೆ ರಾಷ್ಟ್ರಧ್ವಜದ ಚಿತ್ರ ಪ್ರದರ್ಶನವಾಗಬೇಕು. ಈ ಸಂದರ್ಭದಲ್ಲಿ ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಬೇಕು ಎಂದು ಹೇಳಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court today clarified that the audience need not stand when the National Anthem is played as a part of the storyline of a film, newsreel or documentary.
Please Wait while comments are loading...