ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದರ ಗೈರು ಹಾಜರಿ: ಗಂಭೀರ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಕಲಾಪಗಳಿಗೆ ಗೈರಾಗುವ ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.

|
Google Oneindia Kannada News

ನವದೆಹಲಿ, ಮಾರ್ಚ್ 22: ರಾಜ್ಯ ಸಭೆ ಮತ್ತು ಲೋಕಸಭೆ ಕಲಾಪಗಳಿಗೆ ಸಂಸದರು ಗೈರಾಗುವುದು ದೇಶದ ಬಗೆಗಿನ ಅವರ ನಿ‌ಷ್ಕಾಳಜಿಯನ್ನು ತೋರಿಸುತ್ತದೆ. ಸಕಾರಣವಿಲ್ಲದೆ ಕಲಾಪಗಳಿಗೆ ಗೈರಾಗಬೇಡಿ, ಇದು ನಾನು ಮನವಿ ಮಾಡಿಕೊಂಡು ತಿಳಿಸಬೇಕಾದ ವಿಷಯವಲ್ಲ. ನೀವೇ ಜವಾಬ್ದಾರಿಯಿಂದ ಅರಿಯಬೇಕಾದ ವಿ‌ಷಯ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಗಂಭೀರವಾಗಿ ಎಚ್ಚರಿಕೆ ನೀಡಿದ್ದಾರೆ.

ಮಾರ್ಚ್ 21, ಮಂಗಳವಾರ ಬೆಳಗ್ಗೆ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಬಿಜೆಪಿ ಸಂಸದರಿಗೆ ನೇರವಾಗಿ ಎಚ್ಚರಿಕೆ ನೀಡಿದ ಮೋದಿ, ನಾನು ಯಾವುದೇ ಸಮಯದಲ್ಲಿ ನಿಮ್ಮನ್ನು ನನ್ನ ಕಚೇರಿಗೆ ಕರೆಸಿಕೊಳ್ಳಬಹುದು ಎಂದೂ ಹೇಳಿದ್ದಾರೆ.[ವಿಜಯೋತ್ಸವ ಭಾಷಣದಲ್ಲಿ ನರೇಂದ್ರ ಮೋದಿ ಟಾಪ್ 10 ಹೇಳಿಕೆಗಳು]

Attendence shortage: Modi warns MPs

ಬಜೆಟ್ ಅಧಿವೇಶನದ ಸಂದರ್ಭದಲ್ಲೂ ಕೆಲವು ಸಂಸದರು ಸಂಸತ್ತಿಗೆ ಹಾಜರಿರದಿದ್ದ ವಿಷಯವನ್ನು ಗಮನದಲ್ಲಿಟ್ಟುಕೊಂಡಿದ್ದ ಅವರು, ಲಕ್ಷಾಂತರ ಜನರ ಪ್ರತಿನಿಧಿಯಾಗಿರುವ ನೀವು ಕಲಾಪಗಳಲ್ಲಿ ಗಂಭೀರವಾಗಿ ಭಾಗವಹಿಸಿದರೆ ಮಾತ್ರ ನಿಮ್ಮನ್ನು ಆಯ್ಕೆ ಮಾಡಿದ ಜನರಿಗೂ ನಿಮ್ಮ ಬಗ್ಗೆ ಗೌರವ ಉಳಿಯುತ್ತದೆ ಎಂದರು.[ನರೇಂದ್ರ ಮೋದಿ ಅಶ್ವಮೇಧ ಯಾಗ ವಿಫಲಗೊಳಿಸಲು ಮೆಗಾಪ್ಲಾನ್]

ರಾಜ್ಯದ ಬಿಜೆಪಿ ಸಂಸದರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಶೇ.98 ರಷ್ಟು ಹಾಜಾರಾತಿ ಹೊಂದಿ ಅಗ್ರಸ್ಥಾನ ಪಡೆದಿದ್ದರೆ, ಬಿ.ಶ್ರೀರಾಮುಲು ಶೇ.56 ಹಾಜರಾತಿ ಪಡೆದು ಅತೀ ಕಡಿಮೆ ಹಾಜರಾತಿ ಹೊಂದಿರುವ ಸಂಸದರೆನ್ನಿಸಿದ್ದಾರೆ.[ಸಂಸದನಾಗಿ ಯೋಗಿ ಮಾಡಿದ ಕೊನೆಯ ಹೃದಯಂಗಮ ಭಾಷಣ]

English summary
Prime Minister Narendra Modi warns the MPs who have low attendence in parliament. The responsible MP should not miss any parliament sessions without proper reason he also told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X