ಬಿಹಾರದಲ್ಲಿ JNU ಮಾಜಿ ವಿದ್ಯಾರ್ಥಿ ಕನ್ನಯ್ಯ ಕುಮಾರ್ ಮೇಲೆ ದಾಳಿ
ಪಾಟ್ನಾ, ಅಕ್ಟೋಬರ್ 17: ಜವಹರಲಾಲ್ ನೆಹ್ರು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಕನ್ನಯ್ಯ ಕುಮಾರ್ ಅವರಿದ್ದ ವಾಹನಗಳ ಮೇಲೆ ದಅಳಿ ನಡೆದಿದ್ದು ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮಂಗಳವಾರ ಬಿಹಾರದ ಬೆಗುಸಾರೈ ಜಿಲ್ಲೆಯ ದಾಹಿಯಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಾಳಿ ಮಾಡಿದ್ದು ಯಾರು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಸೋಮವಾರವಷ್ಟೇ ಪಾಟ್ನಾದ ಏಮ್ಸ್(All India Institute of Medical Sciences ) ವೈದ್ಯರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಕನ್ನಯ್ಯ ಕುಮಾರ್ ಅವರ ವಿರುದ್ಧ ಇಲ್ಲಿನ ಪುಲ್ವಾರಿ ಷರೀಫ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಮರುದಿನವೇ ಈ ಘಟನೆ ನಡೆದಿದೆ.
ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ(AISF) ನಾಯಕರೂ ಆಗಿರುವ ಕನ್ನಯ್ಯ ಕುಮಾರ್ ತಮ್ಮ ಬೆಂಬಲಿಗರೊಂದಿಗೆ ಏಮ್ಸ್ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಹಾರದ AISF ಅಧ್ಯಕ್ಷ ಸುಶೀಲ್ ಕುಮಾರ್ ನೋಡುವುದಕ್ಕೆದು ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಏಮ್ಸ್ ವೈದ್ಯರು ಅವರನ್ನು ತಡೆದಿದ್ದರು.
ಏಮ್ಸ್ಸ ವೈದ್ಯರ ಈ ಕ್ರಮವನ್ನು ಖಂಡಿಸಿ, ಕಿರಿಯ ವೈದ್ಯರ ಮತ್ತು AISF ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದಾಗಿ ಕೋಪಗೊಂಡ ಕಿರಿಯ ವೈದ್ಯರು ತಾವು ಕರ್ತವ್ಯ ನಿರ್ವಹಿಸುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದರು. ನಂತರ ಹಲವರ ಮನವು ಮೇರೆಗೆ ಕರ್ತವ್ಯಕ್ಕೆ ಹಾಜರಾದರು.
ಈ ಘಟನೆಯ ನಂತರ ಕನ್ನಯ್ಯ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.
2019 ರ ಲೋಕಸಭಾ ಚುನಾವಣೆಯಲಿ ಸಿಪಿಎಂ ಅಭ್ಯರ್ಥಿಯಾಗಿ ಬೆಗುಸಾರೈ ಲೋಕಸಭಾ ಕ್ಷೇತ್ರದಿಂದ ಕನ್ನಯ್ಯ ಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.












Click it and Unblock the Notifications