ನವಾಜ್-ಸಿಂಗ್ ಭೇಟಿಗೂ ಮುನ್ನ ಉಗ್ರರ ದಾಳಿ
ಜಮ್ಮು, ಸೆ.26: ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರ ಮಾತುಕತೆಗೆ 72 ಗಂಟೆಗಳು ಬಾಕಿಯಿರುವಾಗಲೇ, ಪಾಕ್ ಉಗ್ರರು ಭಾರತದ ಗಡಿ ಪ್ರದೇಶದಲ್ಲಿ ಅಟ್ಟಹಾಸ ಮೆರೆದಿದ್ದಾರೆ.ಕತಾವುನಲ್ಲಿರುವ ಪೊಲೀಸ್ ಠಾಣೆಯೊಂದರ ಮೇಲೆ ಗುರುವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ.
ಸಾಂಬಾ ಪಕ್ಕದಲ್ಲಿರುವ ಸೇನಾ ಶಿಬಿರದ ಮೇಲೆ ದಾಳಿ ಮಾಡುವ ಮುನ್ನ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಐವರು ಸೈನಿಕರು ಸೇರಿದಂತೆ 12 ಮಂದಿ ಹತರಾಗಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ ಬೆಳಗ್ಗೆ 8.45ಕ್ಕೆ ಜಮ್ಮು -ಪಠಾಣ್ ಕೋಟ್ ಹೆದ್ದಾರಿಯಲ್ಲಿ ಸಂಚಾರ ನಿಷೇಧಿಸಲಾಗಿದೆ.
ಸೇನಾ ಶಿಬಿರದ ಸುತ್ತಲೂ ಬಿಎಸ್ ಎಫ್ ಯೋಧರು ಸುತ್ತುವರಿದಿದ್ದು, ಸೇನಾ ಹೆಲಿಕಾಪ್ಟರ್ ಉಗ್ರರ ಶೋಧ ನಡೆಸುತ್ತಿದೆ. ಆ ಕಾಳಗದಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಇದ್ದರೂ ಇನ್ನೂ ದೃಢಪಟ್ಟಿಲ್ಲ.ಸೇನಾ ಶಿಬಿರದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, ಇಬ್ಬರು ಉಗ್ರರು ಸೇನಾ ಶಿಬಿರದೊಳಗೆ ಅವಿತಿದ್ದಾರೆ ಎಂದು ಶಂಕಿಸಲಾಗಿದೆ.
ಸೇನೆಯ ಸಮವಸ್ತ್ರ ಧರಿಸಿದ 4 ಉಗ್ರರು ಸೇನಾ ಶಿಬಿರದೊಳಗೆ ನುಸುಳಿ ದಾಳಿ ನಡೆಸಿದ್ದಾರೆ ಎಂದು ಐಜಿ ರಾಜೇಶ್ ಕುಮಾರ್ ಹೇಳಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಭರವಸೆ ನೀಡಿದ್ದಾರೆ.
ಬಿಜೆಪಿ ಖಂಡನೆ: ಪಾಕಿಸ್ತಾನದ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಭಾರತ -ಪಾಕಿಸ್ತಾನ ನಡುವಿನ ಮಾತುಕತೆ ರದ್ದು ಮಾಡಬೇಕು. ತಮ್ಮ ಸೇನೆ ಹಾಗು ಐಎಸ್ ಐ ಮೇಲೆ ನಿಯಂತ್ರಣ ಸಾಧಿಸಲು ಪರಾಭವಗೊಂಡಿರುವ ಪಾಕ್ ಸರ್ಕಾರದ ಜತೆ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಬಿಜೆಪಿ ನಾಯಕ ಯಶ್ವಂತ್ ಸಿನ್ಹಾ ಹೇಳಿದ್ದು ಕಾಂಗ್ರೆಸ್ಸಿಗರ ಕಿವಿಗೆ ತಲುಪಲೇ ಇಲ್ಲ.
ನಿರ್ಲಜ್ಜ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಬರ್ಥಡೇ ಬಾಯ್ ಪ್ರಧಾನಿ ಮನಮೋಹನ್ ಸಿಂಗ್ ಅವರು ಮೌನಾಚರಣೆ ಆಚರಿಸುತ್ತಿದ್ದಾರೇನೋ ಎಂದು ಸಾರ್ವಜನಿಕರು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಿದ್ದಾರೆ.
|
ಸಿಎಂ ಅಬ್ದುಲ್ಲಾ ಖಂಡನೆ
ಭಾರತ ಮತ್ತು ಪಾಕಿಸ್ತಾನದ ಶಾಂತಿ ಮಾತುಕತೆ ಅಡ್ಡಿಪಡಿಸಲು ಎರಡು ದಾಳಿ ನಡೆಸಿರುವ ಉಗ್ರರ ಕೃತ್ಯವನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರವಾಗಿ ಖಂಡಿಸಿದ್ದಾರೆ.
|
ಲೆಫ್ಟಿನೆಂಟ್ ಕರ್ನಲ್ ಹುತಾತ್ಮ
ಉಗ್ರರ ದಾಳಿಯಿಂದ ಸೈನಿಕರ ಸಾವಿನ ಸಂಖ್ಯೆ ಏರುತ್ತಿದೆ. ಲೆಫ್ಟಿನೆಂಟ್ ಕರ್ನಲ್ ವಿಕ್ರಮ್ ಜೀತ್ ಸಿಂಗ್ ಹುತಾತ್ಮರಾಗಿದ್ದಾರೆ.
|
ಯುಪಿಎಗೆ ಗಿಫ್ಟ್
ಉಗ್ರರ ದಾಳಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಹುಟ್ಟುಹಬ್ಬದ ಕೊಡುಗೆ

ಬಿಜೆಪಿ ಖಂಡನೆ
ಮನೆಯಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವಾಗ ಶಾಂತಿ ಮಾತುಕತೆ ನಡೆಸಲು ಮುಂದಾಗಿರುವ ಪ್ರಧಾನಿ ಅವರ ಕ್ರಮವನ್ನು ಬಿಜೆಪಿ ಖಂಡಿಸಿದೆ. ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ ಮಾತನಾಡಿ, ಪಾಕಿಸ್ತಾನದ ಮುಂದೆ ತಲೆತಗ್ಗಿಸಿ ನಿಲ್ಲಬಾರದು ಸಶಕ್ತ ಸಂದೇಶವನ್ನು ಅವರಿಗೆ ಕಳಿಸಬೇಕು ಎಂದು ಹೇಳಿದ್ದಾರೆ.

ಗಾಯಗೊಂಡ ವ್ಯಕ್ತಿ
ಜಮ್ಮು: ಉಗ್ರರ ದಾಳಿಯಿಂದ ಗಾಯಗೊಂಡ ಪೊಲೀಸ್ ಅಧಿಕಾರಿ

ಗಾಯಗೊಂಡ ವ್ಯಕ್ತಿ
ಜಮ್ಮು: ಉಗ್ರರ ದಾಳಿಯಿಂದ ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ

ಉಗ್ರರ ಸೆರೆ
ದಾಳಿ ನಡೆಸಿದ ಮೂವರು ಉಗ್ರರನ್ನು ಸೆರೆ ಹಿಡಿಯಲಾಗಿದೆ. ದಾಳಿ ನಡೆದ ಸ್ಥಳ ಪರಿಶೀಲನೆ ನಡೆಸಲಾಗಿದೆ. ಚಿತ್ರಗಳು: ಪಿಟಿಐ












Click it and Unblock the Notifications