ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚುತ್ತಿರುವ ಎಟಿಎಂ ದರೋಡೆ ಪ್ರಕರಣ: ಕೇಂದ್ರದ ಮಹತ್ವದ ನಿರ್ಧಾರ

|
Google Oneindia Kannada News

ನವದೆಹಲಿ, ಡಿ 15 (ಪಿಟಿಐ): ಎಟಿಎಂ ಮತ್ತು ಎಟಿಎಂಗೆ ಹಣ ತುಂಬಿಸುವ ವಾಹನಗಳ ಮೇಲೆ ನಡೆಯುತ್ತಿರುವ ದರೋಡೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಲು ಕೇಂದ್ರ ಹಣಕಾಸು ಸಚಿವಾಲಯ ಮುಂದಾಗಿದೆ.

ರಾತ್ರಿ ಒಂಬತ್ತು ಗಂಟೆಯ ನಂತರ ಎಟಿಎಂಗಳಿಗೆ ಹಣ ಲೋಡ್ ಮಾಡದೇ ಇರಲು ಸರಕಾರೀ ಸ್ವಾಮ್ಯದ ಮತ್ತು ಖಾಸಗಿ ವಲಯದ ಬ್ಯಾಂಕುಗಳಿಗೆ ಕೇಂದ್ರ ಸರಕಾರ ಸೂಚಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಜಿಟಲ್ ವ್ಯವಹಾರದ ಎಫೆಕ್ಟ್, ಎಟಿಎಂ ಕೇಂದ್ರಗಳಿಗೆ ಬಾಗಿಲುಡಿಜಿಟಲ್ ವ್ಯವಹಾರದ ಎಫೆಕ್ಟ್, ಎಟಿಎಂ ಕೇಂದ್ರಗಳಿಗೆ ಬಾಗಿಲು

ಜೊತೆಗೆ, ಎಟಿಎಂಗೆ ಹಣ ತುಂಬಿಸುವ ಜವಾಬ್ದಾರಿ ವಹಿಸಿಕೊಂಡಿರುವ ಖಾಸಗಿ ಸಂಸ್ಥೆಗಳು, ಮಧ್ಯಾಹ್ನದೊಳಗೆ ಹಣವನ್ನು ಬ್ಯಾಂಕಿನಿಂದ ಪಡೆಯುವಂತೆ ಸೂಚಿಸುವ ನಿರ್ಧಾರಕ್ಕೆ ಬಂದಿದ್ದು, ರಿಸರ್ವ್ ಬ್ಯಾಂಕ್ ಮೂಲಕ ಈ ಪ್ರಸ್ತಾವನೆ ಸಲ್ಲಿಸಲು ಕೇಂದ್ರ ನಿರ್ಧರಿಸಿದೆ.

ATMs not to be replenished with cash after 9 pm, private cash transportation agencies must collect money from the banks in the first half of the day

ಗ್ರಾಮೀಣ ಭಾಗದ ಎಟಿಎಂಗಳಿಗೆ ಸಂಜೆ ಆರು ಗಂಟೆಯೊಳಗೆ , ನಕ್ಲಲ್ ಪೀಡಿತ ಪ್ರದೇಶಗಳಲ್ಲಿನ ಎಟಿಎಂಗಳಿಗೆ ಅಪರಾಹ್ನ ನಾಲ್ಕು ಗಂಟೆಗೊಳಗೆ ಹಣ ತುಂಬಿಸುವ ಗಡುವು ನೀಡುವುದು. ಹಣ ತುಂಬಿಸಲು ಸಾಗುವ ವ್ಯಾನುಗಳಲ್ಲಿ ಸಿಸಿಟಿವಿ ಮತ್ತು ಜಿಪಿಎಸ್ ಕಡ್ಡಾಯವಾಗಿ ಅಳವಡಿಸುವುದು, ಒಂದು ಟ್ರಿಪ್ಪಿಗೆ ಐದು ಕೋಟಿಯ ಮೇಲೆ ನಗದು ನೀಡಬಾರದು ಎನ್ನುವ ನಿರ್ಬಂಧನೆ ಹೇರುವ ಅಂಶಗಳೂ ಪ್ರಸ್ತಾವನೆಯಲ್ಲಿದೆ.

ಬಂದೂಕು ಲೈಸೆನ್ಸ್ ಹೊಂದಿರುವ ಇಬ್ಬರು ಭದ್ರತಾ ಸಿಬ್ಬಂದಿಗಳು ವ್ಯಾನಿನಲ್ಲಿ ಇರುವುದು ಕಡ್ದಾಯ, ಜೊತೆಗೆ ಎಮರ್ಜೆನ್ಸಿಯಲ್ಲಿ ವ್ಯಾನ್ ಚಲಾವಣೆಯ ಅನುಭವ ಇರುವವರನ್ನು ಈ ಕೆಲಸಕ್ಕೆ ನೇಮಿಸುವಂತೆ ಸೂಚಿಸುವ ಅಂಶವೂ ಪ್ರಸ್ತಾವನೆಯಲ್ಲಿದೆ.

ಬೆಂಗಳೂರಿನಲ್ಲಿ ಎಟಿಎಂಗೆ ಹಣ ತುಂಬುವ ವೇಳೆ 18 ಲಕ್ಷ ಲೂಟಿಬೆಂಗಳೂರಿನಲ್ಲಿ ಎಟಿಎಂಗೆ ಹಣ ತುಂಬುವ ವೇಳೆ 18 ಲಕ್ಷ ಲೂಟಿ

ಸುರಕ್ಷತೆಯ ದೃಷ್ಟಿಂದ ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿರುವ ಹೊಸ ನಿಯಮಗಳ ಅನ್ವಯ ಮೇಲಿನ ಎಲ್ಲಾ ಬದಲಾವಣೆ ಜಾರಿಗೆ ತರುವುದು ಅತ್ಯವಶ್ಯಕ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಸುಮಾರು ಎಂಟು ಸಾವಿರ ಎಟಿಎಂಗೆ ಹಣ ತುಂಬಿಸುವ ಸಂಸ್ಥೆಗಳು ಪ್ರತೀ ದಿನ ಹದಿನೈದು ಸಾವಿರ ಕೋಟಿಗಿಂತಲೂ ಅಧಿಕ ಹಣವನ್ನು ಬ್ಯಾಂಕ್, ಎಟಿಎಂ, ಕರೆನ್ಸಿ ಚೆಸ್ಟಿಗೆ ಸಾಗಿಸುತ್ತಿವೆ.

English summary
ATMs not to be replenished with cash after 9 pm and private cash transportation agencies must collect money from the banks in the first half of the day. Union Finance Ministry proposal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X