Atiq Ahmed Murder Case: ಏ.28 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ
ಇತ್ತೀಚೆಗಷ್ಟೇ ಉತ್ತರಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಮಾಫಿಯಾ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಹತ್ಯೆ ಮಾಡಲಾಗಿತ್ತು. ಇದರ ತನಿಖೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ಆಲಿಸಲು ನ್ಯಾಯಾಲಯ ಸಮ್ಮತಿಸಿದೆ.
ವಕೀಲ ವಿಶಾಲ್ ತಿವಾರಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ತಜ್ಞರ ಸಮಿತಿಯನ್ನು ಸ್ಥಾಪಿಸಲು ಅರ್ಜಿಯಲ್ಲಿ ಕೋರಲಾಗಿದೆ. ಸುಪ್ರೀಂ ಕೋರ್ಟ್ ಈ ವಿಷಯ ವಿಚಾರಣೆಗೆ ಒಪ್ಪಿಕೊಂಡಿದೆ. ಪ್ರಕರಣದ ಮುಂದಿನ ದಿನಾಂಕವನ್ನು ಏಪ್ರಿಲ್ 28ಕ್ಕೆ ನಿಗದಿಪಡಿಸಲಾಗಿದೆ.

ಯುಪಿಯಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 183 ಎನ್‌ಕೌಂಟರ್‌ಗಳು ನಡೆದಿವೆ. ಇದಲ್ಲದೇ ಅತೀಕ್-ಅಶ್ರಫ್ ಹತ್ಯೆಯೂ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ವಿಶೇಷ ತನಿಖಾ ತಂಡ ರಚನೆ
ಅತೀಕ್ ಹತ್ಯೆಯ ನಂತರ ಸಿಎಂ ಯೋಗಿ ಆದಿತ್ಯನಾಥ್ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದರು. ಈ ಪ್ರಕರಣದ ತನಿಖೆಗಾಗಿ ಮೊದಲು ನ್ಯಾಯಾಂಗ ಆಯೋಗವನ್ನು ರಚಿಸಲಾಯಿತು. ಇದಲ್ಲದೆ ವಿಶೇಷ ತನಿಖಾ ತಂಡವೂ (ಎಸ್‌ಐಟಿ) ತನಿಖೆ ನಡೆಸುತ್ತಿದೆ.

ಮೂವರು ಶೂಟರ್‌ಗಳ ಬಂಧನ
ಏಪ್ರಿಲ್ 15ರ ರಾತ್ರಿ ಪೊಲೀಸರು ಅತೀಕ್ ಮತ್ತು ಅಶ್ರಫ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಾಗ, ಮೂವರು ಶೂಟರ್‌ಗಳು ಪತ್ರಕರ್ತರಂತೆ ನಟಿಸಿ ಸ್ಥಳಕ್ಕೆ ದಾವಿಸಿದರು. ಏಕಾಏಕಿ ಹಲವು ಸುತ್ತು ಗುಂಡು ಹಾರಿಸಿ ಸಹೋದರರಿಬ್ಬರನ್ನೂ ಕೊಂದು ಹಾಕಿದರು. ಘಟನೆಯ ವೇಳೆ ಹಲವಾರು ಪೊಲೀಸರು ಅಲ್ಲಿದ್ದರು. ಆದರೆ ಯಾರೂ ಪ್ರತಿದಾಳಿ ನಡೆಸಲಿಲ್ಲ. ಈ ಬಗ್ಗೆ ಪ್ರಶ್ನೆಗಳು ಎದ್ದಿವೆ. ನಂತರ ಮೂವರೂ ಶೂಟರ್‌ಗಳು ತಾವೇ ಶರಣಾದರು. ಅವರನ್ನು ಅರುಣ್ ಮೌರ್ಯ, ಸನ್ನಿ ಮತ್ತು ಲವಲೇಶ್ ತಿವಾರಿ ಎಂದು ಗುರುತಿಸಲಾಗಿದೆ.
ಝಾನ್ಸಿಯಲ್ಲಿ ಅತೀಕ್ ಮಗನ ಮೇಲೆ ಎನ್ಕೌಂಟರ್
ಮತ್ತೊಂದೆಡೆ ಝಾನ್ಸಿಯಲ್ಲಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಅತೀಕ್ ಪುತ್ರ ಅಸದ್ ಅಹಮದ್ ಮೇಲೆ ಎನ್‌ಕೌಂಟರ್ ನಡೆದಿದೆ. ಆತನೊಂದಿಗೆ ಮತ್ತೊಬ್ಬ ಶೂಟರ್ ಕೂಡ ಪೊಲೀಸರಿಂದ ಹತನಾದ. ಆದರೆ ಹಲವು ನಾಯಕರು ಈ ಎನ್‌ಕೌಂಟರ್ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದರು.












Click it and Unblock the Notifications