ಸ್ಮೃತಿ ಇರಾನಿ ಭಾರತದ ರಾಷ್ಟ್ರಪತಿ ಆಗ್ತಾರಂತೆ?
ನವದೆಹಲಿ, ನ.24: ಒಂದು ಕಾಲದಲ್ಲಿ ಕಿರುತೆರೆಯಲ್ಲಿ ರಾಣಿಯಾಗಿ ಮೆರೆದ ಹಾಲಿ ಮಾನವ ಸಂಪನ್ಮೂಲ ಖಾತೆ ಸಚಿವೆ ಅವರು ಮುಂದೊಂದು ದಿನ ಭಾರತದ ರಾಷ್ಟ್ರಪತಿಯಾಗುತ್ತಾರೆ ಎಂದು ರಾಜಸ್ಥಾನ ಮೂಲದ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರಂತೆ. ಅದರೆ, ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತು ಎಂದು ಸಚಿವೆ ಸ್ಮೃತಿ ಅಲ್ಲಗೆಳೆದಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜಸ್ಥಾನ ಪ್ರವಾಸ ಕೈಗೊಂಡಿರುವ ಸ್ಮೃತಿ ಇರಾನಿ ಅವರು ಭಿಲ್ವಾರದ ಕರೊಯಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಸ್ಮೃತಿ ಇರಾನಿ ಹಾಗೂ ಅವರ ಪತಿ ಜುಬಿನ್ ಇರಾನಿ ಅವರು ರಾಜಸ್ಥಾನ ಖ್ಯಾತ ಜ್ಯೋತಿಷಿ ಪಂಡಿತ್ ನಾಥುಲಾಲ್ ವ್ಯಾಸ್ ಅವರ ಬಳಿ ತಮ್ಮ ಭವಿಷ್ಯದ ಬಗ್ಗೆ ಪ್ರಶ್ನಿಸಿದ್ದಾರೆ.

ಆಗ ಸಚಿವೆ ಸ್ಮೃತಿ ಇರಾನಿ ಅವರ ಹಸ್ತವನ್ನು ನೋಡಿದ ಪಂಡಿತ್ ವ್ಯಾಸ್ ಅವರು ಮುಂದೊಂದು ದಿನ ಸ್ಮೃತಿ ಇರಾನಿ ಅವರು ರಾಷ್ಟ್ರಪತಿಯಾಗುವ ಯೋಗ ಹೊಂದಿದ್ದಾರೆ.ಸ್ಮೃತಿ ಇರಾನಿ ಅವರಿಗೆ ರಾಜಕೀಯ ಬದುಕಿನಲ್ಲಿ ಉತ್ತಮ ಭವಿಷ್ಯವಿದೆ ಎಂದು ಹೇಳಿದರಂತೆ.
(23/11/14) Bhilwara (Rajasthan): Minister of Human Resource Development Smriti Irani meets an astrologer pic.twitter.com/Atw9N8UP37
— ANI (@ANI_news) November 24, 2014 ಎನ್ ಡಿಎ ಸರ್ಕಾರ ರಚನೆಗೂ ಮುನ್ನ ಸ್ಮೃತಿ ಇರಾನಿ ಅವರಿಗೆ ಭವಿಷ್ಯ ಹೇಳಿದ್ದ ಪಂಡಿತ್ ವ್ಯಾಸ್ ಅವರು ಮೋದಿ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನ ಮಾನ ಸಿಗಲಿದೆ ಎಂದಿದ್ದರು. ಅದರಂತೆ ಸ್ಮೃತಿ ಇರಾನಿ ಅವರಿಗೆ ಮಾನವ ಸಂಪನ್ಮೂಲ ಖಾತೆ ಲಭಿಸಿತ್ತು ಎಂಬ ಮಾತಿದೆ.
ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸೋಲುಂಡರೂ ಸಚಿವ ಸ್ಥಾನ ಪಡೆದ 38 ವರ್ಷ ವಯಸ್ಸಿನ ಸ್ಮೃತಿ ಅವರ ಏಳಿಗೆ ಬಗ್ಗೆ ಸುಮಾರು 78 ವರ್ಷ ವಯಸ್ಸಿನ ಪಂಡಿತ್ ವ್ಯಾಸ್ ಅವರ ಭವಿಷ್ಯವಾಣಿ ನಿಜವಾದ ಹಿನ್ನೆಲೆಯಲ್ಲಿ ಅವರಿಗೆ ಧನ್ಯವಾದ ಅರ್ಪಿಸಲು ಆರು ತಿಂಗಳ ನಂತರ ಸ್ಮೃತಿ ಅವರು ಪಂಡಿತರನ್ನು ಕಾಣಲು ಪತಿ ಸಮೇತ ಬಂದಿದ್ದರು.
I realize I contribute to your TRPs and I am glad I could be of help: Smriti Irani on her meeting an astrologer pic.twitter.com/1EjHVLdYv5
— ANI (@ANI_news) November 24, 2014 ಸುಮಾರು ನಾಲ್ಕು ಗಂಟೆಗಳ ಕಾಲ ಪಂಡಿತ್ ಜೊತೆ ಮಾತುಕತೆ ನಡೆಸಿದರು. ತಮ್ಮ ಭವಿಷ್ಯದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದರು ಎಂದು ತಿಳಿದು ಬಂದಿದೆ. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ರಾಜ್ಯಸಭಾ ಸಂಸದ ಅಮರ್ ಸಿಂಗ್ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರಿಗೆ ಪಂಡಿತ್ ವ್ಯಾಸ್ ಅವರು ಭವಿಷ್ಯ ನುಡಿದಿದ್ದಾರೆ. ಜೈಪುರದಿಂದ ಸುಮಾರು 280 ಕಿ.ಮೀ ದೂರದಲ್ಲಿರುವ ನಾಥದ್ವಾರ ಗ್ರಾಮದಲ್ಲಿ ಪಂಡಿತ್ ವ್ಯಾಸ್ ನೆಲೆಸಿದ್ದಾರೆ.












Click it and Unblock the Notifications