Get Updates
Get notified of breaking news, exclusive insights, and must-see stories!

ಆಸ್ತಿ ವೃದ್ಧಿಯಲ್ಲಿ ಸಂಸದರಿಗಿಂತ ಶಾಸಕರ ಕೈ ಮೇಲು!

ಬೆಂಗಳೂರು, ನ. 4 : ಭಾರತದಲ್ಲಿ ಸಂಸದರಿಗಿಂತ ಶಾಸಕರ ಆಸ್ತಿಯೇ ಐದು ವರ್ಷಗಳ ಅವಧಿಯಲ್ಲಿ ವೇಗವಾಗಿ ಹೆಚ್ಚಾಗಿದೆ. ಎಡಿಆರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಸಂಸದರಿಗೆ ಹೋಲಿಸಿದರೆ ಶಾಸಕರ ಕ್ಷೇತ್ರ ವ್ಯಾಪ್ತಿ ಕಡಿಮೆ ಇರಬಹುದು. ಆದರೆ, ಸ್ಥಳೀಯ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯೇ ಹೆಚ್ಚಿರುವುದರಿಂದ ಶಾಸಕರಿಗೇ ಜಾಸ್ತಿ ಪ್ರಾಮುಖ್ಯತೆ ಸಿಗುತ್ತದೆ. ಆದ್ದರಿಂದ ಸಹಜವಾಗಿಯೇ ಶಾಸಕರ ಆಸ್ತಿ ಮೌಲ್ಯದಲ್ಲಿ ದಿಢೀರ್ ಏರಿಕೆ ಕಂಡುಬರುತ್ತಿದೆ ಎಂದು ಸಮೀಕ್ಷೆ ವರದಿ ಹೇಳಿದೆ.

2014ರ ಲೋಕಸಭೆ ಚುನಾವಣೆಯಲ್ಲಿ 168 ಸಂಸದರು ಪುನರಾಯ್ಕೆಯಾಗಿದ್ದಾರೆ. ಅವರ ಆಸ್ತಿಯಲ್ಲಿ 2009ರಲ್ಲಿ ಘೋಷಿಸಿದ್ದಕ್ಕಿಂತ ಶೇ. 137ರಷ್ಟು ಏರಿಕೆ ಉಂಟಾಗಿದೆ. ಆದರೆ, ಕೆಲವು ರಾಜ್ಯಗಳ ಶಾಸಕರ ಆಸ್ತಿಯಲ್ಲಿ ಇದಕ್ಕಿಂತ ಭಾರೀ ಪ್ರಮಾಣದ ಏರಿಕೆ ಕಂಡುಬಂದಿದೆ. ಪುನರಾಯ್ಕೆಗೊಂಡ ಶಾಸಕರ ಆಸ್ತಿ ಮಧ್ಯಪ್ರದೇಶದಲ್ಲಿ ಶೇ. 290ರಷ್ಟು, ಹರ್ಯಾಣದಲ್ಲಿ ಶೇ. 245ರಷ್ಟು, ಮಹಾರಾಷ್ಟ್ರದಲ್ಲಿ ಶೇ. 157ರಷ್ಟು ಹಾಗೂ ಛತ್ತೀಸ್ ಗಡದಲ್ಲಿ ಶೇ. 147ರಷ್ಟು ಏರಿಕೆ ಕಂಡುಬಂದಿದೆ.

Asset of MLAs increase compared to asset of MPs

ಹರ್ಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪುನರಾಯ್ಕೆಗೊಂಡ ಶಾಸಕರ ಆಸ್ತಿ ಮೊತ್ತ ಇಡೀ ದೇಶದಲ್ಲಿ ಪುನರಾಯ್ಕೆಗೊಂಡ ಸಂಸದರ ಆಸ್ತಿಗೆ ಸಮನಾಗಿರುವುದು ಗಮನಾರ್ಹ ವಿಷಯ. ಈ ಎಲ್ಲ ರಾಜ್ಯಗಳಲ್ಲಿ ಕಳೆದ 10 ತಿಂಗಳಲ್ಲಿ ಚುನಾವಣೆ ನಡೆದಿದೆ ಎಂಬುದು ವಿಶೇಷ.

ಸಂಸದರ ಆಸ್ತಿ ಶೇ. ಶೇ. 786ರಷ್ಟು ಏರಿಕೆ: ಆದರೆ, ಬಿಜೆಪಿಯಿಂದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಪುನರಾಯ್ಕೆಗೊಂಡಿರುವ ಸಂಸದ ಪಿ.ಸಿ. ಮೋಹನ್ ಅವರ ಆಸ್ತಿ 2009ರಲ್ಲಿ ಕೇವಲ 5 ಕೋಟಿ ರೂ. ಇದ್ದದ್ದು, 2014ರಲ್ಲಿ 47 ಕೋಟಿ ರೂ. ಗಳಿಗೆ ಏರಿದೆ. ಈ ಮೂಲಕ ಅವರ ಆಸ್ತಿ ಶೇ. 786ರಷ್ಟು ಏರಿಕೆ ಕಂಡಿದೆ. ಅನೇಕ ಸಂಸದರ ಆಸ್ತಿಯಲ್ಲಿ ಶೇ. 200ರಷ್ಟು ಏರಿಕೆಯಾಗಿದೆ ಎಂದು ಕೂಡ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+