ರಾಜಸ್ಥಾನ ಸಿಎಂ ಸಮೀಕ್ಷೆ : ವಸುಂಧರಾಗಿಂತ ಸಚಿನ್ ಪೈಲಟ್ ಮುಂದೆ
ಜೈಪುರ, ಅಕ್ಟೋಬರ್ 08: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಈ ನಡುವೆ ಚುನಾವಣಾ ಸಮೀಕ್ಷೆಗಳ ಭರಾಟೆ ಆರಂಭವಾಗಿದ್ದು, ಎಬಿಪಿ ನ್ಯೂಸ್ -ಸಿ ವೋಟರ್ ನಡೆಸಿದ ಸಮೀಕ್ಷೆ ಫಲಿತಾಂಶವು ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಬಂದಿದೆ.
ಐದು ರಾಜ್ಯಗಳ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಇದಕ್ಕೂ ಮುನ್ನ ಎಬಿಪಿ ನ್ಯೂಸ್ ಸಿ ವೋಟರ್ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಬಗ್ಗೆ ಸೂಚನೆ ಸಿಕ್ಕಿದೆ.
ವಸುಂಧರಾ ರಾಜೇ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದ್ದು, ಮೋದಿ ಅಲೆ ಬಂದರೂ ಜನರ ಮನಸ್ಸು ಬದಲಾಯಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಐದು ವರ್ಷದಲ್ಲಿ ರಾಜ್ಯಭಾರ ಮಾಡಿದ ಬಿಜೆಪಿಗೆ ಇದು ಹಿನ್ನಡೆಯಾಗಿದೆ.
200 ವಿಧಾನಸಭಾ ಕ್ಷೇತ್ರಗಳಿರುವ ರಾಜಸ್ಥಾನದಲ್ಲಿ ಸಮೀಕ್ಷೆ ಫಲಿತಾಂಶದಂತೆ, ಕಾಂಗ್ರೆಸ್ 142 ಸ್ಥಾನಗಳನ್ನು ಗೆಲ್ಲಲಿದೆ. ಕಳೆದ ಬಾರಿ 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಳೆದ ಬಾರಿ ಕೇವಲ 21 ಸೀಟು ಗೆದ್ದಿತ್ತು. ಕಳೆದ ಬಾರಿ 163 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ, ಈ ಬಾರಿ ಕೇವಲ 56 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಲಿದೆ. ಇನ್ನೆರಡು ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿವೆ ಎಂದು ವರದಿ ಬಂದಿದೆ. ಮುಖ್ಯವಾಗಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ.

ಶೇಕಡಾವಾರು ಮತ ಗಳಿಕೆ ಎಷ್ಟಿದೆ?
ಎಬಿಪಿ ನ್ಯೂಸ್ ಸಮೀಕ್ಷೆಯಂತೆ ಕಾಂಗ್ರೆಸ್ಸಿಗೆ ಶೇ 49.9ರಷ್ಟು ಮತ್, ಬಿಜೆಪಿಗೆ ಶೇ 34.3ರಷ್ಟು ಮತ ಗಳಿಕೆ ಸಿಗಲಿದೆ.
2013ರಲ್ಲಿ ಬಿಜೆಪಿಗೆ 45.2% ಹಾಗೂ ಕಾಂಗ್ರೆಸ್ಸಿಗೆ 33.1% ಮತಗಳು ಬಂದಿತ್ತು.
2013ರಲ್ಲಿ ಬಿಜೆಪಿ 163, ಕಾಂಗ್ರೆಸ್ 21, ಇತರೆ 6
ಎಬಿಪಿ ಸಮೀಕ್ಷೆ ಬಿಜೆಪಿ 56, ಕಾಂಗ್ರೆಸ್ 142, ಇತರೆ 2

ಮುಂದಿನ ಸಿಎಂ ಯಾರಾಗಬೇಕು?
ಮುಂದಿನ ಸಿಎಂ ಯಾರಾಗಬೇಕು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಕಾಂಗ್ರೆಸ್ಸಿನ ಸಚಿನ್ ಪೈಲಟ್ ಪರ ಶೇ 36ರಷ್ಟು ಮತಗಳು ಬಂದಿವೆ. ಬಿಜೆಪಿಯ ವಸುಂಧರಾ ರಾಜೇ ಪರ ಶೇ 27ರಷ್ಟು ಮತಗಳು ಬಂದಿವೆ. ಮಾಜಿ ಸಿಎಂ, ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಪರ ಶೇ 24ರಷ್ಟು ಮತಗಳು ಬಿದ್ದಿವೆ.
ಕಳೆದ ಚುನಾವಣೆಯಲ್ಲಿ ವಸುಂಧರಾ ಅವರು ಜಲರ್ ಪಠಾಣ್ ನಿಂದ 60, 896 ಮತಗಳ ಅಂತರದಿಂದ ಜಯಗಳಿಸಿದ್ದರು. ಅಶೋಕ್ ಗೆಹ್ಲೋಟ್ ಅವರು 18478 ಮತಗಳ ಅಂತರದಿಂದ ಗೆದ್ದಿದ್ದರು.
ವಸುಂಧರಾ ಸರ್ಕಾರದ ವಿರುದ್ಧ ಮತ ಏಕೆ?
ರಾಜಸ್ಥಾನದಲ್ಲಿ ಸರ್ಕಾರ ಬದಲಾಗಲು ಆಡಳಿತಾ ವಿರೋಧಿ ಅಲೆಯೇ ಕಾರಣ ಎಂಬುದನ್ನು ಈ ಮುಂಚಿನ ಚುನಾವಣಾ ಇತಿಹಾಸ ಸಾರುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹಾಗೂ ಜನಪ್ರಿಯ ಯೋಜನೆಗಳ ಬಲದಿಂದ ಮತ್ತೆ ಆಡಳಿತ ನಡೆಸಲು ರಾಜೇ ಮುಂದಾಗಿದ್ದಾರೆ. ಆದರೆ, ಮನ್ವೇಂದ್ರ ಸಿಂಗ್ ರಂಥ ನಾಯಕರು ಪಕ್ಷ ತೊರೆದಿದ್ದು, ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ವಸುಂಧರಾ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ.

ಸಚಿನ್ ಪೈಲಟ್ ಹಿನ್ನಲೆ ಏನು?
ವಾಯುಸೇನೆಯಲ್ಲಿದ್ದ ರಾಜೇಶ್ವರ್ ಪ್ರಸಾದ್ ಸಿಂಗ್ ಅವರು ರಾಜೇಶ್ ಪೈಲಟ್ ಆಗಿ ಕಾಂಗ್ರೆಸ್ ಮುಖಂಡರಾಗಿ ಬೆಳೆದರು. ಇವರ ಪುತ್ರ ಸಚಿನ್ ಪೈಲಟ್ ಗೆ ಈಗ 41 ವರ್ಷ ವಯಸ್ಸು. ತಂದೆಯ ಅಕಾಲಿಕ ಮರಣದ ನಂತರ ರಾಜಕೀಯಕ್ಕೆ ಎಂಟ್ರಿ. ಬಿಎ, ಎಂಬಿಎ ಮಾಡಿರುವ ಸಚಿನ್ ಅವರು 26 ವರ್ಷ ವಯಸ್ಸಿಗೆ ಮೊದಲ ಜಯ ಕಂಡರು. ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಪುತ್ರಿ ಸಾರಾರನ್ನು ಪ್ರೀತಿಸಿ ಮದುವೆಯಾದರು. 2009ರಲ್ಲಿ ಅಜ್ಮೇರ್ ನಿಂದ ಲೋಕಸಭೆಗೆ ಆಯ್ಕೆಯಾಗಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಸಚಿವರಾದರು.
2014ರಲ್ಲಿ ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷರಾದರೂ ವಿಧಾನಸಭೆಯಲ್ಲಿ ಸೋಲು, ಅಜ್ಮೇರ್ ನಲ್ಲಿ ಲೋಕಸಭೆಯಲ್ಲಿ ವೈಯಕ್ತಿಕ ಸೋಲು ಅವರನ್ನು ಕಾಡಿಸಿತು. ಆದರೆ, ಈ ಬಾರಿ ವಸುಂಧರಾ ಅವರ ಗೌರವ ಯಾತ್ರೆಗೆ ವಿರುದ್ಧವಾಗಿ ಪೈಲಟ್ ಕಾರ್ಯವ್ಯೂಹ ರಚಿಸಿದ್ದು, ಸಿಎಂ ಆಗುವ ಸನಿಹದಲ್ಲಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications