Get Updates
Get notified of breaking news, exclusive insights, and must-see stories!

ಗೆದ್ದ ಖುಷಿಗೆ ಜಂಬೂ ಸವಾರಿ ಮಾಡಲು ಹೋಗಿ ಬಿದ್ದ ಉಪಸಭಾಪತಿ: ವೈರಲ್ ವಿಡಿಯೋ

Recommended Video

      ಗೆದ್ದ ಖುಷಿಗೆ ಜಂಬೂ ಸವಾರಿ ಮಾಡಲು ಹೋಗಿ ಬಿದ್ದ ಉಪಸಭಾಪತಿ: ವೈರಲ್ ವಿಡಿಯೋ | Oneindia Kannada

      ಕರೀಂಗಂಜ್ (ಅಸ್ಸಾಂ), ಅಕ್ಟೋಬರ್ 8: ಒಂದು ಕ್ಷೇತ್ರಕ್ಕೆ ಅಲ್ಲಿನ ಜನಪ್ರತಿನಿಧಿ ಭೇಟಿ ನೀಡಿದಾಗ ಕಾರ್ಯಕರ್ತರು ವಿಶೇಷವಾಗಿ ಸ್ವಾಗತಿಸುವುದು ಸಹಜ. ಅಸ್ಸಾಂನ ಕರೀಂಗಂಜ್ ಜಿಲ್ಲೆಯ ರತಬರಿ ಕ್ಷೇತ್ರದಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರು ತಮ್ಮ ಶಾಸಕ ವಿಧಾನಸಭೆಯ ನೂತನ ಉಪಸಭಾಪತಿಯಾಗಿ ಆಯ್ಕೆಯಾದ ಸಂಭ್ರಮವನ್ನು ದೊಡ್ಡಮಟ್ಟದಲ್ಲಿ ಆಚರಿಸಲು ತಯಾರಿ ನಡೆಸಿದ್ದರು. ಆದರೆ, ಅದು ತಮಾಷೆಯ ಪ್ರಹಸನವಾಗಿ ಮಾರ್ಪಟ್ಟಿತು.

      ಬಿಜೆಪಿ ಶಾಸಕ ಕೃಪಾನಾಥ್ ಮಲ್ಲಾ, ಅಸ್ಸಾಂ ವಿಧಾನಸಭೆಯ ನೂತನ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಅವರು ತವರು ಕ್ಷೇತ್ರಕ್ಕೆ ಮರಳಿದಾಗ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತ ಕೋರಿದರು. ಅವರನ್ನು ಆನೆಯ ಮೇಲೆ ಕೂರಿಸಿ ಕರೆತಂದರು.

      ಕಾರ್ಯಕರ್ತರ ಕೂಗಾಟ, ಹರ್ಷೋದ್ಗಾರ ಕಂಡು ಬೆಚ್ಚಿಬಿದ್ದ ಆನೆ ಅಡ್ಡಾದಿಡ್ಡಿ ಓಡಲು ಆರಂಭಿಸಿತು. ಮಾವುತ ಜತೆಗಿದ್ದರೂ ನಿಯಂತ್ರಣ ಸಾಧಿಸುವುದು ಮಲ್ಲಾ ಅವರಿಗೆ ಸಾಧ್ಯವಾಗಲಿಲ್ಲ. ಮಾವುತನನ್ನು ಹಿಡಿದುಕೊಂಡಿದ್ದ ಅವರು, ಆತನ ಸಮೇತ ಕೆಳಕ್ಕುರುಳಿದರು. ಇನ್ನಷ್ಟು ಬೆದರಿದ ಆನೆ ಓಡತೊಡಗಿತು. ಅದೃಷ್ಟವಶಾತ್ ಮಲ್ಲಾ ಮತ್ತು ಮಾವುತ ಇಬ್ಬರೂ ಅಪಾಯದಿಂದ ಪಾರಾದರು.

      assam newly elected deputy speaker of assembly falls off an elephant

      ಆನೆಯ ಬೆನ್ನ ಮೇಲೆ ಹೊದಿಸಿದ್ದ ಮೆತ್ತನೆಯ ಬಟ್ಟೆಗಳು ಅವರೊಂದಿಗೆ ನೆಲಕಚ್ಚಿದವು. ಸಾವರಿಸಿಕೊಂಡ ಮಾವುತ ಕೂಡಲೇ ಎದ್ದು ಆನೆಯನ್ನು ನಿಯಂತ್ರಣಕ್ಕೆ ತರಲು ಅದರ ಬೆನ್ನಟ್ಟಿದರೆ, ಇತ್ತ ಕಾರ್ಯಕರ್ತರು ತಮ್ಮ ನಾಯಕನ ಕತೆ ಏನಾಯಿತು ಎಂದು ನೋಡಲು ಅವರತ್ತ ಓಡಿದರು.

      ಬಿದ್ದ ಗಾಬರಿಯಿಂದ ಕೂಡಲೇ ಚೇತರಿಸಿಕೊಂಡ ಮಲ್ಲಾ, ಜೋರಾಗಿ ನಗತೊಡಗಿದರು. ಅದನ್ನು ಕಂಡು ಉಳಿದ ಕಾರ್ಯಕರ್ತರಲ್ಲಿಯೂ ನಗು ಮೂಡಿತು. ಜಂಬೂ ಸವಾರಿಯ ಪುಳಕ ಪಡೆಯುವ ಉತ್ಸಾಹದಲ್ಲಿದ್ದ ನೂತನ ಉಪಸಭಾಪತಿಗಳು ಕೊನೆಗೆ ತೆರೆದ ಜೀಪ್‌ನಲ್ಲಿ ತೆರಳಿದರು.

      ಅಕ್ಟೋಬರ್ 5ರಂದು (ಶುಕ್ರವಾರ) ಮಲ್ಲಾ ಅವರು ವಿಧಾನಸಭೆಯ ನೂತನ ಉಪಸಭಾಪತಿಯಾಗಿ ನೇಮಕವಾಗಿದ್ದರು. ಅವರ ಆಯ್ಕೆಯ ಬಳಿಕ ಕಲಾಪ ಮುಂದೂಡಿಕೆಯಾಗಿತ್ತು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+