"ಹುಡುಗರ ತುಂಟತನ ಸಹಜ, ಮದ್ಯಪಾನ ಮಾಡುವ ಹುಡುಗಿಯರಿಂದ ಸಮಾಜ ಹಾಳು"
ಭಾರತದಲ್ಲಿ ಎಲ್ಲರಿಗೂ ಎಲ್ಲದಕ್ಕೂ ಸಮಾನವಾದ ಹಕ್ಕಿದೆ. ಪುರುಷರಿಗಷ್ಟೇ ಸ್ವಾತಂತ್ರ್ಯ ಮಹಿಳೆಯರಿಗೂ ಇದೆ. ಮಹಿಳೆಯರ ಆಯ್ಕೆಗಳನ್ನು ಕೂಡ ಈಗೆಲ್ಲ ಪ್ರಶ್ನೆ ಮಾಡುವಂತಿಲ್ಲ. ಈ ವಿಚಾರದಲ್ಲಿ ಸಮಾಜದಲ್ಲಿ ನ್ಯಾಯ ಕಾಪಾಡಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ಆಡಿರುವ ಮಾತುಗಳು ಇದೀಗ ಭಾರೀ ವಿರೋಧಕ್ಕೆ ಕಾರಣವಾಗಿದೆ. ಮಹಿಳೆಯರು ಮದ್ಯಪಾನ ಮಾಡುವುದನ್ನು ನೋಡಿ ನಾನು ನಾಚಿಕೆಪಡುತ್ತೇನೆ. ಇದರಿಂದಲೇ ಸಮಾಜ ಹಾಳಾಗುತ್ತಿದೆ. ಹುಡುಗರು ತುಂಟತನದಿಂದ ವರ್ತಿಸುವುದು ಸಹಜ ಎನ್ನುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮಹಿಳೆಯರು ಮದ್ಯಪಾನ ಮಾಡುವುದನ್ನು ನೋಡಿ ನಾಚಿಕೆಪಡುತ್ತೇನೆ, ಇದು ನೈತಿಕ ಅವನತಿಯ ಸಂಕೇತ ಎಂದು ಪಶ್ಚಿಮ ಬಂಗಾಳದ ಪಶ್ಚಿಮ ಬಂಗಾಳದ ರಣಘಾಟ್‌ನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಲಾಲ್ತು ಹಾಲ್ದರ್ ಅವರು ಮಹಿಳೆಯರು ಮದ್ಯ ಸೇವಿಸುವ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಭೆಯೊಂದರಲ್ಲಿ ಮಾತನಾಡಿದ ಹಾಲ್ದರ್, ಮೆರವಣಿಗೆಯ ಸಮಯದಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಮದ್ಯ ಸೇವಿಸುವುದನ್ನು ನೋಡಲು ನಾಚಿಕೆಯಾಗುತ್ತದೆ ಎಂದಿದ್ದಾರೆ. ಇದನ್ನು ಹೇಳಲು ನನಗೆ ನಾಚಿಕೆಯಾಗುತ್ತಿದೆ. ಮೆರವಣಿಗೆಯಲ್ಲಿ ಯುವತಿಯರು ರಸ್ತೆಯಲ್ಲಿ ನಿಂತು ಮದ್ಯಪಾನ ಮಾಡುತ್ತಾರೆ. ಇದನ್ನು ಮೆರವಣಿಗೆಯ ವೈಭವ ಎಂದು ಪರಿಗಣಿಸಿದರೆ, ನಾನು ಅಂತಹ ಮೆರವಣಿಗೆಯನ್ನ ಖಂಡಿಸುತ್ತೇನೆ ಎಂದಿದ್ದಾರೆ.
ಯುವತಿಯರಿಂದ ಮದ್ಯ ಸೇವನೆ ಹೆಚ್ಚು
ಕಾಳಿ ಪೂಜೆಯ ಸಮಯದಲ್ಲಿ, ಮೆರವಣಿಗೆಯಲ್ಲಿ ಮದ್ಯ ಸೇವಿಸುವವರ ಪ್ರಮಾಣ ಯುವತಿಯರಲ್ಲಿ ಅತ್ಯಧಿಕವಾಗಿದೆ. ಹುಡುಗಿಯರು ಬೀದಿಗಳಲ್ಲಿ ನಿಂತು ಮದ್ಯ ಸೇವಿಸುತ್ತಿದ್ದಾರೆ. ಇದು ಮೆರವಣಿಗೆಯ ಸೌಂದರ್ಯವೇ? ನಾನು ಈ ಮೆರವಣಿಗೆಯನ್ನು ಖಂಡಿಸುತ್ತೇನೆ. ಮನೆಯ ಮಹಿಳೆಯರು ಹೀಗಾದರೆ ಸಮಾಜ ಹಾಳಾಗುತ್ತೆ, ಹುಡುಗರು ಕೆಟ್ಟದಾಗಿ ವರ್ತಿಸುತ್ತಾರೆ. ಹುಡುಗಿಯರೇ ಹಲ್ಲೆ ನಡೆಸಿದರೆ, ಸಮಾಜ ಎಲ್ಲಿಗೆ ಹೋಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ. ಈ ಅಧಿಕಾರಿ ಮಹಿಳಾ ವಿರೋಧಿ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ಪುರುಷರು ತುಂಟತನದಿಂದ ವರ್ತಿಸುವುದು ಸಹಜ. ಅವುಗಳನ್ನು ತಡೆಯುವುದು ಮಹಿಳೆಯರ ಕರ್ತವ್ಯ. ಆದರೆ ಈಗ ಮಹಿಳೆಯರೇ ಕುಡಿದು ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸಮಾಜವು ವಿನಾಶದತ್ತ ಸಾಗುತ್ತಿದೆ ಎಂದು ಟೀಕಿಸಿದ್ದಾರೆ. ಹುಡುಗರು ತಪ್ಪು ಕೆಲಸಗಳನ್ನು ಮಾಡುತ್ತಾರೆ. ಮಹಿಳೆಯರ ಕೆಲಸ ಅವರನ್ನು ತಡೆಯುವುದು. ಆದರೆ ಈಗ ಮಹಿಳೆಯರು ಮದ್ಯಪಾನ ಮಾಡಿ ದೌರ್ಜನ್ಯ ಎಸಗುತ್ತಿದ್ದಾರೆ. ಇದು ಸಮಾಜಕ್ಕೆ ಹಾನಿಯನ್ನುಂಟು ಮಾಡುತ್ತಿದೆ ಎಂದಿರುವುದು ವಿವಾದಕ್ಕೆ ಕಾರಣವಾಗಿದೆ.












Click it and Unblock the Notifications