ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Asiatic Lion: ಗುಜರಾತ್‌ನ ಬರ್ದಾನಲ್ಲಿ ಮೊದಲ ಬಾರಿಗೆ ಏಷ್ಯಾಟಿಕ್ ಸಿಂಹ ಪತ್ತೆ!

|
Google Oneindia Kannada News

ಅಹಮದಾಬಾದ್,ಜನವರಿ.20: ಏಷ್ಯಾಟಿಕ್ ಪ್ರಜಾತಿಯ ಸಿಂಹಗಳು ಅರಣ್ಯ ನಾಶ ಮತ್ತು ಕಳ್ಳ ಬೇಟೆಯ ಕಾರಣಗಳಿಂದ ಅಪರೂಪವಾಗಿವೆ. ಈಗ 1879ರ ನಂತರ ಇದೇ ಮೊದಲ ಬಾರಿಗೆ ಏಷ್ಯಾಟಿಕ್ ಸಿಂಹವು ಗುಜರಾತ್‌ನ ಬರ್ದಾದಲ್ಲಿ ಪತ್ತೆಯಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಭಾಗದಲ್ಲಿ ಏಷ್ಯಾಟಿಕ್ ಸಿಂಹಗಳ ರಕ್ಷಣೆಗಾಗಿ 1970ರ ದಶಕದಲ್ಲಿ ವನ್ಯಜೀವಿ ಅಭಯಾರಣ್ಯ ಅಭಿವೃದ್ಧಿಪಡಿಸಿಲಾಗಿತ್ತು. ಈ ಪ್ರದೇಶ ಸಿಂಹಗಳಿಗೆ ಬೇಟೆಯಾಡಲು ಮತ್ತು ವಿಶ್ರಾಂತಿಸಲು ಅತಿ ಸೂಕ್ತವಾದ ಸ್ಥಳವಾಗಿರುವ ಹಿನ್ನೆಲೆಯಲ್ಲಿ ಸಸ್ಯವರ್ಗ ಮತ್ತು ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ಹಲವಾರು ಸೌಲಭ್ಯಗಳನ್ನು ಸಹ ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು.

ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಈ ಅಭಯಾರಣ್ಯವು ಸಿಂಹಗಳು ವಾಸಿಸಲು ಅನುಕೂಲಕರವಾದ ಎರಡನೇ ಪ್ರಮುಖ ನೆಲೆಯಾಗಿದೆ. 2019 ರ ಗಣತಿಯ ಪ್ರಕಾರ ಗುಜರಾತ್‌ನಲ್ಲಿ 674 ಏಷ್ಯಾಟಿಕ್ ಸಿಂಹಗಳಿವೆ. ಈ ಪೈಕಿ ಸುಮಾರು 325 ರಿಂದ 350 ಸಿಂಹಗಳು ಗಿರ್‌ನಲ್ಲಿ 1,412 ಚದರ ಕಿಲೋಮೀಟರ್‌ಗಳಲ್ಲಿ ವಾಸವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Asiatic Lion reappears in Gujarats Barda after 144 years

ಸುಮಾರು 144 ವರ್ಷಗಳ ನಂತರ ಬರ್ದಾದಲ್ಲಿ ಪ್ರದೇಶದಲ್ಲಿ ಈ ಪ್ರಜಾತಿಯ ಸಿಂಹ ಕಾಣಿಸಿಕೊಂಡಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿತ್ಯಾನಂದ ಶ್ರೀವಾಸ್ತವ ಅವರು ಖಚಿತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಸಸ್ಯವರ್ಗವು ಸುಧಾರಿಸಿದ ಬೆನ್ನಲ್ಲೆ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆಯು ಕ್ರಮೇಣವಾಗಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬರ್ದಾ ಪ್ರದೇಶ ಮಾಂಸಾಹಾರಿ ಪ್ರಾಣಿಗಳಿಗೆ ಅತಿ ಸೂಕ್ತವಾಗಿರುವ ಸ್ಥಳವಾಗಿದೆ ಎಂದು ಹೇಳಿದರು.

ಈ ಮೊದಲು ಪೋರಬಂದರ್ ವನ್ಯಜೀವಿ ವಿಭಾಗದ ಮಾಧವಪುರ ಶ್ರೇಣಿಯಲ್ಲಿ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಸಿಂಹ ಕಾಣಿಸಿಕೊಂಡಿತ್ತು. ಸಿಂಹದ ಚಲನವಲನಗಳ ಮೇಲೆ ನಿಗಾ ವಹಿಸುವ ಸಲುವಾಗಿ ಅಕ್ಟೋಬರ್ 29ರಂದು ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಸುಮಾರು ಮೂರು ತಿಂಗಳುಗಳ ಕಾಲ ಕರಾವಳಿಯ ಕಾಡುಗಳು ಮತ್ತು ಪಾಳು ಭೂಮಿಯಲ್ಲಿ ಸಂಚರಿಸುವ ಮೂಲಕ ಬರ್ದಾಗೆ ಆಗಮಿಸಿದೆ.

ಗಿರ್ ರಾಷ್ಟ್ರೀಯ ಉದ್ಯಾನವನದ ಸಲಹಾ ಸಮಿತಿಯ ಸದಸ್ಯರಾಗಿರುವ ಪರಿಮಳಾ ನಾಥ್ವಾನಿ ಅವರು ಮೂರು ವರ್ಷಕ್ಕಿಂತ ಮೇಲ್ಪಟ್ಟ ಗಂಡು ಸಿಂಹವು ಜನವರಿ 18 ರಂದು ಬರ್ದಾವನ್ನು ಪ್ರವೇಶಿಸಿದೆ ಎಂದು ಹೇಳಿದ್ದರು. ಪೋರಬಂದರ್ ವನ್ಯಜೀವಿ ವಿಭಾಗದ ರಣವಾವ್ ರೇಂಜ್‌ನ ಮೋಟಾ ಜಂಗಲ್ ಬೀಟ್‌ನಲ್ಲಿ ರೇಡಿಯೋ ಕಾಲರ್ ಹೊಂದಿರುವ ಗಂಡು ಸಿಂಹವು ಕಾಣಿಸಿಕೊಂಡಿದೆ ಈ ಮೂಲಕ ಸಿಂಹವು ತನ್ನ ಎರಡನೇ ನೆಲೆಯನ್ನು ಕಂಡುಕೊಂಡಿದೆ ಎಂದು ಹೇಳಿದ್ದಾರೆ.

ಸಮೃದ್ದವಾದ ಬೆಟ್ಟ ಮತ್ತು ಕರಾವಳಿ ಪ್ರದೇಶವಾಗಿರುವ ಬರ್ದಾದಲ್ಲಿ ಸುಮಾರು 40ಕ್ಕೂ ಅಧಿಕ ವಯಸ್ಕ ಸಿಂಹಗಳು ವಾಸಿಸಬಹುದಾಗಿದೆ. ಈ ಪ್ರದೇಶ ಏಷ್ಯಾಟಿಕ್ ಸಿಂಹಗಳ ಎರಡನೇ ಅಥವಾ ಪರ್ಯಾಯ ವಾಸಸ್ಥಾನ ಎಂದು ಗುರುತಿಸಲಾಗಿದೆ.

English summary
Asiatic lion species are rare due to deforestation and poaching. Now, for the first time since 1879, an Asiatic lion has been found in Gujarat's Barda, forest officials have informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X