ಕಾಂಗ್ರೆಸ್ ಸರ್ಕಾರ ಭ್ರಷ್ಟವಾಗಿದೆ: ಪರಿವರ್ತನ್ ಯಾತ್ರೆ ಆರಂಭ ಶೀಘ್ರ: ಪ್ರಹ್ಲಾದ್ ಜೋಶಿ

ನವದೆಹಲಿ, ಆಗಸ್ಟ್ 24: ರಾಜಸ್ಥಾನದಲ್ಲಿ ಮುಂದಿನ ತಿಂಗಳು ಬಿಜೆಪಿಯಿಂದ ಪರಿವರ್ತನ ಯಾತ್ರೆ ನಡೆಯಲಿದೆ. ಈ ಸಂಬಂಧ ರಾಜಸ್ಥಾನಕ್ಕೆ ಬೇಟಿ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು 'ಅತ್ಯಂತ ಭ್ರಷ್ಟ' ಸರ್ಕಾರ ಎಂದು ಆಪಾದಿಸಿದರು.

ರಾಜಸ್ಥಾನದ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿರುವ ಪ್ರಹ್ಲಾದ್ ಜೋಶಿ ಅವರು ಗುರುವಾರ ಒಂದು ದಿನ ರಾಜಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇಲ್ಲಿ ಅವರು ಮುಂದಿನ ತಿಂಗಳು 23 ದಿನಗಳ ಕಾಲ ಇಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪರಿವರ್ತನ್ ಯಾತ್ರೆ ಕುರಿತು ಮುಖಂಡರ ಜೊತೆಗೆ ಚರ್ಚಿಸಲಿದ್ದಾರೆ.

Ashok Gehlot Led Rajasthan Congress Govt Is Corrupt, Slams By Pralhad Joshi

ಸೆಪ್ಟೆಂಬರ್ 2, 3, 4 ಮತ್ತು 5 ರಂದು ಪರಿವರ್ತನ್ ಯಾತ್ರೆ ಆರಂಭವಾಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮ ಸೆಪ್ಟೆಂಬರ್ 25 ರಂದು ಜೈಪುರದಲ್ಲಿ ಪ್ರಧಾನಿ ಮೋದಿಯವರ ಮೆಗಾ ಸಾರ್ವಜನಿಕ ಭಾಷಣದೊಂದಿಗೆ ಅಂತ್ಯಗೊಳ್ಳಲಿದೆ.

ಮಹಿಳೆಯರಿಗೆ ರಾಜ್ಯದಲ್ಲಿ ಸುರಕ್ಷಿತೆ ಇಲ್ಲ

ರಾಜಸ್ಥಾನ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಸುರಕ್ಷತೆ ರಕ್ಷಣೆಯಲ್ಲಿ ವಿಫಲಗೊಂಡಿದೆ. ಇತ್ತೀಚೆಗೆ ಇಲ್ಲಿ ಅಧಿಕ ಅತ್ಯಾಚಾರ ಪ್ರಕರಣಗಳು ಕಂಡು ಬಂದಿರುವುದಕ್ಕೆ ಅವರು ವಿಷಾಧ ವ್ಯಕ್ತಪಡಿಸಿದರು. ಆಗಸ್ಟ್‌ನಲ್ಲಿ ಕರೌಲಿ ಜಿಲ್ಲೆಯ ತೋಡಭೀಮ್ ಪಟ್ಟಣದಲ್ಲಿ ಉದ್ಯೋಗಿಯೊಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದರು.

Ashok Gehlot Led Rajasthan Congress Govt Is Corrupt, Slams By Pralhad Joshi

ಇದೇ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ಪ್ರಯುಕ್ತ ಎಲ್ಲ ಪಕ್ಷಗಳು ಸಿದ್ಧತೆಗಳನ್ನು ತೀವ್ರಗೊಳಿಸಿವೆ. 'ಉಚಿತ' ಕುರಿತು ಗೆಹ್ಲೋಟ್ ಸರ್ಕಾರವನ್ನು ಮತ್ತಷ್ಟು ಕೆಣಕಿದ ಕೇಂದ್ರ ಸಚಿವರು ಭ್ರಷ್ಟಾಚಾರದ ವಿಷಯದಲ್ಲಿ ರಾಜಸ್ಥಾನವು ಪ್ರಸ್ತುತ ದೇಶವನ್ನು ಮುನ್ನಡೆಸುತ್ತಿದೆ. 100 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ ಸರ್ಕಾರವು ನಿರಂತರ ವಿದ್ಯುತ್ ನೀಡಲು ಸಹ ಹೆಣಗಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಐದು ರಾಜ್ಯಗಳಲ್ಲಿ ಚುನಾವಣೆ: ಸಿದ್ಧತೆ

ಕಳೆದ ಜೂನ್‌ನಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ರಾಜ್ಯ ಚುನಾವಣೆಗೆ ಮುನ್ನ ತಿಂಗಳಿಗೆ 100 ಯೂನಿಟ್‌ಗಳ ಬಳಕೆಯ ಮೇಲೆ ಉಚಿತ ವಿದ್ಯುತ್ ಪೂರೈಸುವುದಾಗಿ ಘೋಷಿಸಿದ್ದರು. ಈ ಹಿಂದೆ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯವಾಗಿದ್ದರಿಂದ ರಾಜಸ್ಥಾನದ ಜನರಿಗೆ ಅಗತ್ಯದಷ್ಟು ವಿದ್ಯುತ್ ಉತ್ಪಾದಿಸಲು ಆಗಲಿಲ್ಲ. ಇದೇ ವರ್ಷಾಂತ್ಯಕ್ಕೆ ಛತ್ತೀಸ್‌ಗಢ, ಮಿಜೋರಾಂ, ಮಧ್ಯಪ್ರದೇಶ, ತೆಲಂಗಾಣ ಮತ್ತು ರಾಜಸ್ಥಾನವು ಸೇರಿದಂತೆ ಒಟ್ಟು ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವನಣೆ ನಡೆಯಲಿದೆ. ಈ ಸಂಬಂಧ ಎಲ್ಲ ಪಕ್ಷಗಳು ಸಿದ್ಧತೆ ಆರಂಭಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+