ತಿರುಪತಿ ಲಡ್ಡು ವಿವಾದದ ಬಗ್ಗೆ ಅಸಾದುದ್ದೀನ್ ಓವೈಸಿ ಶಾಕಿಂಗ್ ಸ್ಟೇಟ್‌ಮೆಂಟ್
ತಿರುಪತಿ ತಿರುಮಲ ದೇವಸ್ಥಾನದ ಲಡ್ಡಿನ ವಿವಾದದ ಬಗ್ಗೆ ಇದೇ ಮೊದಲ ಬಾರಿ ಎಐಎಂಐಎಂ ಮುಖ್ಯಸ್ಥ ಹಾಗೂ ಮುಸ್ಲಿಂ ಮುಖಂಡ ಅಸಾದುದ್ದೀನ್ ಓವೈಸಿ ಮಾತನಾಡಿದ್ದಾರೆ. ತಿರುಪತಿ ಲಡ್ಡಿನಲ್ಲಿ ಹಸುವಿನ ಕೊಬ್ಬಿನ ಅಂಶ, ಹಂದಿಯ ಕೊಬ್ಬು ಹಾಗೂ ಮೀನಿ ಎಣ್ಣೆಯ ಅಂಶಗಳನ್ನು ತುಪ್ಪದೊಂದಿಗೆ (ಕಲಬೆರಕೆ) ತುಪ್ಪ ಬಳಸಲಾಗಿದೆ ಎನ್ನುವುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಆಂಧ್ರಪ್ರದೇಶ ಸರ್ಕಾರವು ಈ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯ ಮೇಲೆ ಆಡಳಿತ ಪಕ್ಷ ತಿರುಗಿ ಬಿದಿದೆ.
ಈ ನಡುವೆ ಸಿನಿಮಾ ನಟರು, ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಜನಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರತಿಕ್ರಿಯೆಗಳು ಮತ್ತಷ್ಟು ವಿವಾದವನ್ನು ಸೃಷ್ಟಿ ಮಾಡುತ್ತಿವೆ. ಈಗಾಗಲೇ ಪ್ರಕಾಶ್ ರಾಜ್ ಹಾಗೂ ಪವನ್ ಕಲ್ಯಾಣ್ ನಡುವೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಜಗನ್ ಮೋಹನ್ ರೆಡ್ಡಿ ನಡುವೆ ವಾಕ್ಸಮರ ಮುಂದುವರಿದಿದೆ. ಇದೀಗ ಓವೈಸಿ ಅವರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದ ಅಸಾದುದ್ದೀನ್ ಓವೈಸಿ ಈ ಬಗ್ಗೆ ಮಾತನಾಡಿ, ತಿರುಪತಿ ಪ್ರಸಾದವಾದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವುದು ವರದಿಯಾಗಿದೆ. ಒಂದೊಮ್ಮೆ ಇದು ನಿಜವಾಗಿಯೂ ನಡೆದಿದ್ದೇ ಆಗಿದ್ದರೆ, ಅದು ಖಂಡಿತವಾಗಿಯೂ ತಪ್ಪು. ನಾವೂ ಸಹ ಇದನ್ನು ತಪ್ಪು ಎಂದೇ ಹೇಳುತ್ತೇವೆ. ಈ ರೀತಿ ನಡೆಯಬಾರದಿತ್ತು ಎಂದು ಅವರು ಹೇಳಿದ್ದಾರೆ.

ಆಂಧ್ರಪ್ರದೇಶ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ
ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬಿನ ಅಂಶ, ಹಂದಿಯ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆ ಇರುವ ತುಪ್ಪವನ್ನು ಬಳಕೆ ಮಾಡಿರುವುದು ಲ್ಯಾಬ್ ರಿಪೋರ್ಟ್‌ನಿಂದ ಖಚಿತವಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಹೇಳಿದ ಮೇಲೆ ಇದು ಚರ್ಚೆಯಾಗಲು ಕಾರಣವಾಯಿತು. ಆಂಧ್ರಪ್ರದೇಶ ಮಾತ್ರವಲ್ಲ ದೇಶದಲ್ಲೇ ಈ ವಿಷಯ ತುಂಬಾ ಗಂಭೀರ ಚರ್ಚೆಗೆ ಕಾರಣವಾಗಿದೆ. ತಿರುಪತಿ ಲಡ್ಡು ಹಿಂದೂಗಳಿಗೆ ಪ್ರಸಾದ ಮಾತ್ರವಲ್ಲ ಅದು ಹಿಂದೂಗಳ ಧಾರ್ಮಿಕ ಭಾವನೆಯೊಂದಿಗೂ ಬೆಸೆದುಕೊಂಡಿದೆ. ತಿರುಪತಿ ಲಡ್ಡನ್ನು ಪ್ರಸಾದವನ್ನು ಹಿಂದೂಗಳು ಕಣ್ಣಿಗೆ ಒತ್ತಿಕೊಂಡು ಪವಿತ್ರ ಪ್ರಸಾದ ಎಂದು ಸ್ವೀಕರಿಸುವುದು ಇದೆ. ಈ ರೀತಿ ಪವಿತ್ರ ಪ್ರಸಾದದಲ್ಲಿ ಈ ರೀತಿ ಆಗಿರುವುದು ಬಹುತೇಕರನ್ನು ಆಘಾತಕ್ಕೆ ದೂಡಿದೆ.
ಕೋಟ್ಯಾಂತ ಭಕ್ತರ ನಂಬಿಕೆಗೆ ಘಾಸಿ: ತಿರುಪತಿ ಲಡ್ಡಿನ ವಿಚಾರವು ಕೋಟ್ಯಾಂತರ ಭಕ್ತರಿಗೆ ಆಘಾತ ಮೂಡಿದೆ. ತಿರುಪತಿ ಲಡ್ಡು ವಿವಾದ ಬೆಳಕಿಗೆ ಬರುತ್ತಿದ್ದಂತೆಯೇ ಈ ರೀತಿ ಆಗಲು ಸಾಧ್ಯವೇ ಎಂದು ಹಲವರು ಅಚ್ಚರಿ ಮೂಡಿಸಿದ್ದರು. ಕೋಟ್ಯಾಂತರ ರೂಪಾಯಿ ಆದಾಯವಿರುವ ದೇವಾಲಯದಲ್ಲಿ ತುಪ್ಪ ಪರಿಶೀಲನೆ ಮಾಡುವುದಕ್ಕೆ ಒಂದು ಲ್ಯಾಬ್ ಇರಲಿಲ್ಲವೇ. ಈ ವಿಷಯದಲ್ಲಿ ಇಷ್ಟು ವರ್ಷಗಳಿಂದಲೂ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗಿತ್ತೇ ಎನ್ನುವ ಪ್ರಶ್ನೆ ಎದುರಾಗಿದೆ. ಈ ನಡುವೆ ಈ ವಿಷಯವನ್ನು ತೆಲುಗುದೇಶಂ, ಜನಸೇನ ಪಕ್ಷ ಹಾಗೂ ವೈಎಸ್‌ಆರ್ ಕಾಂಗ್ರೆಸ್ ರಾಜಕೀಯವಾಗಿಯೂ ಬಳಸಿಕೊಳ್ಳಲಾಗುತ್ತಿದೆ. ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ.












Click it and Unblock the Notifications