Get Updates
Get notified of breaking news, exclusive insights, and must-see stories!

ನೂತನ ಪ್ರಜಾಪ್ರಭುತ್ವ ದೇಗುಲವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ ವಿರುದ್ಧ ಓವೈಸಿ ಗರಂ

ನವದೆಹಲಿಯಲ್ಲಿ ಇಂದು (ಮೇ 28, ಭಾನುವಾರ) ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಉದ್ಘಾಟಿಸಿದರು.

ಎರಡೂವರೆ ವರ್ಷಗಳ ಅವಧಿಯಲ್ಲಿ, 1200 ಕೋಟಿ ರೂಪಾಯಿ ವೆಚ್ಚದಲ್ಲಿ, 39.6 ಮೀಟರ್ ಎತ್ತರದಲ್ಲಿ ನಾಲ್ಕು ಅಂತಸ್ತಿನ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ. 1272 ಆಸನ ಸಾಮರ್ಥ್ಯವನ್ನು ಇದು ಹೊಂದಿದ್ದು, ಲೋಕಸಭೆಯನ್ನು ಗರಿಬಿಚ್ಚಿರುವ ನವಿಲಿನ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗಿದೆ.

New Parliament Inauguration

ಭಾರತದ ಪ್ರಜಾಭುತ್ವದ ದೇಗುಲ ಉದ್ಘಾಟನೆ ಹಲವು ಕಾರಣಗಳಿಂದ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಉದ್ಘಾಟನೆ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿವೆ. ಇದೇ ವೇಳೆ ಹೊಸ ಸಂಸತ್ ಭವನವನ್ನು ಆರ್‌ಜೆಡಿ ಪಕ್ಷ ಶವ ಪೆಟ್ಟಿಗೆಗೆ ಹೋಲಿಸಿ ವಿವಾದ ಮೈಮೇಲೆಳೆದುಕೊಂಡಿದೆ.

ನೂತನ ಸಂಸತ್ ಭವನವನ್ನು ಶವ ಪೆಟ್ಟಿಗೆಗೆ ಹೋಲಿಸಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವಿರುದ್ಧ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಸಾದುದ್ದೀನ್ ಓವೈಸಿ, "ಆರ್‌ಜೆಡಿ ಪಕ್ಷಕ್ಕೆ ಯಾವುದೇ ಸ್ಪಷ್ಟ ನಿಲುವು ಇಲ್ಲ. ಏಕೆ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸದ್ದಾರೆ?, ಬೇರೆ ಯಾವುದಾದರೂ ಉದಾಹರಣೆಯನ್ನು ನೀಡಬಹುದಿತ್ತು. ಇದರಲ್ಲೂ ಕೆಲವು ಕೋನವನ್ನು ತರಲಾಗಿದೆ. ಕೆಲವೊಮ್ಮೆ ಅವರು ಜಾತ್ಯತೀತ ನಾಟಕವಾಡುತ್ತಾರೆ," ಎಂದು ವ್ಯಂಗ್ಯವಾಡಿದ್ದಾರೆ.

"ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದರೆ ಚೆನ್ನಾಗಿತ್ತು. ಹಳೆಯ ಸಂಸತ್ ಕಟ್ಟಡಕ್ಕೆ ದೆಹಲಿ ಅಗ್ನಿಶಾಮಕ ದಳದ ಅನುಮತಿಯೂ ಇರಲಿಲ್ಲ. ಆರ್‌ಜೆಡಿ ಪಕ್ಷ ನೂತನ ಸಂಸತ್ತನ್ನು ಶವಪೆಟ್ಟಿಗೆ ಎಂದು ಏಕೆ ಕರೆಯುತ್ತಿದ್ದಾರೆ? ಅವರು ಬೇರೆ ಏನಾದರೂ ಹೇಳಬಹುದಿತ್ತು," ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅಸಾದುದ್ದೀನ್ ಓವೈಸಿ, "ಲೋಕಸಭೆಯ ಉಸ್ತುವಾರಿ ಸ್ಪೀಕರ್ ಹೊರತು ಪ್ರಧಾನಿ ಅಲ್ಲ. ಲೋಕಸಭೆಯು ಜನರಿಗೆ ಉತ್ತರದಾಯಿಯಾಗಿರುತ್ತದೆ. ಹೀಗಾಗಿ ಸಂಸತ್ ಅನ್ನು ಸ್ಪೀಕರ್ ಉದ್ಘಾಟಿಸಿದ್ದರೆ ಚೆನ್ನಾಗಿತ್ತು," ಎಂದು ಅಭಿಪ್ರಾಯಪಟ್ಟರು.

"ಪ್ರಧಾನಿ ಮೋದಿ ಅವರೇ ಎಲ್ಲವನ್ನೂ ಮಾಡುತ್ತಿದ್ದಾರೆ. ಈ ಮೂಲಕ ತನ್ನಿಂದಲ್ಲದೇ ಬೇರೆ ಯಾರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ತೋರಿಸಲು ಬಯಸಿದ್ದಾರೆ. 2014ಕ್ಕಿಂತ ಮೊದಲು ಭಾರತದಲ್ಲಿ ಏನೂ ಆಗಿಲ್ಲ, ಈಗ ಎಲ್ಲವೂ ನಡೆಯುತ್ತಿದೆ. ಇದು ಪ್ರಧಾನಿಯ ವೈಯಕ್ತಿಕ ಪ್ರಚಾರದ ಹೊಸ ಮಾರ್ಗವಾಗಿದೆ," ಎಂದು ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದರು.

New Parliament Inauguration

ಸದ್ಯ ನೂತನ ಸಂಸತ್ ಭವನವನ್ನು ಶವ ವಪೆಟ್ಟಿಗೆಗೆ ಹೋಲಿಸಿರುವ ಆರ್‍ಜೆಡಿ ವಿರುದ್ಧ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅನೇಕರು ಇದನ್ನು ಅಸಹ್ಯಕರ ಬೆಳವಣಿಗೆ ಎಂದಿದ್ದಾರೆ.

ಆರ್‌ಜೆಡಿ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಬಿಜೆಪಿ

ನೂತನ ಸಂಸತ್ ಭವನವನ್ನು ಶವ ಪೆಟ್ಟಿಗೆಗೆ ಹೋಲಿಸಿ ಟ್ವೀಟ್ ಮಾಡಿದ ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲು ಬಿಜೆಪಿ ಮುಂದಾಗಿದೆ.

ಶವ ಪೆಟ್ಟಿಗೆಯ ಆಕಾರಕ್ಕೆ ಹೋಲಿಸಿದ ಆರ್‌ಜೆಡಿ ಟ್ವೀಟ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಅಲ್ಲದೆ ಟ್ವಿಟ್ಟರ್ ಪೋಸ್ಟ್‌ನ ಹಿಂದಿರುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದೆ.

ಇಂದು ಶವಪೆಟ್ಟಿಗೆಗೆ ಹೋಲಿಸಿದವರನ್ನು, ದೇಶದ ಜನರು 2024ರಲ್ಲಿ ಅದೇ ಶವ ಪೆಟ್ಟಿಗೆಯಲ್ಲಿ ಹೂಳುತ್ತಾರೆ. ಜನರು ಪ್ರಜಾಪ್ರಭುತ್ವದ ಹೊಸ ಮಂದಿರವನ್ನು ಪ್ರವೇಶಿಸಲು ನಿಮಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಟೀಕಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+