Delhi C.M "ದೆಹಲಿ ಸಿ.ಎಂ ಕುರ್ಚಿಯ ಮೇಲೆ ಚಪ್ಪಲಿ ಇರಿಸುವ ಕಾಲ ದೂರವಿಲ್ಲ"

ದೆಹಲಿಯ ನೂತನ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಸಿಂಗ್ ಅವರು ನಾನು ಮಾಜಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್‌ ಅವರ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದ ವಿಚಾರ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಹುದ್ದೆಯಲ್ಲಿ ಇರುವವರು ಈ ರೀತಿಯ ವರ್ತನೆಯನ್ನು ತೋರಿಸಬಾರದು ಎನ್ನುವ ಟೀಕೆ ವ್ಯಕ್ತವಾಗಿದೆ. ಅತಿಶಿ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ನೆನಪಿಸಿದ್ದಾರೆ ಎಂದೂ ಕೆಲವರು ಹೇಳಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್ ಭೂಷಣ್‌ ಅವರು ತೀಕ್ಷಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಚಪ್ಪಲಿಯೇ ಅಧಿಕಾರ ನಡೆಸುತ್ತಿದೆ ಎನ್ನಬಹುದು: ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಪ್ರಶಾಂತ್‌ ಭೂಷಣ್‌ ಅವರು, ಅತಿಶಿ ಅವರು ಮುಂದಿನ ದಿಗನಳಲ್ಲಿ ಮುಖ್ಯಮಂತ್ರಿಯ ಕುರ್ಚಿಯ ಮೇಲೆ ಮಾಜಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್‌ ಅವರ ಚಪ್ಪಲಿಗಳನ್ನು ಇರಿಸಬಹುದು. ಆ ಚಪ್ಪಲಿಗಳೇ ರಾಜ್ಯವನ್ನು ಮುನ್ನಡೆಸುತ್ತಿವೆ ಎಂದು ಹೇಳಲೂಬಹುದು ಎಂದು ವ್ಯಂಗ್ಯವಾಡಿದ್ದಾರೆ.

Arvind Kejriwal slippers can be placed on the CM chair

ನಟ ಪ್ರಕಾಶ್‌ ರಾಜ್‌ ಸಹ ವ್ಯಂಗ್ಯ

ಅತಿಶಿ ಅವರ ಅತಿರೇಖದ ವರ್ತನೆಯನ್ನು ನಟ ಪ್ರಕಾಶ್‌ ರಾಜ್‌ ಅವರು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಅದೇ ಹಳೆಯ ಬಾಟಲಿನಲ್ಲಿ ಹೊಸ ಮದ್ಯ, ಎಂಥಹ ಪತನವಿದು ಎಂದಿದ್ದಾರೆ.

ನಟ ಪ್ರಕಾಶ್‌ ರಾಜ್‌ ಸಹ ವ್ಯಂಗ್ಯ

ಅತಿಶಿ ಅವರ ಅತಿರೇಖದ ವರ್ತನೆಯನ್ನು ನಟ ಪ್ರಕಾಶ್‌ ರಾಜ್‌ ಅವರು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಅದೇ ಹಳೆಯ ಬಾಟಲಿನಲ್ಲಿ ಹೊಸ ಮದ್ಯ, ಎಂಥಹ ಪತನವಿದು ಎಂದಿದ್ದಾರೆ.ತಮಿಳುನಾಡಿನಲ್ಲೂ ನಡೆದಿತ್ತು ಈ ರೀತಿಯ ಪ್ರಹಸನ ತಮಿಳುನಾಡಿನಲ್ಲೂ ಇದೇ ಪ್ರಹಸನ ನಡೆದಿತ್ತು. ತಮಿಳುನಾಡಿನಲ್ಲೂ ಇದೇ ರೀತಿಯ ರಾಜಕೀಯ ಪ್ರಹಸನಗಳು ನಡೆದಿದ್ದವು. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಸಾವನ್ನಪ್ಪಿದ ಮೇಲೆ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ ಪ್ರಮುಖ ನಾಯಕರಾದ ಕೆ.ಪಳನೀಸ್ವಾಮಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಧಿಕಾರದ ಅವಧಿಯ ಬಹುತೇಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದಿ. ಜಯಲಲಿತಾ ಅವರ ಪೋಟೋ ಇರುವುದು ಕಡ್ಡಾಯವಾಗಿತ್ತು.

ಪತ್ರಿಕಾಗೋಷ್ಠಿಗಳಲ್ಲೂ ಕೆ. ಪಳನೀಸ್ವಾಮಿ ಅವರು ಜಯಲಲಿತಾ ಅವರ ಚಿಕ್ಕದೊಂದು ಪೋಟೋವನ್ನು ಇರಿಸಿಕೊಳ್ಳುತ್ತಿದ್ದರು. ಆ ಪೋಟೋಗೆ ಹೂವು ಇಟ್ಟು ಪತ್ರಿಕಾಗೋಷ್ಠಿಗಳನ್ನು ಪ್ರಾರಂಭಿಸಲಾಗುತ್ತಿತ್ತು. ಅಂದಿನ ತಮಿಳುನಾಡಿನ ಸರ್ಕಾರದ ಪ್ರಮುಖ ಸಭೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ವಿಷಯಗಳನ್ನು ಚರ್ಚೆ ಮಾಡುವಾಗ ದಿ. ಜಯಲಲಿತಾ ಅವರ ಪೋಟೋ ಕಡ್ಡಾಯವಾಗಿ ಇರುತ್ತಿತ್ತು. ಇದೀಗ ಅತಿಶಿ ಅವರು ಇದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ ಎನ್ನುವ ಟೀಕೆ ವ್ಯಕ್ತವಾಗಿದೆ.

ದೆಹಲಿ ನೂತನ ಮುಖ್ಯಮಂತ್ರಿ ಅತಿಶಿ ಹೇಳಿದ್ದೇನು ?

ದೆಹಲಿಯ ನೂತನ ಮುಖ್ಯಮಂತ್ರಿ ಅತಿಶಿ ಅವರು ಮಾಜಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್‌ ಅವರು ಕುಳಿತಿದ್ದ ಸೀಟ್‌ನಲ್ಲಿ ನಾನು ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದರು. ಮುಂದುವರಿದು ರಾಮಾಯಣದ ಉದಾಹರಣೆಯನ್ನು ನೀಡಿದ್ದ ಅವರು, ಶ್ರೀರಾಮ 14 ವರ್ಷಗಳ ಕಾಲ ವನವಾಸಕ್ಕೆ ಹೋದಾಗ ರಾಮನ ಸಹೋದರ ಎದುರಿಸಿದ್ದ ಪರಿಸ್ಥಿತಿಯೇ ನನಗೂ ಬಂದಿದೆ.

ಅಯೋಧ್ಯಯಲ್ಲಿ ಭರತ 14 ವರ್ಷಗಳ ಕಾಲ ಆಡಳಿತ ನಡೆಸಿದಂತೆ ಇನ್ನುಳಿದ 4 ತಿಂಗಳ ಕಾಲ ನಾನು ಅಧಿಕಾರ ನಡೆಸಲಿದ್ದೇನೆ. ಶ್ರೀರಾಮನ ಚಪ್ಪಲಿಗಳನ್ನು ಸಿಂಹಾಸನದ ಮೇಲೆ ಇರಿಸಲಾಗಿತ್ತು ಎಂದು ಅತಿಶಿ ಅವರು ಉಲ್ಲೇಖಿಸಿದ್ದರು. ಅವರ ಮಾತು ಹಾಗೂ ಕಾರ್ಯಕ್ಕೆ ದೇಶದ ವಿವಿಧ ಭಾಗದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದು ರಾಜಾಡಳಿತ ಅಲ್ಲ, ಪ್ರಜಾಪ್ರಭುತ್ವ ಎನ್ನುವುದು ನೆನಪಿರಲಿ ಎಂದು ಕೆಲವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+