ದೆಹಲಿ ಚುನಾವಣೆ: ವೀಲ್ಚೇರ್ನಲ್ಲಿ ಬಂದು ಮತ ಚಲಾಯಿಸಿದ ಅರವಿಂದ್ ಕೇಜ್ರಿವಾಲ್ ಪೋಷಕರು

ನವದೆಹಲಿ, ಫೆಬ್ರವರಿ 05: ದೆಹಲಿಯ ವಿಧಾನಸಭಾ ಚುನಾವಣೆ ಮತದಾನ ಅಂತ್ಯಗೊಂಡಿದ್ದು, ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಎಎಪಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋಗಿ ಬಂದಿರುವುದು ಹಾಗೂ ಇತರ ರಾಜಕೀಯ ಬೆಳವಣಿಗೆಗಳು ಮತದಾರರ ಕಣ್ಮುಂದೆ ಇದೆ. ಹೀಗಾಗಿ ಅನುಕಂಪ ಹಾಗೂ ಜನಪ್ರಿಯತೆ ಎರಡೂ ಕೂಡ ಎಎಪಿ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆಯಿದ್ದು, ಎಎಪಿ ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ? ಎನ್ನುವ ಪ್ರಶ್ನೆ ದೇಶದ ಜನತೆ ಮುಂದಿದೆ.

ದೆಹಲಿಯ ಚುನಾವಣಾ ಕಣ ಈ ಬಾರಿ ರಂಗೇರಿದ್ದು, ಮತದಾರರನ್ನು ಸೆಳೆಯುವ ಸಲುವಾಗಿ ಹಲವಾರು ಗ್ಯಾರಂಟಿ ಯೋಜನೆ ಜೊತೆಗೆ ಹತ್ತಾರು ಭರವಸೆಗಳನ್ನು ನೀಡಲಾಗಿದೆ. ದೆಹಲಿಯಲ್ಲಿ ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಎಎಪಿ ಜನರಿಗೆ ಹಲವು ಉಚಿತ ಯೋಜನೆಗಳನ್ನು ನೀಡುವುದರೊಂದಿಗೆ ಗಮನಸೆಳೆದಿದೆ. ಜೊತೆಗೆ ಇತರ ಪಕ್ಷಗಳು ಕೂಡ ಜನರಿಗೆ ಭರವಸೆ ನೀಡಿದ್ದು, ಅಧಿಕಾರ ಯಾರ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Arvind Kejriwal Casts Vote With Family Parents In Wheelchairs

ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಇಂದು ಮತದಾನ ನಡೆದಿದ್ದು, ಸಂಜೆ 5 ಗಂಟೆಯ ತನಕ ಶೇಕಡಾ 57ರಷ್ಟು ಮತದಾನ ಆಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ ತಿಳಿಸಿದೆ. ಫೆಬ್ರವರಿ 8ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಮೂರು ಪಕ್ಷದ ಅಭ್ಯರ್ಥಿಗಳು ಹಾಗೂ ದೆಹಲಿಯ ಜನತೆ ಕಾತುರರಾಗಿದ್ದಾರೆ.

ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸಂಪೂರ್ಣ ಕುಟುಂಬದ ಸಮೇತ ಆಗಮಿಸಿ ಮತ ಚಲಾಯಿಸಿದರು ಅರವಿಂದ್ ಕೇಜ್ರಿವಾಲ್ ತಂದೆ ಗೋವಿಂದ ರಾಮ್ ಕೇಜ್ರಿವಾಲ್ ಮತ್ತು ತಾಯಿ ಗೀತಾ ದೇವಿ ವೀಲ್‌ಚೇರ್‌ಗಳಲ್ಲಿ ಬಂಧು ಮತ ಚಲಾಯಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ವೀಲ್‌ಚೇರ್ ಅನ್ನು ತಳ್ಳಿಕೊಂಡು ಮತಗಟ್ಟೆಗೆ ಬಂದಿದ್ದು, ತಂದೆ ಹಾಗೂ ತಾಯಿಗೆ ಅವರ ಮತದಾನ ಹಕ್ಕು ಚಲಾಯಿಸಲು ನೆರವಾಗಿದ್ದಾರೆ. ನವದೆಹಲಿ ವಿಧಾನಸಭಾ ಕ್ಷೇತ್ರದ ಲೇಡಿ ಇರ್ವಿನ್ ಸೀನಿಯರ್ ಸೆಕೆಂಡರಿ ಶಾಲೆಯ ಮತಗಟ್ಟೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬ ಮತಚಲಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+