ಜೇಟ್ಲಿ ಬಗ್ಗೆ ಅವಹೇಳನ ಪದ ಬಳಕೆಗೆ ಕೇಜ್ರಿಯದ್ದೇ ಕುಮ್ಮಕ್ಕು: ಜೇಠ್ಮಲಾನಿ

Posted By:
Subscribe to Oneindia Kannada

ನವದೆಹಲಿ, ಜುಲೈ 29: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿಚಾರಣೆ ನಡೆಸುವ ವೇಳೆ ಅವರ ವಿರುದ್ಧ ಅವಹೇಳನಕಾರಿ ಪದಗಗಳನ್ನು ಬಳಸಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೇ ತಮಗೆ ಸೂಚಿಸಿದ್ದರೆಂದು ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಪುನರುಚ್ಛರಿಸಿದ್ದಾರೆ.

2 ಕೋಟಿ ವಕೀಲಿಕೆ ಶುಲ್ಕಕ್ಕೆ ಕೇಜ್ರಿವಾಲ್ ಗೆ ಜೇಠ್ಮಲಾನಿ ಪತ್ರ

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜೇಟ್ಲಿ ಅವರ ವಿಚಾರಣೆ ನಡೆಸುವ ವೇಳೆ ಅವರನ್ನು ಹೀನಾಯವಾಗಿ ಬೈಯ್ಯಬೇಕು ಎಂದು ಕೇಜ್ರಿವಾಲ್ ಅವರೇ ಸೂಚಿಸಿದ್ದರು. ಅವರ ಸೂಚನೆಯ ಮೇರೆಗೆ ನಾನು ಹಾಗೆ ನಡೆದುಕೊಂಡೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ'' ಎಂದಿದ್ದಾರೆ.

Arvind Kejriwal asked me to use derogatory words against Arun Jaitley: Ram Jethmalani

ಕೇಜ್ರಿವಾಲ್ ವಿರುದ್ಧ ಅರುಣ್ ಜೇಟ್ಲಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದ ಹಿನ್ನೆಲೆಯಲ್ಲಿ, ಕೇಜ್ರಿವಾಲ್ ವಿರುದ್ಧ ವಕೀಲರಾಗಿದ್ದ ರಾಮ್ ಜೇಠ್ಮಲಾನಿ ಇತ್ತೀಚೆಗೆ ಅರುಣ್ ಜೇಟ್ಲಿ ಅವರನ್ನು ವಿಚಾರಣೆ ಮಾಡುವಾಗ ದಗಾಕೋರ ಎಂದು ಆರೋಪಿಸಿದ್ದರು. ಹಾಗಾಗಿ, ಜೇಟ್ಲಿ ಅವರು ಜೇಠ್ಮಲಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

'ಕೇಜ್ರಿವಾಲ್ ಬಡ ಕಕ್ಷೀದಾರ ಅಂದುಕೊಂಡು ಪುಕ್ಕಟೆ ವಾದ ಮಾಡ್ತೀನಿ'

ಇದರಿಂದ ಎಚ್ಚೆತ್ತ, ರಾಮ್ ಜೇಠ್ಮಲಾನಿ ಅವರು ಅರವಿಂದ್ ಕೇಜ್ರಿವಾಲ್ ಅವರೇ ತಮಗೆ ಅಂಥ ಪದಗಳನ್ನು ಬಳಸಲು ಸೂಚಿಸಿದ್ದರೆಂದು ತಿಳಿಸಿದ್ದರು. ಆದರೆ, ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದ ಕೇಜ್ರಿವಾಲ್, ತಾವು ಅಂತ ಯಾವುದೇ ಸೂಚನೆ ನೀಡಿಲ್ಲವೆಂದು ತಿಳಿಸಿದ್ದರು.

ಇದರಿಂದ ರೊಚ್ಚಿಗೆದ್ದ ಜೇಠ್ಮಲಾನಿ, ಕೇಜ್ರಿವಾಲ್ ಅವರ ವಕೀಲಿಕೆಯಿಂದ ಹಿಂದೆ ಸರಿದಿದ್ದಾರಲ್ಲದೆ, ತಮಗೆ ಕೇಜ್ರಿವಾಲ್ ಅವರಿಂದ ಸಲ್ಲಬೇಕಿರುವ 2 ಕೋಟಿ ರು. ವಕೀಲಿಗೆ ಶುಲ್ಕವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Renowned senior lawyer Ram Jethmalani has fired another round of accusations at his former client Arvind Kejriwal, stating that the Delhi chief minister had indeed asked him to use derogatory words against finance minister Arun Jaitley.
Please Wait while comments are loading...