ಅರುಣ್ ಜೇಟ್ಲಿ ನಿಧನಕ್ಕೆ ಆರ್‌ಎಸ್‌ಎಸ್‌ ಮುಖಂಡರ ಕಂಬನಿ

ಬೆಂಗಳೂರು, ಆಗಸ್ಟ್ 24: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿಯವರ ನಿಧನಕ್ಕೆ ಆರ್‌ಎಸ್‌ಎಸ್‌ ಮುಖಂಡರು ಕಂಬನಿ ಮಿಡಿದಿದ್ದಾರೆ.

ಅರುಣ್ ಜೇಟ್ಲಿ ನಮ್ಮನ್ನಗಲಿದ್ದಾರೆ. ಕೆಲವು ಸರ್ವಸಮರ್ಥ ಮತ್ತು ಸಮರ್ಪಿತ ನೇತಾರರನ್ನು, ಯಾರು ಆಂತರಂಗಿಕವಾಗಿ ಮತ್ತು ನಡವಳಿಕೆಯಿಂದ ಕಾರ್ಯಕರ್ತರಂತೆಯೇ ಜೀವನವನ್ನು ನಡೆಸಿದರೋ ಅಂತಹವರನ್ನು ಕಳೆದುಕೊಂಡಿದ್ದೇವೆ ಎಂದು ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.

arun jaitley

ಜೇಟ್ಲಿ ಅಗಲಿಕೆಯು ತುಂಬಲಾರದ ನಷ್ಟ. ಆಪ್ತ ಸ್ನೇಹಿತರೊಬ್ಬರು ಹೊರಟು ಹೋಗಿದ್ದಾರೆ. ಅವರ ಅಗಲಿಕೆಯಿಂದ ನಿರ್ಮಾಣವಾಗಿರುವ ಖಾಲಿತನವನ್ನು ತುಂಬಲಸಾಧ್ಯ. ವಿಚಾರ ಮತ್ತು ಮಾನವೀಯತೆಯು ಮೇಳವಿಸಿದ್ದ ನಾಯಕ ಅರುಣ್ ಅವರು ಸಮಸ್ಯೆಗಳನ್ನು ನಿಭಾಯಿಸುತ್ತಿದ್ದ ನಿಪುಣತೆ ಈಗ ಕೇವಲ ನೆನಪು ಮಾತ್ರ.

ಸಾಮಾಜಿಕ ಜೀವನದಲ್ಲಿ ಗುರುತಿಸಿಕೊಳ್ಳ ಬಯಸಿದ್ದ ಯುವಕರಿಗೆಲ್ಲ ಅವರು ಮಾದರಿಯಾಗಿದ್ದರು. ಉತ್ತಮ ಆದರ್ಶವನ್ನು ಹಾಕಿಕೊಟ್ಟಿದ್ದರು. ಅಗಲಿದ ಆತ್ಮಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸುತ್ತೇನೆ. ಸೇನಾಪತಿ ಹೊರಟು ಹೋದರು. ಅದರೂ ಮುನ್ನಡೆಯಲು ನಾವು ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+