ದಾಖಲೆ ಸೋರಿಕೆಗೆ ಆಧಾರ್ ಪ್ರಾಧಿಕಾರದವರನ್ನು ಬಂಧಿಸಿ: ಎಡ್ವರ್ಡ್ ಸ್ನೂಡೆನ್

ನವದೆಹಲಿ, ಜನವರಿ 9: "ಆಧಾರ್ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಪ್ರಾಧಿಕಾರದವರನ್ನು ಬಂಧಿಸಿ; ಪತ್ರಕರ್ತರನ್ನಲ್ಲ," ಎಂದು ಅಮೆರಿಕಾ ಮೂಲದ ಖ್ಯಾತ ವಿಷಲ್ ಬ್ಲೋವರ್ ಎಡ್ವರ್ಡ್ ಸ್ನೂಡೆನ್ ಕಿಡಿಕಾರಿದ್ದಾರೆ.

ಆಧಾರ್ ಮಾಹಿತಿ ಸೋರಿಕೆಯ ಬಗ್ಗೆ ತನಿಖಾ ವರದಿ ಪ್ರಕಟಿಸಿದ್ದ 'ದಿ ಟ್ರಿಬ್ಯೂನ್' ಪತ್ರಿಕೆ ಹಾಗೂ ಪತ್ರಿಕೆಯ ವರದಿಗಾರ್ತಿ ರಚ್ನಾ ಖೈರಾ ವಿರುದ್ಧ 'ಯುಐಡಿಎಐ' (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಎಫ್ಐಆರ್ ದಾಖಲಿಸಿತ್ತು.

ಈ ಬಗ್ಗೆ ವಿಶ್ವದಾದ್ಯಂತ ಟೀಕೆ ವ್ಯಕ್ತವಾಗಿದ್ದು ಇದಕ್ಕೆ ಎಡ್ವರ್ಡ್ ಸ್ನೂಡೆನ್ ಕೂಡ ಧ್ವನಿಗೂಡಿಸಿದ್ದಾರೆ.

Arrest Aadhaar authorities, not journalist: Edward Snowden

"ಆಧಾರ್ ಮಾಹಿತಿ ಸೋರಿಕೆಯನ್ನು ಬಹಿರಂಗಪಡಿಸಿದ ಪತ್ರಕರ್ತರಿಗೆ ಪ್ರಶಸ್ತಿ ನೀಡಬೇಕು; ಅವರ ವಿರುದ್ಧ ತನಿಖೆ ಮಾಡುವುದಲ್ಲ. ನ್ಯಾಯದ ಬಗ್ಗೆ ನಿಜವಾಗಿಯೂ ಸರಕಾರಕ್ಕೆ ಕಾಳಜಿ ಇದ್ದರೆ ಬಿಲಯನ್ ಭಾರತೀಯರ ಖಾಸಗಿತನ ಸರ್ವನಾಶವಾಗುವುದರ ವಿರುದ್ಧ ಪಾಲಿಸಿಗಳನ್ನು ಸುಧಾರಣೆ ಮಾಡಬೇಕು. ಇದಕ್ಕೆ ಕಾರಣಕರ್ತರ಻ದವರನ್ನು ಬಂಧಿಸಬೇಕಾ? ಅವರ ಹೆಸರು ಯುಐಡಿಎಐ," ಎಂದು ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+