ಅರ್ನಬ್ 'ರಿಪಬ್ಲಿಕ್' ವಿರುದ್ಧ ತಿರುಗಿಬಿದ್ದ ಸುಬ್ರಮಣಿಯನ್ ಸ್ವಾಮಿ

Posted By:
Subscribe to Oneindia Kannada

ನವದೆಹಲಿ, ಜನವರಿ 26: ಹಿರಿಯ ಟಿವಿ ಜರ್ನಲಿಸ್ಟ್ ಅರ್ನಬ್ ಗೋಸ್ವಾಮಿ ಅವರ 'ರಿಪಬ್ಲಿಕ್' ಸುದ್ದಿ ವಾಹಿನಿ ಆರಂಭಕ್ಕೆ ವಿಘ್ನ ಎದುರಾಗಿದೆ. ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ರಿಪಬ್ಲಿಕ್ ಹೆಸರು ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಈ ಬಗ್ಗೆ ಪತ್ರ ಬರೆದಿರುವ ಸ್ವಾಮಿ, ಉದ್ದೇಶಿತ ಸುದ್ದಿವಾಹಿನಿ 'ರಿಪಬ್ಲಿಕ್' ಗೆ ಲೈಸನ್ಸ್ ನೀಡದಂತೆ ಕೋರಿದ್ದಾರೆ.[ಅರ್ನಬ್ 'ರಿಪಬ್ಲಿಕ್' ಸಂಸ್ಥೆಗೆ ಸಂಸದ ರಾಜೀವ್ ಹೂಡಿಕೆ!]

Arnab Goswami's new channel in Subramanian Swamy's crosshairs

ಅರ್ನಬ್ ಹಾಗೂ ಅವರ ಸಂಸ್ಥೆಯವರು ರಿಪಬ್ಲಿಕ್ ಹೆಸರು ಬಳಕೆ ಮಾಡುವ ಮೂಲಕ 1950ರ ರಾಷ್ಟ್ರೀಯ ಚಿನ್ಹೆ ಹಾಗೂ ಹೆಸರು(ದುರ್ಬಳಕೆ ತಡೆ) ಕಾಯ್ದೆ ಉಲ್ಲಂಘಿಸಿದ್ದಾರೆ. ರಿಪಬ್ಲಿಕ್ ಹೆಸರನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.[ಗೋಸ್ವಾಮಿ ಹೊಸ ಸಾಹಸ 'ರಿಪಬ್ಲಿಕ್' ಆರಂಭ ಯಾವಾಗ?]

ಡಿಸೆಂಬರ್ ನಲ್ಲಿ ಟೈಮ್ಸ್ ನೌ ಎಡಿಟರ್ ಇನ್ ಚೀಫ್ ಹುದ್ದೆ ತೊರೆದ ಗೋಸ್ವಾಮಿ ಅವರು ಈಗ ರಿಪಬ್ಲಿಕ್ ಹೆಸರಿನಲ್ಲಿ ಹೊಸ ಸುದ್ದಿ ವಾಹಿನಿ ಸ್ಥಾಪನೆಗೆ ಮುಂದಾಗಿದ್ದಾರೆ.(ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BJP MP Subramanian Swamy has objected to the phrase 'Republic' as the name for the yet-to-be launched news channel by veteran TV journalist Arnab Goswami.
Please Wait while comments are loading...