ಟೈಮ್ಸ್ ನೌ ಎಡಿಟರ್ ಇನ್ ಚೀಫ್ ಹುದ್ದೆಗೆ ಅರ್ನಬ್ ಗೋಸ್ವಾಮಿ ರಾಜೀನಾಮೆ

ಬೆಂಗಳೂರು, ನವೆಂಬರ್ 01: ಟೈಮ್ಸ್ ನೌ ವಾಹಿನಿ ಎಡಿಟರ್ ಇನ್ ಚೀಫ್ಹುದ್ದೆಗೆ ಅರ್ನಬ್ ಗೋಸ್ವಾಮಿ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಟೈಮ್ಸ್ ನೌ ಉನ್ನತ ಮಟ್ಟದ ಸಂಪಾದಕೀಯ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಒನ್ ಇಂಡಿಯಾಕ್ಕೆ ತಿಳಿದು ಬಂದಿದೆ.

ಆದರೆ, ಅರ್ನಬ್ ಅವರು ತಮ್ಮ ಜನಪ್ರಿಯ ಟಿವಿ ಶೋ 'ನ್ಯೂಸ್ ಶೋ' ಮುಂದುವರೆಸಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿದೆ. ಅತ್ಯಂತ ಹೆಚ್ಚು ವೀಕ್ಷಿಸಲ್ಪಡುವ ಈ ಚರ್ಚಾ ಕಾರ್ಯಕ್ರಮವನ್ನು ಕೆಲ ಕಾಲ ಮುಂದುವರೆಸಲಿರುವ ಅರ್ನಬ್ ಅವರ ಮುಂದಿನ ನಡೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.[ಅರ್ನಬ್ ಗೆ 5 ಕೋಟಿ ಸಂಬಳವೇ?]

Arnab Goswami resigns from Times Now

ಆದರೆ, ತಮ್ಮದೇ ಆದ ಹೊಸ ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಹೆಚ್ಚಿದೆ. ಕಳೆದ ಮೂರು ತಿಂಗಳಿನಿಂದಲೂ ಅರ್ನಬ್ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿತ್ತು. ಈಗ ನಿಜವಾಗಿದೆ.[ಅರ್ನಬ್ ಗೋಸ್ವಾಮಿಗೆ ಬಿಗಿ ಭದ್ರತೆ]

1995ರಲ್ಲಿ ಟಿವಿ ಲೋಕಕ್ಕೆ ಪರಿಚಿತರಾದ ಅರ್ನಬ್ ಅವರು ಟೈಮ್ ನೌ ನ ಪ್ರಧಾನ ಸಂಪಾದಕರು. ಟೈಮ್ಸ್ ನೌ ಸಂಸ್ಥೆಗೂ ಮುನ್ನ ಕೋಲ್ಕತ್ತಾದ ದಿ ಟೆಲಿಗ್ರಾಫ್ ನಲ್ಲಿ ಪತ್ರಕರ್ತರಾಗಿ ಸಿಎನ್ಎನ್ ಐಬಿಎನ್ ನಲ್ಲಿ ರಾಜದೀಪ್ ಸರ್ದೇಸಾಯಿ ಹಾಗೂ ಎನ್ ಡಿ ಟಿವಿಯಲ್ಲಿ ಪ್ರಣವ್ ರಾಯ್ ಅವರ ಜತೆ ಕಾರ್ಯನಿರ್ವಹಿಸಿದ್ದರು.[ರಾಹುಲ್ ಸಂದರ್ಶಿಸಿದ ಅರ್ನಬ್ ಗೋಸ್ವಾಮಿ ಯಾರು]

ದಿಲ್ಲಿ ವಿಶ್ವವಿದ್ವಾಲಯದ ಹಿಂದೂ ಕಾಲೇಜಿನಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ. ಮುಂದೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ Social Anthropology ವಿಷಯದಲ್ಲಿ 1994ರಲ್ಲಿ ಸ್ನಾತಕೋತ್ತರ ಪದವಿ. Combating Terrorism: The Legal Challenge ಎಂಬ ಪುಸ್ತಕವನ್ನು ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+