ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ನಬ್ ಈಸ್ ಬ್ಯಾಕ್, ಶನಿವಾರ ರಿಪಬ್ಲಿಕ್ ಟಿವಿಗೆ ಚಾಲನೆ

ಅರ್ನಬ್ ಗೋಸ್ವಾಮಿ ಕನಸಿನ ಕೂಸು, ಬಹು ನಿರೀಕ್ಷಿತ 'ರಿಪಬ್ಲಿಕ್ ಟಿವಿ' ಇದೇ ಶನಿವಾರ 10 ಗಂಟೆಗೆ ಮನೆ ಮನೆಗಳನ್ನು ತಲುಪಲಿದೆ. ಖ್ಯಾತ ನಟ ಕಮಲ್ ಹಾಸನ್ ಚಾನಲಿಗೆ ಚಾಲನೆ ನೀಡಲಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಮೇ 5: ಫೈರ್ ಬ್ರಾಂಡ್ ಪತ್ರಕರ್ತ ಅರ್ನಬ್ ಗೋಸ್ವಾಮಿ ತೆರೆ ಮೇಲೆ ಕಾಣಿಸಿಕೊಳ್ಳಲು ಇನ್ನೇನು ಒಂದು ದಿನ ಬಾಕಿ ಉಳಿದಿದೆ. ಅವರ ಕನಸಿನ ಕೂಸು, ಬಹು ನಿರೀಕ್ಷಿತ 'ರಿಪಬ್ಲಿಕ್ ಟಿವಿ' ಇದೇ ಶನಿವಾರ ಮನೆ ಮನೆಗಳನ್ನು ತಲುಪಲಿದೆ.

ಟೈಮ್ಸ್ ನೌ ಮಾಜಿ ಸಂಪಾದಕ ಅರ್ನಬ್ ಗೋಸ್ವಾಮಿ ಟ್ವಿಟ್ಟರಿನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಕಾಯಲು ಸಾಧ್ಯವಿಲ್ಲ ಶನಿವಾರ 10 ಗಂಟೆಗೆ ನಿಮ್ಮ ಜತೆ ಮಾತನಾಡುತ್ತೇನೆ ಎಂದು ಅವರು ಟ್ವಿಟ್ಟರಿನಲ್ಲಿ ಹೇಳಿದ್ದಾರೆ.

ರಿಪಬ್ಲಿಕ್ ಅಲೆ

ಚಾನಲ್ ಆರಂಭವಾಗುವುದಕ್ಕೂ ಮೊದಲೇ ಚಾನಲ್ ಹೊಸ ಅಲೆ ಹುಟ್ಟುಹಾಕಿದೆ. ಮೈಕ್ರೋಸಾಫ್ಟ್, ಅನುಪಮ್ ಖೇರ್ ರಂಥವರ ಜತೆ ಸೇರಿ ಅರ್ನಬ್ ಈ ಚಾನಲ್ ಹೊರ ತರುತ್ತಿದ್ದಾರೆ.

ಭಾರೀ ಪ್ರಚಾರ

ತೆರೆಗೆ ಬರುವ ಮೊದಲೇ ಚಾನಲ್ ಭಾರೀ ಪ್ರಚಾರ ನಡೆಸಿದೆ. ವಿಡಿಯೋ, ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದು ಸಾಮಾಜಿಕ ಜಾಣತಾಣಗಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ.

ರಾಷ್ಟ್ರೀಯತೆಯೇ ಮಂತ್ರ

ತನ್ನ ಪ್ರಚಾರ ಸಮಾಗ್ರಿಗಳಲ್ಲಿ ರಿಪಬ್ಲಿಕ್ ಟಿವಿ ರಾಷ್ಟ್ರೀಯತೆ ಮಂತ್ರವನ್ನೇ ಜಪಿಸಿದೆ. ಇದರ ಜತೆಗೆ ಭಾರತದಲ್ಲಿ ಚರ್ಚೆ ಹುಟ್ಟು ಹಾಕಿರುವ ವಿಷಯಗಳ ಕುರಿತು ಅರ್ನಬ್ ಗೋಸ್ವಾಮಿ ಪತ್ರ ಬರೆಯುವ ವಿಡಿಯೋಗಳನ್ನೂ ಚಾನಲ್ ಬಿಡುಗಡೆ ಮಾಡಿದೆ.

ತಡವಾಗಿ ತೆರೆಗೆ

ತಡವಾಗಿ ತೆರೆಗೆ

ಅಂದುಕೊಂಡಂತೆ ಆಗಿದ್ದರೆ ಚಾನಲ್ ಜನವರಿಯಲ್ಲೇ ಟಿವಿ ಪರದೆ ಮೇಲೆ ಬರಬೇಕಾಗಿತ್ತು. ಆದರೆ ಇದೀಗ ತಡವಾಗಿ ಶನಿವಾರ ಚಾನಲ್ ಬಿಡುಗಡೆಯಾಗುತ್ತಿದೆ. ಚಾನಲಿಗೆ ಹೂಡಿಕೆ ಮಾಡಿದವರ ಸುತ್ತಾ ವಿವಾದಗಳು ಅಪಸ್ವರಗಳು ಕೇಳಿ ಬರುತ್ತಿದೆ. ಇದರ ಮಧ್ಯೆಯೇ ಚಾನಲ್ ಲಾಂಚ್ ಆಗುತ್ತಿದೆ.

ಉದ್ಘಾಟನೆ ಕಮಲ್ ಹಾಸನ್

ಚಾನಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಭಾಗವಹಿಸಲಿದ್ದಾರೆ. ರಿಪಬ್ಲಿಕ್ ಟಿವಿಯ ಧ್ವನಿಯಾಗಿದ್ದಕ್ಕೆ ಧನ್ಯವಾದಗಳು ಎಂದು ಕಮಲ್ ಹಾಸನ್ ಕುರಿತು ರಿಪಬ್ಲಿಕ್ ಟಿವಿ ಟ್ವೀಟ್ ಮಾಡಿದೆ.

English summary
Firebrand journalist Arnab Goswami is all set to make a comeback on television screens. His much-anticipated media venture Republic TV will be launched on Saturday, May 6. The former Editor in Chief of Times Now took to Twitter to announce his comeback on television.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X