ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನನ್ನು ಸೇನೆಯೇ ಬದುಕಿಸಿತು: ಭಯೋತ್ಪಾದಕ ಪಶ್ಚಾತ್ತಾಪದ ನುಡಿ

|
Google Oneindia Kannada News

ನವದೆಹಲಿ, ಮೇ 10: "ಭಾರತೀಯ ಸೈನಿಕರು ನನ್ನನ್ನು ಸುಲಭವಾಗಿ ಸಾಯಿಸಬಹುದಿತ್ತು. ಆದರೆ ಅವರು ನನ್ನ ಪ್ರಾಣವನ್ನು ಉಳಿಸಿದರು" ಎಂದು ಬಂಧಿತ ಲಷ್ಕರ್ ಇ ತೊಯ್ಬಾ ಸಂಘಟನೆಯ ಭಯೋತ್ಪಾದಕನೊಬ್ಬ ಹೇಳಿದ್ದಾನೆ.

ಇತ್ತೀಚೆಗೆ ಕಾಶ್ಮೀರದಲ್ಲಿ ಬಂಧಿಸಿದ ಐಜಾಜ್ ಗುರ್ಜಿ ಎಂಬ ಭಯೋತ್ಪಾದಕನ ತಪ್ಪೊಪ್ಪಿಗೆ ವಿಡಿಯೋವನ್ನು ಭಾರತೀ ಸೇನೆ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಆತನ ಹಲವು ಆಘಾತಕಾರಿ ಸತ್ಯಗಳನ್ನು ಬಯಲಿಗೆಳೆದಿದ್ದಾನೆ.

ಮೂವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆಮೂವರು ಭಯೋತ್ಪಾದಕರನ್ನು ಸದೆಬಡಿದ ಭಾರತೀಯ ಸೇನೆ

"ನಮಗೆ ಕಾಶ್ಮೀರಿ ಕಣಿವೆಯಲ್ಲಿ ಹಿಂಸೆ ಎಬ್ಬಿಸುವಂತೆ ಪಾಕಿಸ್ತಾನಿಯರು ಆದೇಶಿಸಿದ್ದರು. ಸೇನೆ ಎಂಮದಿಗೂ ಮುಗ್ಧರ ಹತ್ಯೆ ಮಾಡುತ್ತದೆ ಎಂದು ನಮ್ಮ ತಲೆ ತಿರುಗಿಸಿದ್ದರು. ಈ ಪಿತೂರಿಗಳೆಲ್ಲವೂ ನಡೆಯುತ್ತಿದ್ದುದು ಪಾಕಿಸ್ತಾನದಲ್ಲಿ" ಎಂಬ ಸತ್ಯವನ್ನು ಗುರ್ಜಿ ಬಯಲಿಗೆಳೆದಿದ್ದಾನೆ.

Army saved my life: confessions of a terrorist

ತನ್ನ ಜೊತೆಗಿದ್ದ ಇತರ ಭಯೋತ್ಪಾದಕರ ಬಗ್ಗೆ ಈ ವಿಡಿಯೋದಲ್ಲಿ ಮಾತನಾಡಿರುವ ಗುರ್ಜಿ, "ಅವರು ತಪ್ಪು ಹಾದಿಯಲ್ಲಿದ್ದಾರೆ. ಕಾಡಿನಲ್ಲಿ ಬದುಕುತ್ತಿದ್ದಾರೆ, ತಮ್ಮ ತಂದೆ-ತಾಯಿಯನ್ನು ನೋಡುವುದಕ್ಕಾದರೂ ಅವರೆಲ್ಲ ಹಿಂದಿರುಗಿ ಬರಬೇಕು" ಎಂದು ಅವರು ಹೇಳಿದ್ದಾರೆ.

'ನನ್ನ ಸ್ನೇಹಿತ ನಾಸಿರ್ ಅಮಿನ್ ಬಳಿ ನಾನು ಮನವಿ ಮಾಡಿಕೊಳ್ಳುತ್ತೇನೆ. ನಿನ್ನ ತಾಯಿ ತೀವ್ರ ಅನಾರೊಗ್ಯದಿಂದ ಬಳಲುತ್ತಿದ್ದಾರೆ. ದಯವಿಟ್ಟು ಹಿಂತಿರುಗಿ ಬಾ" ಎಂದು ಮನವಿ ಮಾಡಿಕೊಂಡಿದ್ದಾನೆ.

English summary
A Lashkar-e-Taiba (LeT) terrorist, who was recently arrested by Baramulla police following the killing of three civilians on April 30, has said that the Army could have killed him, but instead, army men saved his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X