ಗಣರಾಜ್ಯೋತ್ಸವ ಪರೇಡ್‌ಗೆ ಸೈನಿಕರ ಅವಿಶ್ರಾಂತಿ ತಯಾರಿ
ನವದೆಹಲಿ, ಜ. 17: ಈ ಬಾರಿಯ ಭಾರತೀಯ ಗಣರಾಜ್ಯೋತ್ಸವ ಇಡೀ ಜಗತ್ತನ್ನು ಆಕರ್ಷಿಸಿದೆ. ಏಕೆಂದರೆ ಜಗತ್ತಿನ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಒಬಾಮಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಆದ್ದರಿಂದ ಭದ್ರತೆಯ ಜೊತೆಗೆ ದೇಶದ ಸಾಮರ್ಥ್ಯ ಹಾಗೂ ಸಂಸ್ಕೃತಿಯನ್ನು ಅನಾವರಣಗೊಳಿಸಲು ವಿವಿಧ ಕಲಾವಿದರು ಹಾಗೂ ಸೈನಿಕರು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ.
ಸೈನಿಕರು ಪರೇಡ್‌ಗೆ ನಡೆಸುತ್ತಿರುವ ತಯಾರಿ ಕುರಿತು ಕೆಲವು ಚಿತ್ರಗಳು ಇಲ್ಲಿವೆ.

ನಾವೂ ಯಾರ್ಗೂ ಕಮ್ಮಿ ಇಲ್ಲ
ಗಣರಾಜ್ಯೋತ್ಸವದಂದು ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಪರೇಡ್‌ಗೆ ಪೂರ್ವ ತಯಾರಿ ನಡೆಸಿದ ಭಾರತೀಯ ಭೂ ದಳದ ಮಹಿಳಾ ಸೈನಿಕರು.

ಸಲಾಮಿ ಶಸ್ತ್ರ
ಭಾರತೀಯ ವಾಯು ದಳದ ಸೈನಿಕರು ಅಹಮದಾಬಾದ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಭಂಗಿ.

ಸೈನಿಕರ ಶಿಸ್ತು
ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ನಡೆಸುವ ಪರೇಡ್‌ಗೆ ರಾಜಪಥದಲ್ಲಿ ಪೂರ್ವ ತಯಾರಿ ನಡೆಸಿದ ಭಾರತೀಯ ಭೂ ದಳದ ಸೈನಿಕರು.

ಸೈನಿಕರ ಶಿಸ್ತು
ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭ ನಡೆಸುವ ಪರೇಡ್‌ಗೆ ರಾಜಪಥದಲ್ಲಿ ಪೂರ್ವ ತಯಾರಿ ನಡೆಸಿದ ಭಾರತೀಯ ಭೂ ದಳದ ಸೈನಿಕರು.

ತಯಾರಿ ನಡುವೆ ಕೊಂಚ ವಿಶ್ರಾಂತಿ
ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಂದರ್ಭ ನಡೆಸುವ ಪರೇಡ್‌ಗೆ ರಾಜಪಥದಲ್ಲಿ ಪೂರ್ವ ತಯಾರಿ ನಡೆಸಿದ ಭಾರತೀಯ ಭೂ ದಳದ ಸೈನಿಕರು ವಿಶ್ರಮಿಸಿಕೊಂಡಿದ್ದು ಹೀಗೆ.

ಸೈನಿಕರ ಜೊತೆ ವಾದ್ಯಕ್ಕೂ ವಿಶ್ರಾಂತಿ
ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಂದರ್ಭ ನಡೆಸುವ ಪರೇಡ್‌ಗೆ ರಾಜಪಥದಲ್ಲಿ ಪೂರ್ವ ತಯಾರಿ ನಡೆಸಿದ ಭಾರತೀಯ ಭೂ ದಳದ ಸೈನಿಕರು ವಿಶ್ರಮಿಸಿಕೊಳ್ಳುವಾಗ ವಾದ್ಯಗಳನ್ನು ಜೋಡಿಸಿಟ್ಟಿದ್ದು ಹೀಗೆ.












Click it and Unblock the Notifications