ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ-ಚೀನಾ ಒಟ್ಟಿಗೆ ದಾಳಿ ಮಾಡಿದರೂ ನಾವು ಯುದ್ಧಕ್ಕೆ ಸಿದ್ಧ: ರಾವತ್

|
Google Oneindia Kannada News

ನವದೆಹಲಿ, ಜೂನ್ 8: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಯುದ್ಧದ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಸೇನಾ ಸಾಮರ್ಥ್ಯ ಎಂಥದ್ದು ಎಂದು ಕೂಡ ಹೇಳಿದ್ದಾರೆ. ಅಷ್ಟಕ್ಕೂ ರಾವತ್ ಅವರು ಹೇಳಿದ್ದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಪಾಕಿಸ್ತಾನ-ಚೀನಾ ಎರಡೂ ಸೇರಿ ಒಟ್ಟಿಗೆ ಯುದ್ಧಕ್ಕೆ ಇಳಿದರೂ, ಯಾವುದೇ ಬೆದರಿಕೆ ಹಾಗೂ ಆಂತರಿಕ ಭದ್ರತೆಗೆ ಸವಾಲೆನಿಸುವ ಯುದ್ಧವನ್ನು ಎದುರಿಸುವುದಕ್ಕೆ ಭಾರತೀಯ ಸೇನೆ ಸಿದ್ಧವಿದೆ ಎಂದು ಅವರು ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಾಶ್ಮೀರದಲ್ಲಿನ ಬಿಕ್ಕಟ್ಟು ಸದ್ಯದಲ್ಲೇ ಶಮನ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ತಾನವು ಯುವಕರಿಗೆ ತಪ್ಪು ಸಂದೇಶ ಕಳುಹಿಸುತ್ತಿದೆ. ಇನ್ನು ಭಯೋತ್ಪಾದನಾ ಸಂಘಟನೆಗಳಿಗೆ ಸೇರಿದ ಯುವಕರಿಗೆ ಜಮ್ಮು-ಕಾಶ್ಮೀರದಲ್ಲಿರುವ ಸ್ಥಳೀಯರೇ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.[ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ವರು ನುಸುಳುಕೋರರ ಹತ್ಯೆ]

bipin rawat

ಇತ್ತೀಚೆಗೆ ಪಾಕ್ ನಿಂದ ಗಡಿ ನಿಯಂತ್ರಣ ರೇಖೆಯ ಬಳಿ ಅಪ್ರಚೋದಿತ ದಾಳಿ ಹೆಚ್ಚಾಗಿದೆ. ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತದೆ. ಅದೇ ರೀತಿ ಕಾಶ್ಮೀರದೊಳಕ್ಕೆ ಉಗ್ರರು ಒಳ ನುಸುಳುವ ಪ್ರಮಾಣ ಕೂಡ ಹೆಚ್ಚಾಗಿದ್ದು, ಅದನ್ನು ತಡೆಯುವ ಯತ್ನದಲ್ಲಿ ಭಾರತೀಯ ಯೋಧರು ಹುತಾತ್ಮರಾಗುತ್ತಿದ್ದಾರೆ.

English summary
“Indian Army is fully ready for a two and a half front war," General Bipin Rawat said in an interview to news agency ANI which was released on Thursday referring to China, Pakistan and the internal security threats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X