• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅರುಣಾಚಲ ಪ್ರದೇಶದಲ್ಲಿ 111 ಜನರ ರಕ್ಷಣೆ ಮಾಡಿದ ಯೋಧರು

|

ಅರುಣಾಚಲ ಪ್ರದೇಶದಲ್ಲಿ 111 ಜನರನ್ನು ಯೋಧರು ರಕ್ಷಣೆ ಮಾಡಿದ್ದಾರೆ. 14 ಸಾವಿರ ಅಡಿ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡ ನಾಗರಿಕರನ್ನು ಪಾರು ಮಾಡಿದ್ದಾರೆ. ಈ ಘಟನೆ ಶನಿವಾರ ನಡೆದಿದೆ.

ಎರಡು ತಂಡಗಳಾಗಿ ಯೋಧರು ರಕ್ಷಣಾ ಕಾರ್ಯವನ್ನು ನಡೆಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೂಡ ಈ ಕಾರ್ಯದಲ್ಲಿ ಭಾಗಿಯಾಗಿತ್ತು. 111 ಜನರು, 70 ವಾಹನಗಳು ಸೇಲ ಪಾಸ್ ನಲ್ಲಿ ಹಿಮಾ ಬಿದ್ದು ಸಿಕ್ಕಿಹಾಕಿಕೊಂಡಿತ್ತು. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಇದ್ದರು.

ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ಕ್ಯಾತೆ

ಸೇಲ ಪಾಸ್ ಭಾರತ ಮತ್ತು ಚೀನಾ ಗಡಿಯ ಸಮೀಪದಲ್ಲಿ ಇರುವ ಪ್ರದೇಶವಾಗಿದೆ. ಜೀರೋ ಡಿಗ್ರಿ ಸೆಲ್ಷಿಯಸ್ ನಲ್ಲಿ ಈ ಸ್ಥಳ ಇದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಚಳಿಗಾಲದಲ್ಲಿ ಹೆಚ್ಚು ಹಿಮಾ ಬಿದ್ದು ಈ ರೀತಿಯ ಘಟನೆ ಪ್ರತಿ ವರ್ಷ ನಡೆಯುತ್ತದೆ.

ಅಂದಹಾಗೆ, ಅಪಾಯದಿಂದ ತಮ್ಮನ್ನು ರಕ್ಷಣೆ ಮಾಡಿದ ಯೋಧರ ಶ್ರಮಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ದೇವರೇ ನಮ್ಮನ್ನು ರಕ್ಷಿಸಲು ಇವರನ್ನು ಕಳುಹಿಸಿದ್ದಾರೆ ಎಂದು ಸಂತಸಗೊಂಡಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಯೋಧರಿಗೆ ಆಹಾರ, ಟೀ ವ್ಯವಸ್ಥೆಯನ್ನು ಅಲ್ಲಿನ ಸ್ಥಳಿಯರು ಹಾಗೂ ಪ್ರವಾಸಿಗರು ಮಾಡಿದ್ದಾರೆ.

ಅರುಣಾಚಲ ಪ್ರದೇಶದ ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ

ಘಟನೆಯ ಬಗ್ಗೆ ನಿಗವಹಿಸಿ, ಅಲ್ಲಿನ ವಿವರಗಳನ್ನು ಪಡೆದುಕೊಳ್ಳುತ್ತಿದ್ದ ಅರುಣಾಚಲ ಪ್ರದೇಶ ಸರ್ಕಾರ ಯೋಧರ ಕಾರ್ಯಕ್ರಮಕ್ಕೆ ಮೆಚ್ಚಿಕೊಂಡಿದೆ.

English summary
Army personnel rescued 111 people and 70 vehicles In Arunachal Pradesh stranded in Sela Pass.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X