ರಾಜಸ್ಥಾನ: ಅರ್ಜುನ್ ರಾಮ್ ಮೇಘವಾಲ್ ಭ್ರಷ್ಟ, ಸಂಪುಟದಿಂದ ತೆಗೆಯಲು ಕೈಲಾಶ್ ಮೇಘವಾಲ್ ಆಗ್ರಹ

ಬೆಂಗಳೂರು, ಆಗಸ್ಟ್ 30: ರಾಜಸ್ಥಾನ ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ ಮೂರು ತಿಂಗಳ ಬಾಕಿ ಇರುವಾಗಲೇ ಬಿಜೆಪಿ ಹಿರಿಯ ನಾಯಕರ ಮಾಜಿ ಸಭಾಪತಿ ಕೈಲಾಶ್ ಮೇಘವಾಲ್ ಹಾಗೂ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಅರ್ಜುನ್ ರಾಮ್ ಮೇಘವಾಲ್ ಅವರು "ನಂಬರ್ ಒನ್ ಭ್ರಷ್ಟ ಎಂದು ಕೈಲಾಶ್ ಅವರು ಆರೋಪಿಸಿದ್ದಾರೆ. ಈ ಸಂಬಂಧ ಪ್ರಧಾನಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.

ಭ್ರಷ್ಟ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ವಿಲೇವಾರಿ ಆಗುವವರಿಗೆ ಅವರನ್ನು ಸಂಪುಟದಿಂದ ತೆಗೆದುಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಕೈಲಾಶ್ ಅವರು ತಿಳಿಸಿದರು.

Arjun Ram Meghwal Corrupt Number One, Remove from central ministry: Urge Kailash Meghwal

ಇತ್ತೀಚೆಗೆ ಕೈಲಾಶ್ ಮೇಘವಾಲ್ (89) ಅವರು ಪಕ್ಷದಿಂದ ಹೊರಗುಳಿಯುವ ಹಲವು ನಡೆಯನ್ನು ಪ್ರದರ್ಶಿಸಿದ್ದಾರೆ. 2019 ರಲ್ಲಿ ರಚನೆಯಾದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು 15 ನೇ ರಾಜ್ಯ ಅಸೆಂಬ್ಲಿಯ ಉದ್ಘಾಟನಾ ಅಧಿವೇಶನಕ್ಕೆ ಕರೆಯುವ ವೇಳೆ ನಿಯಮಗಳನ್ನು ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದರು.

ಪಕ್ಷದ ವಿರುದ್ಧದ ನಡೆ

ಇನ್ನೂ ಜನವರಿ 2020 ರಲ್ಲಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಬಹಿಷ್ಕರಿಸಿದ್ದಾಗಲೂ ಸಹ ಇದೇ ಕೈಲಾಶ್ ಮೇಘವಾಲ್ ಅವರು ಸದನದಲ್ಲೇ ಕುಳಿತಿದ್ದರು, ಪಕ್ಷದ ನಿರ್ಣಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು. ಅಂದಿನ ವಿರೋಧ ಪಕ್ಷದ ನಾಯಕ (ಲೋಪಿ) ಗುಲಾಬ್ ಚಂದ್ ಕಟಾರಿಯಾ ಹಾಗೂ ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ವಾದಕ್ಕೆ ಇಳಿದಿದ್ದರು. ಪಕ್ಷವನ್ನು ಕೆಲವು ವಿಚಾರಗಳಲ್ಲಿ ಅವರು ಬೆಂಬಲಿಸಲಿಲ್ಲ.

2020ರ ಮಧ್ಯದಲ್ಲಿ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿತ್ತು. ಮೇಘವಾಲ್ ಅವರು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಪಾಳಯದಲ್ಲಿ ಬೃಹತ್ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಸಿಎಂ ಗೆಹ್ಲೋಟ್ ರಾಜೇ ಅವರ ರಕ್ಷಣೆಗೆ ಬದ್ಧವಾಗಿದ್ದರು. ಇತ್ತ ಮೇಘವಾಲ್ ಅವರು ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಗೆಹ್ಲೋಟ್ ನೇತೃತ್ವದ ಸರ್ಕಾರ ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪವು ಕೇಳಿ ಬಂದಿತ್ತು.

Arjun Ram Meghwal Corrupt Number One, Remove from central ministry: Urge Kailash Meghwal

ಗೆಹ್ಲೋಟ್ ನೇತೃತ್ವದ ಸರ್ಕಾರ ಕೆಡವಲು ಯತ್ನ

ಬಳಿಕ 2021 ರಲ್ಲಿ ಕೈಲಾಶ್ ಅವರು ಬಿಜೆಪಿ ಶಾಸಕಾಂಗ ಪಕ್ಷದ ನಾಯಕತ್ವದ ಮೇಲೆ ದಾಳಿ ನಡೆಸಿದರು. ಪಕ್ಷದ ಹಲವಾರು ಹಿರಿಯ ಶಾಸಕರನ್ನು ಕಡೆಗಣನೆ ಆಗುತ್ತಿದೆ ಎಂದು ಆಪಾದಿಸಿದರು. ಈ ವರ್ಷದ ಮೇ ತಿಂಗಳಲ್ಲಿ, ಸಿಎಂ ಗೆಹ್ಲೋಟ್ ರಾಜೇ, ಮೇಘವಾಲ್ ಮತ್ತು ಶಾಸಕಿ ಶೋಭಾರಾಣಿ ಕುಶ್ವಾಹ್ ಅವರು ಸರ್ಕಾರ ಕೆಡವಲು ಯತ್ನಿಸಿದವರ ಬೆಂಬಲಿದೇ ರಕ್ಷಣೆಗೆ ನಿಂತಿದ್ದಕ್ಕೆ ಅಭಿನಂದಿಸಿದರು.

06 ದಶಕಗಳ ಕಾಲದ ರಾಜಕೀಯದಲ್ಲಿ ಸಕ್ರಿಯವಾಗಿರುವ ದಲಿತ ನಾಯಕ ಮೇಘವಾಲ್ ಅವರು ಕೇಂದ್ರ ರಾಜ್ಯ ಸಚಿವ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಮೂರು ಬಾರಿ ಲೋಕಸಭಾ ಸಂಸದ ಮತ್ತು ಆರು ಅವಧಿಯ ಶಾಸಕರಾಗಿ ಸೇವೆ ನೀಡಿದ್ದಾರೆ. 1960ರ ಆರಂಭಿಕ ಜೀವನದಲ್ಲಿ ಅವರು ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಜತೆ ಗುರುತಿಸಿಕೊಂಡಿದ್ದರು. ನಂತರ ಬಿಜೆಪಿ ಸೇರಿದರು.

ಕೈಲಾಶ್ ಮೇಘವಾಲ್ ರಾಜಕೀಯ ಅನುಭವ

ಇಂದಿರಾಗಾಂದಿ ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಮೇಘವಾಲ್ ಅವರು ಸುಮಾರು 19 ತಿಂಗಳುಗಳ ಕಾಲ ಮೇಘವಾಲ್ ಸೆರೆವಾಸ ಅನುಭವಿಸಿದ್ದರು. 1977 ರಲ್ಲಿ ರಾಜ್‌ಸಮಂದ್‌ನಿಂದ ಶಾಸಕರಾಗಿ ಆಯ್ಕೆಯಾದರು. ನಂತರ ಅವರು ನಾಲ್ಕು ಇಲಾಖೆಗಳ ಉಸ್ತುವಾರಿ ಸಚಿವರಾಗಿ, ಸಚಿವರಾಗಿ ಸೇವೆ ನೀಡಿದ ಅನುಭವ ಹೊಂದಿದ್ದಾರೆ.

2013 ರಲ್ಲಿ ಶಾಹಪುರದಿಂದ ಶಾಸಕರಾದರೂ. ನಂತರದ ವರ್ಷ 2014 ರಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದರು. 2018ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.

ಸದ್ಯ ಬಿಜೆಪಿಯ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾದ ಅರ್ಜುನ್ ರಾಮ್ ಮೇಘವಾಲ್ ಅವರ ಮುಂದಿನ ರಾಜಕೀಯ ಹಿತದೃಷ್ಟಿಯಿಂದ ಮಾಜಿ ಸ್ಪೀಕರ್ ಕೈಲಾಶ್ ಮೇಘವಾಲ್ ಅವರು ದಾಳಿ ನಡೆಸಿದ್ದಾರೆ ಅಂತಲೂ ಆರೋಪಗಳು ಕೇಳಿ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+