ಪರೀಕ್ಷೆ ಮುಗಿಸಿ ಸಾಗರಕ್ಕಿಳಿದ ಭಾರತದ ಅರಿಹಂತ್‌, ವೈರಿಗಳಿಗೆ ನಡುಕ

ನವದೆಹಲಿ, ನವೆಂಬರ್ 05: ಪರೀಕ್ಷಾರ್ಥ ಸುತ್ತಾಟ ಮುಗಿಸಿದ ಭಾರತದ ಶಕ್ತಿಶಾಲಿ ಸಬ್‌ ಮರೀನ್‌ ಅರಿಹಂತ್ ಇಂದು ಅಧಿಕೃತವಾಗಿ ಸಮುದ್ರಕ್ಕಿಳಿದಿದೆ.

ದೀಪಾವಳಿ ವಿಶೇಷ ಪುರವಣಿ

ಭಾರಿ ಶಸ್ತ್ರಾಸ್ತ್ರ ಗಸ್ತು ತಂತ್ರಜ್ಞಾನ, ಪರಮಾಣು ತಂತ್ರಜ್ಞಾನಗಳನ್ನು ತನ್ನೊಳಗೆ ಹೊಂದಿರುವ ಅರಿಹಂತ್‌ ಭಾರತದ ನೌಕಾ ಪಡೆ ಹಾಗೂ ಭೂ ಪಡೆಗೆ ಭಾರಿ ಬಲವನ್ನು ನೀಡಲಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ಐಎನ್​ಎಸ್​​​ಅನ್ನ ದೇಶಕ್ಕೆ ಸಮರ್ಪಣೆ ಮಾಡುತ್ತಿದ್ದೇವೆ. ಅರಿಹಂತ್​​ ಅದರ ಅರ್ಥ ಶತ್ರುಗಳನ್ನ ನಾಶ ಮಾಡೋದು. ಈ ಮೂಲಕ ಭಾರತೀಯರ ರಕ್ಷಣೆಗೆ ಐಎನ್​ಎಸ್​ ಅರಿಹಂತ್ ಬದ್ಧವಾಗಿದೆ. ಇದರ ಸೇವೆ ದೇಶಕ್ಕೆ ಸಾಕಷ್ಟಿದೆ. ಇದರ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದಿದ್ದಾರೆ.

Arihant Submarine set to take charge of Indian defence

ರಾಷ್ಟ್ರದ ಭದ್ರತೆ ವಿಚಾರದಲ್ಲಿ ಅರಿಹಂತ್‌ನ ಯಶಸ್ಸು ದೊಡ್ಡ ಹೆಜ್ಜೆಯಾಗಿದೆ. ದೇಶದ ಶತ್ರುಗಳಿಗೆ ಇದೊಂದು ಬಹಿರಂಗ ಸವಾಲಾಗಿದೆ. ಇದೊಂದು ಮಹತ್ವದ ಮೈಲುಗಲ್ಲಾಗಿದೆ ಎಂದು ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ಅರಿಹಂತ್‌ ಭಾರತದ ರಕ್ಷಣೆಗೆ ಬಲ ಒದಗಿಸಲಿದೆ. ದೇಶದ ವೈರಿಗಳಿಗೆ ಎಚ್ಚರಿಕೆ ನೀಡಲಿದೆ ಎಂದಿದ್ದಾರೆ. ಅರಿಹಂತ್ ಯಶಸ್ವಿಯಾಗಲು ಕಾರಣರಾದವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+