'ಮೋದಿ ಆಗ್ಬೇಡಿ' ಬಿಜೆಪಿ ವಿಡಿಯೋ ಹಂಚಿದ 'ದಿವ್ಯಸ್ಪಂದನ'
ನವದೆಹಲಿ, ಏಪ್ರಿಲ್ 01: ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರ ಹೆಸರಿನಲ್ಲಿರುವ ಫೇಸ್ ಬುಕ್ ಮತ್ತಿತ್ತರ ಸಾಮಾಜಿಕ ಜಾಲ ತಾಣ ಖಾತೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಇತ್ತೀಚೆಗೆ ದೂರು ನೀಡಿದ್ದ ಕಾಂಗ್ರೆಸ್ ಸಾಮಾಜಿಕ ಜಾಲ ತಾಣಗಳ ಮುಖ್ಯಸ್ಥೆ ರಮ್ಯಾ ಅವರು ಇಂದು ಏಪ್ರಿಲ್ ಫೂಲ್ ದಿನದಂದು ಬಿಜೆಪಿ ವಿಡಿಯೋ ಹಂಚಿಕೊಂಡು ಗೇಲಿ ಮಾಡಿದ್ದಾರೆ.
It’s April 1st Mitron. #ModiMatBanao https://t.co/Ywmx1tVD0J
— Divya Spandana/Ramya (@divyaspandana) April 1, 2019
ಪ್ರಧಾನಿ ನರೇಂದ್ರ ಮೋದಿ ಅವರ 'ನ್ಯೂ ಇಂಡಿಯಾ' ವಿಡಿಯೋವನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ಹಂಚಿಕೊಂಡಿತ್ತು. ಇದಕ್ಕೆ ಟಾಂಗ್ ಕೊಟ್ಟ ದಿವ್ಯಸ್ಪಂದನ, 'ಇಂದು ಏಪ್ರಿಲ್ 1 ಮಿತ್ರರೇ, ಮೋದಿ ಆಗಬೇಡಿ #ModiMatBanao ಎಂದು ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮೂರ್ಖರ ದಿನದಂದು ಕಾಂಗ್ರೆಸ್ ಹಾಗೂ ಬಿಜೆಪಿ ಟ್ವಿಟ್ಟರ್ ಕಾದಾಟ, ಟ್ರಾಲ್, ಮೀಮ್ಸ್, ಕಾಲೆಳೆದಾಟ ಮಾಮೂಲಿ. ಪಪ್ಪು ದಿವಸ್ ಎಂದು ಟ್ರೆಂಡಿಂಗ್ ಮಾಡಲಾಗಿತ್ತು. ಆಗ 30,000 ಕ್ಕೂ ಅಧಿಕ ಟ್ವೀಟ್ ಗಳು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಬಂದಿತ್ತು.

ಈಗ 2019ರ ಬಿಜೆಪಿ ಚುನಾವಣೆ ಪ್ರಣಾಳಿಕೆಯನ್ನು ಗೇಲಿ ಮಾಡಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಹೊರಡಿಸಿದೆ. ನಿರುದ್ಯೋಗ, ಅಪನಗದೀಕರಣ, ಭ್ರಷ್ಟಾಚಾರ ಮುಂತಾದ ವಿಷಯಗಳನ್ನು ಉಲ್ಲೇಖಿಸಿ ಮೋದಿ ಅವರನ್ನು ಗುರಿಯನ್ನಾಗಿಸಿದೆ. ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ.












Click it and Unblock the Notifications