ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರದಿಂದ ಈ ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯ

|
Google Oneindia Kannada News

ನವದೆಹಲಿ, ಏಪ್ರಿಲ್ 30; ದೇಶದಲ್ಲಿ ಮೇ 1ರ ಶನಿವಾರದಿಂದ 18 ರಿಂದ 44 ವರ್ಷದೊಳಗಿನ ಜನರಿಗೆ ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ನೀಡಲಾಗುತ್ತದೆ. ಹಲವು ರಾಜ್ಯಗಳು ಶನಿವಾರದಿಂದ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿವೆ.

ಅಪೋಲೋ ಮತ್ತು ಮ್ಯಾಕ್ಸ್‌ ಆಸ್ಪತ್ರೆಗಳು ಶನಿವಾರದಿಂದ ಲಸಿಕೆಯನ್ನು ನೀಡುತ್ತೇವೆ ಎಂದು ಶುಕ್ರವಾರ ಘೋಷಣೆ ಮಾಡಿವೆ. ನೋಂದಣಿ ಮಾಡಿಸಿಕೊಂಡವರು ಈ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಪಡೆಯಬಹುದಾಗಿದೆ.

ಭಾರತದಲ್ಲಿ 15.22 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ಭಾರತದಲ್ಲಿ 15.22 ಕೋಟಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ

"ದೇಶದಲ್ಲಿ ಕೋವಿಡ್ 2ನೇ ಅಲೆಯ ಕಾರಣದಿಂದಾಗಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಅಪೋಲೋ ಆಸ್ಪತ್ರೆ ಶನಿವಾರದಿಂದ ಲಸಿಕೆ ನೀಡಲು ತಯಾರಿ ಮಾಡಿಕೊಂಡಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಲಸಿಕಾ ತಯಾರಿಕಾ ಕಂಪನಿಗಳಿಂದ ನೇರವಾಗಿ ಲಸಿಕೆ ಖರೀದಿ ಮಾಡಲಾಗುತ್ತದೆ" ಎಂದು ಆಸ್ಪತ್ರೆ ಹೇಳಿದೆ.

ತೆಲಂಗಾಣದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ಡ್ರೋನ್ ಬಳಕೆ ತೆಲಂಗಾಣದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ಡ್ರೋನ್ ಬಳಕೆ

 Apollo And Max Hospitals To Start Vaccinating For 18 To 44 From May 1

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಶನಿವಾರದಿಂದ ಲಸಿಕೆ ನೀಡಲು ಸಾಧ್ಯವಿಲ್ಲ. ನಮ್ಮಲ್ಲಿ ಲಸಿಕೆಯ ಸಂಗ್ರಹವಿಲ್ಲ ಎಂದು ಹೇಳಿವೆ. ಆದರೆ, ಖಾಸಗಿ ಆಸ್ಪತ್ರೆಗಳು ನೇರವಾಗಿ ಕಂಪನಿಗಳಿಂದ ಖರೀದಿ ಮಾಡಿ ನೀಡಲಿವೆ. ಅಪೋಲೋ ಕೋವಿಶೀಲ್ಡ್‌ ಲಸಿಕೆ ನೀಡುವುದಾಗಿ ತಿಳಿಸಿದೆ.

ರಾಜ್ಯಗಳಿಗೆ ಸಿಹಿ ಸುದ್ದಿ; ಕೊವ್ಯಾಕ್ಸಿನ್ ಲಸಿಕೆ ಬೆಲೆ ಇಳಿಕೆರಾಜ್ಯಗಳಿಗೆ ಸಿಹಿ ಸುದ್ದಿ; ಕೊವ್ಯಾಕ್ಸಿನ್ ಲಸಿಕೆ ಬೆಲೆ ಇಳಿಕೆ

ಖಾಸಗಿ ಆಸ್ಪತ್ರೆಗಳು ಸೆರಮ್ ಇನ್ಸಿಟಿಟ್ಯೂಟ್ ಲಸಿಕೆಯನ್ನು ಪಡೆಯಲು ಪ್ರತಿ ಡೋಸ್‌ಗೆ 600 ರೂ.ಗಳನ್ನು ಪಾವತಿ ಮಾಡಬೇಕು. ಭಾರತ್ ಬಯೋಟೆಕ್ ಲಸಿಕೆಯನ್ನು ಪಡೆಯಲು ಪ್ರತಿ ಡೋಸ್‌ಗೆ 1,200 ರೂ. ಪಾವತಿ ಮಾಡಬೇಕಿದೆ.

ಎರಡೂ ಲಸಿಕಾ ತಯಾರಿಕಾ ಕಂಪನಿಗಳು ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ದರವನ್ನು ಕಡಿತಗೊಳಿಸಿವೆ. ಹಲವು ರಾಜ್ಯಗಳು ಈಗಾಗಲೇ ಲಸಿಕೆಗಾಗಿ ಬೇಡಿಕೆ ಸಲ್ಲಿಸಿವೆ. ಆದರೆ, ಮೇ 1ರಂದು ರಾಜ್ಯಗಳಿಗೆ ಲಸಿಕೆ ಸಿಗುವುದಿಲ್ಲ.

English summary
Apollo and Max hospitals announced that they will start vaccinating for 18 to 44 across the country from May 1. Apollo will use Covishield.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X