ಆಂಧ್ರಪ್ರದೇಶ: ನೆಲ್ಲೂರು ರೈಲ್ವೇ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ನೆಲ್ಲೂರು(ಆಂಧ್ರಪ್ರದೇಶ), ನವೆಂಬರ್ 6: ಆಂಧ್ರಪ್ರದೇಶದ ನೆಲ್ಲೂರು ರೈಲ್ವೆ ನಿಲ್ದಾಣದಲ್ಲಿ ಗರ್ಭಿಣಿಯೋರ್ವರು ಮಗುವಿಗೆ ಜನ್ಮ ನೀಡಿದ ಘಟನೆ ನವೆಂಬರ್ 5 ರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ವಿವೇಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ತನ್ನ ಪತಿ ಪಾಶಾ ಗೋಶಾನ್ ಜೊತೆ ಪ್ರಯಾಣಿಸುತ್ತಿದ್ದ ಸುಷ್ಮಾ ಗೋಶಾನ್(20) ಇದ್ದಕ್ಕಿದ್ದಂತೆ ಹೆರಿಗೆ ನೋವಿನಿಂದ ಬಳಲತೊಡಗಿದರು. ನಂತರ ನೆಲ್ಲೂರು ರೈಲ್ವೇ ನಿಲ್ದಾಣದಲ್ಲಿ ಸಹಪ್ರಯಾಣಿಕರೆಲ್ಲ ಸೇರಿ ಅವರಿಗೆ ಹೆರಿಗೆ ಮಾಡಿಸಲು ಯಶಸ್ವಿಯಾದರು.

ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆಯೇ ತುರ್ತು ನಿಗಾ ಅಂಬುಲೆನ್ಸ್ ಅನ್ನು ಕರೆತರಲಾಗಿತ್ತಾದರೂ ಅಂಬುಲೆನ್ಸ್ ಬರುವ ಮೊದಲೇ ಅವರಿಗೆ ಹೆರಿಗೆಯಾಗಿತ್ತು. ನಂತರ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು.












Click it and Unblock the Notifications