ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುರಾಗ್ ತಿವಾರಿ ಸಾಯುವುದಕ್ಕೂ ಮುನ್ನ ಹಲ್ಲೆಗೊಳಗಾಗಿದ್ರು!

ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿಲ್ಲ, ಸಾಯುವುದಕ್ಕೂ ಮುನ್ನ ಹಲ್ಲೆಗೊಳಗಾಗಿದ್ರು ಎಂದು ವಿಧಿವಿಜ್ಞಾನ ಸಂಸ್ಥೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ.

By Mahesh
|
Google Oneindia Kannada News

ಲಕ್ನೋ, ಮೇ 24 : ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿಲ್ಲ, ಸಾಯುವುದಕ್ಕೂ ಮುನ್ನ ಹಲ್ಲೆಗೊಳಗಾಗಿದ್ರು ಎಂದು ವಿಧಿವಿಜ್ಞಾನ ಸಂಸ್ಥೆ ನೀಡಿರುವ ವರದಿಯಲ್ಲಿ ಹೇಳಲಾಗಿದೆ.

ತಿವಾರಿ ಅವರ ಶವ ಪರೀಕ್ಷೆ ವರದಿ ಉತ್ತರಪ್ರದೇಶ ಸರ್ಕಾರಕ್ಕೆ ಸಲ್ಲಿಸಲಾಗಿದೆ. ತಿವಾರಿ ಅವರ ಸಾವು ಸಹಜವಾಗಿಲ್ಲ, ಆಕಸ್ಮಿಕವಾಗಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿಲ್ಲ. ಅವರ ಮೇಲೆ ಹಲ್ಲೆ ನಡೆದಿದೆ ಹಾಗೂ ಶರೀರದ ಕೆಲವು ಭಾಗಗಳಲ್ಲಿ ಗಾಯಗಳಾಗಿವೆ ಎಂದು ಡಾ. ದಿನೇಶ್ ರಾವ್ ಅವರು ವರದಿಯಲ್ಲಿ ಹೇಳಿದ್ದಾರೆ.

Anurag Tiwari Murder case: Death was not accidental, says forensic report

ಐಎಎಸ್ ಅಧಿಕಾರಿ ಸಾವಿಗೂ ಮುನ್ನವೇ ಅವರ ದೇಹದ ಮೇಲೆ ಗಾಯಗಳಾಗಿತ್ತು. ದೇಹದ ಆರು ಕಡೆ, ಮುಖದ ಮೇಲೆ ಮೂರು ಕಡೆ ಗಾಯಗಳಾಗಿವೆ ಎಂಬುದು ಶವ ಪರೀಕ್ಷೆಯಿಂದ ಮೃತಪಟ್ಟಿದೆ. ಅವರ ಸಾವು ಸಹಜವಲ್ಲ. ಹಲ್ಲೆ ಮತ್ತು ಉಸಿರುಗಟ್ಟಿಸಿ ನಡೆಸಿರುವ ಕೊಲೆಯಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ನಡೆಸಿ ವರದಿ ನೀಡಲಿದೆ. ಸಿಬಿಐ ತನಿಖೆಗೆ ಸರ್ಕಾರ ಶಿಫಾರಸು ಮಾಡಿದೆ. ಆದರೆ, ತನಿಖೆ ಇನ್ನೂ ಆರಂಭವಾಗಿಲ್ಲ ಎಂದು ಉತ್ತರಪ್ರದೇಶದ ಗೃಹ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ.

English summary
Karnataka IAS officer Anurag Tiwari's death was not accidental. According to a report, Forensic Expert Dr. Dinesh Rao, said injuries on the body of Anurag Tiwari indicated that the death was not accidental, but clearly a result of an assault.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X