Get Updates
Get notified of breaking news, exclusive insights, and must-see stories!

Sachin Pilot: ರಾಜಸ್ಥಾನ ಸರ್ಕಾರದ ವಿರುದ್ದ ಪೈಲಟ್ ಧರಣಿ, ಪಕ್ಷ ವಿರೋಧಿ ಚಟುವಟಿಕೆ ಎಂದ ಕಾಂಗ್ರೆಸ್

ನವದೆಹಲಿ, ಏಪ್ರಿಲ್ 11: ಬಿಜೆಪಿ ನಡೆಸಿದ್ದ ಭ್ರಷ್ಟಾಚಾರ ಪ್ರಕರಣದ ತನಿಖೆಯಲ್ಲಿ ರಾಜಸ್ಥಾನ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ವಿಫಲವಾಗಿದ್ದಾರೆ ಎಂದು ಆರೋಪಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದವರಿಗೆ ಕಾಂಗ್ರೆಸ್‌ ತಾಕೀತು ಮಾಡಿದೆ.

ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ಏಪ್ರಿಲ್ 11 ರಂದು ಒಂದು ದಿನದ ಉಪವಾಸವನ್ನು ನಡೆಸುವುದಾಗಿ ಘೋಷಿಸಿದರು. ಅದರಂತೆ ನಡೆದುಕೊಂಡ ಪೈಲಟ್ ಅವರ ನಡೆಯನ್ನು ಪಕ್ಷ ವಿರೋಧಿ ಎಂದು ಕಾಂಗ್ರೆಸ್ ಕರೆದಿದೆ. ಅಲ್ಲದೇ ಈ ಸಂಬಂಧ ಶಾಂತವಾಗಿರುವಂತೆ, ಪಕ್ಷ ವಿರುದ್ಧ ಮಾತನಾಡದಂತೆಯೂ ಎಚ್ಚರಿಕೆ ನೀಡಿದೆ.

Anti Party Activity By Sachin Pilot On Hunger Strike Against Rajasthan Govt: Congress Appeals To Calm

ಪೈಲಟ್ ಅವರದ್ದು 'ಪಕ್ಷ ವಿರೋಧಿ ಚಟುವಟಿಕೆ': ಕಾಂಗ್ರೆಸ್

ಸಚಿನ್‌ ಪೈಲಟ್‌ ಅವರು ನಡೆಸುತ್ತಿರುವ ಅಹೋರಾತ್ರಿ ಉಪವಾಸವನ್ನು ಕಾಂಗ್ರೆಸ್‌ ಸೋಮವಾರ 'ಪಕ್ಷ ವಿರೋಧಿ ಚಟುವಟಿಕೆ' ಎಂದು ಕಾಂಗ್ರೆಸ್ ಕರೆದಿದೆ. ರಾಜಸ್ಥಾನದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ನಡೆದ ಭ್ರಷ್ಟಾಚಾರದ ಪ್ರಕರಣಗಳ ತನಿಖೆಯಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಸಚಿನ್ ಪೈಲಟ್ ಆರೋಪಿಸಿದ್ದರು. ಈ ಸಂಬಂಧ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಪಕ್ಷ ವಿರೋಧಿಯಾಗಿ ಮಾತನಾಡುವುದು, ಉಪವಾಸದಂತಹ ಉದ್ದೇಶಿತ ಧರಣಿಗೆ ರಾಜಸ್ಥಾನ ರಾಜ್ಯದ ಕಾಂಗ್ರೆಸ್ ಉಸ್ತುವಾರಿಯಾದ ಸುಖಜಿಂದರ್ ರಾಂಧವಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಚಿನ್ ಪೈಲಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ವಪಕ್ಷದ ವಿರುದ್ಧ ಧ್ವನಿ ಎತ್ತುವಾಗ ಆಲೋಚಿಸಬೇಕು. ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಹೋಗುವ ಬದಲಾಗಿ ಸಮಸ್ಯೆಯ ಬಗ್ಗೆ ಪಕ್ಷದ ನಾಯಕರಲ್ಲಿ ಸಮಾಲೋಚಿಸಬಹುದಿತ್ತು ಎಂದು ಅವರು ತಿಳಿಸಿದ್ದಾರೆ.

Anti Party Activity By Sachin Pilot On Hunger Strike Against Rajasthan Govt: Congress Appeals To Calm

ಪಕ್ಷದೊಳಗೆ ಸಮಸ್ಯೆ ಬಗೆಹರಿಸಿಕೊಳ್ಳಿ: ರಾಂಧವ ಸಲಹೆ

ಸಚಿನ್ ಪೈಲಟ್ ಅವರ ಇಂದಿನ ಅಹೋರಾತ್ರಿ ಉಪವಾಸ ಪಕ್ಷದ ಹಿತಾಸಕ್ತಿಗೆ ವಿರುದ್ಧದ ನಡೆಯಾಗಿದೆ. ಅಲ್ಲದೇ ಇದು (ಕಾಂಗ್ರೆಸ್) ಪಕ್ಷ ವಿರೋಧಿ ಚಟುವಟಿಕೆಯಾಗಿದೆ. ಅವರದೇ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇದ್ದರೆ ಅದನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರ ಬದಲಿಗೆ ಪಕ್ಷದ ವೇದಿಕೆಗಳಲ್ಲಿ ಚರ್ಚಿಸಬಹುದು ಎಂದು ರಾಂಧವ ಸಲಹೆ ನೀಡಿದರು.

ರಾಜಸ್ಥಾನದ ರಾಜ್ಯ ಉಸ್ತುವಾರಿ ಸಚಿವರಾಗಿ ನಾಣು ಐದಾರು ತಿಂಗಳು ಕಳೆದಿದ್ದೇನೆ. ಆದರೆ ಸದರಿ ಸಮಸ್ಯೆ, ಸರ್ಕಾರ ವಿಫಲತೆ ಎನ್ನುತ್ತಿರುವ ಅವರು ತಮ್ಮೊಂದಿಗೆ ಒಮ್ಮೆಯೂ ಚರ್ಚಿಸಿಲ್ಲ ಎಂದು ಹೇಳಿದರು. ಏನೆ ಆದರೂ ಇದು ನಮ್ಮ ಪಕ್ಷದ ವಿಚಾರವಾಗಿದ್ದರಿಂದ ಪೈಲಟ್‌ ಅವರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಅವರನ್ನು ಉಪವಾಸ ಕೈ ಬಿಡುವುದಾಗಿ ಕೋರುವುದಾಗಿ ಅವರು ಹೇಳಿದರು.

ಸಚಿನ್ ಪೈಲಟ್‌ ಅವರು ಆರೋಪವೇನು?

ಮೂಲಗಳ ಪ್ರಕಾರ, ರಾಜಸ್ಥಾನದಲ್ಲಿ 2018 ರಲ್ಲಿಕಾಂಗ್ರೆಸ್ ಸರ್ಕಾರ ರಚಿನೆ ಮಾಡಿದಾಗಿನಿಂದಲೂ ಈ ಮುಖ್ಯಮಂತ್ರಿ ಹುದ್ದೆ ಕುರಿತು ಅಶೋಕ್ ಗೆಹ್ಲೋಟ್ ಅವರೊಂದಿಗೆ ಸಚಿನ ಪೈಲಟ್ ಭಿನ್ನಾಭಿಪ್ರಾಯ ಹೊಂದಿದ್ದರು ಎನ್ನಲಾಗಿದೆ. ಈ ಕಾರಣದಿಂಲೇ ಅವರು ಅವರ ತಪ್ಪು ಎತ್ತಿ ಹಿಡಿದು ದಿನವಿಡೀ ಉಪವಾಸವನ್ನು ಮುಂದುವರೆಸುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಹಿಂದಿನ ವಸುಂಧರಾ ರಾಜೇ ಸರ್ಕಾರದ ಭ್ರಷ್ಟಾಚಾರದ ಕುರಿತು ಗೆಹ್ಲೋಟ್ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ವಿರೋಧ ಪಕ್ಷದಲ್ಲಿದ್ದಾಗ ನಾವು 45,000 ಕೋಟಿ ರೂ.ಗಳ ಗಣಿ ಹಗರಣದ ತನಿಖೆಗೆ ಭರವಸೆ ನೀಡಿದ್ದೆವು. ಆದರೆ ನೀಡಿದ ಭರವಸೆ ಈಡೇರಿಸಲಾಗುತ್ತಿಲ್ಲ. 2022ರ ಮಾರ್ಚ್ 28 ಹಾಗೂ ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದರೂ ಅವರಿಂದ ಉತ್ತರ ಬಂದಿಲ್ಲ ಎಂದು ಸಚಿವ ಪೈಲಟ್‌ ಉಪವಾಸ ಸತ್ಯಾಗ್ರಹಕ್ಕೂ ಮುನ್ನ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+