ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಹೆಣ್ಣು ಚೀತಾ 'ದಕ್ಷ' ಸಾವು: 40 ದಿನಗಳಲ್ಲಿ ಮೂರನೇ ಸಾವು
ಆಫ್ರಿಕಾದಿಂದ ಭಾರತಕ್ಕೆ ಸ್ಥಳಾಂತರಗೊಂಡ ಮತ್ತೊಂದು ಚಿರತೆ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಮಂಗಳವಾರ ವರದಿ ಮಾಡಿದೆ, 40 ದಿನಗಳ ಅಂತರದಲ್ಲಿ ಇಲ್ಲಿ ಮೂರನೇ ಚೀತಾ ಮೃತಪಟ್ಟಿದೆ.
"ಮಂಗಳವಾರ ಬೆಳಿಗ್ಗೆ ಗಾಯಗೊಂಡ ಸ್ಥಿತಿಯಲ್ಲಿ ದಕ್ಷಾ ಪತ್ತೆಯಾಗಿದೆ ಎಂದು ಕೆಎನ್‌ಪಿಯ ಮೇಲ್ವಿಚಾರಣಾ ತಂಡ ತಿಳಿಸಿದೆ. ತಕ್ಷಣವೇ ಆಕೆಗೆ ಅಗತ್ಯವಾದ ಚಿಕಿತ್ಸೆ ಮತ್ತು ಔಷಧಿ ನೀಡಿದರೂ, ಯಾವುದೂ ಫಲ ನೀಡಿಲ್ಲ. ಮಧ್ಯಾಹ್ನ 12 ಗಂಟೆ ವೇಳೆಗೆ ಆಕೆ ಸಾವನ್ನಪ್ಪಿದ್ದಾಳೆ" ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.

"ದಕ್ಷಳನ್ನು ಮೊದಲನೇ ನಂಬರ್ ನ ಆವರಣದಲ್ಲಿ ಬಿಡುಗಡೆ ಮಾಡಲಾಗಿತ್ತು, ಎರಡು ಗಂಡು ಚಿರತೆಗಳಾದ ವಾಯು ಮತ್ತು ಅಗ್ನಿಯನ್ನು ಸಂಯೋಗಕ್ಕಾಗಿ ಬಿಡುಗಡೆ ಮಾತಲಾಯಿತು, ಆದರೆ ಈ ವೇಳೆ ಗಂಡು ಚೀತಾಗಳು ಹಿಂಸಾತ್ಮಕವಾಗಿ ವರ್ತಿಸಿದ್ದರಿಂದ ಹೆಣ್ಣು ಚಿರತೆ ಗಾಯಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಚೀತಾಗಳಲ್ಲಿ ಇದು ಸಾಮಾನ್ಯ ಎಂದು" ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾದ ವರ್ಷದ ಚಿರತೆ 'ಉದಯ್' ಹೃದಯಾಘಾತದಿಂದ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ದಕ್ಷ ಕೂಡ ಸಾವನ್ನಪ್ಪಿದೆ. 70 ವರ್ಷಗಳ ಹಿಂದೆ ದೇಶದಿಂದ ಕಣ್ಮರೆಯಾದ ಪ್ರಭೇದಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಯ ಆರಂಭಿಕ ಹಂತದಲ್ಲಿ ಸೆಪ್ಟೆಂಬರ್ ಮತ್ತು ಫೆಬ್ರವರಿಯಲ್ಲಿ ಒಟ್ಟು 20 ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕೂ ಮುನ್ನ ಒಂದು ಹೆಣ್ಣು ಚಿರತೆ ಮತ್ತು ಒಂದು ಗಂಡು ಚಿರತೆ ಕ್ರಮವಾಗಿ ಮಾರ್ಚ್ 27 ಮತ್ತು ಏಪ್ರಿಲ್ 23 ರಂದು ಸಾವನ್ನಪ್ಪಿದ್ದವು.
ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ಹೆಚ್ಚಿಸುವ ಸರ್ಕಾರದ ಆಸೆಗೆ ಇದು ಸಾಕಷ್ಟು ಹಿನ್ನಡೆಯುಂಟು ಮಾಡಿತ್ತು. ಆದರೆ ಉಳಿದ ಚೀತಾಗಳು ಆರೋಗ್ಯದಿಂದ ಇವೆ ಎಂದು ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. "ಇತರ ಚಿರತೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಿದೆ ಮತ್ತು ಅವುಗಳಲ್ಲಿ ಯಾವುದೂ ಯಾವುದೇ ರೀತಿಯ ರೋಗಲಕ್ಷಣಗಳನ್ನು ತೋರಿಸಿಲ್ಲ" ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications