ರೋಮ್ ಹೊತ್ತಿ ಉರಿಯುತ್ತಿದ್ದಾಗ ನಿರೋ ಪಿಟೀಲು ನುಡಿಸುತ್ತಿದ್ದನಂತೆ: ಎಂಕೆ ಸ್ಟಾಲಿನ್ ಟೀಕಿಸಿದ ಅಣ್ಣಾಮಲೈ
ಚೆನ್ನೈ, ಡಿಸೆಂಬರ್ 19: ತಮಿಳುನಾಡಿನಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೂ ಸಿಎಂ ಎಂಕೆ ಸ್ಟಾಲಿನ್ ಅವರು ದೆಹಲಿಯಲ್ಲಿ ನಡೆಯುವ ಇಂಡಿಯಾ ಬಣದ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟೀಕಿಸಿದ್ದಾರೆ. ಇದಕ್ಕೆ ರೋಮ್ ಹತ್ತಿ ಹುರಿಯುತ್ತಿರುವಾಗ ನಿರೋ ಪಿಟೀಲು ನುಡಿಸುತ್ತಿದ್ದನಂತೆ ಎಂದು ವ್ಯಂಗ್ಯವಾಡಿದ್ದಾರೆ.
ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಜನರಿಗೆ ಪರಿಹಾರವನ್ನು ಒದಗಿಸಲು ಸ್ಥಳದಲ್ಲೇ ನಿಗಾ ವಹಿಸುವ ಬದಲು ಸಿಎಂ ಸ್ಟಾಲಿನ್ ಇಂಡಿಯಾ ಒಕ್ಕೂಟದ ಸಭೆಗೆ ಹಾಜರಾಗಲು ಮುಂದಾಗಿದ್ದಾರೆ. ಇದು ರೋಮ್ ಸುಟ್ಟುಹೋದಾಗ ನೀರೋ ಪಿಟೀಲು ನುಡಿಸಿದರು ಎಂಬ ಪ್ರಸಿದ್ಧ ಮಾತು ಎಂಕೆ ಸ್ಟಾಲಿನ್ ಅವರ ನಡೆಗೆ ಸೂಕ್ತವಾಗಿದೆ ಎಂದು ಅಣ್ಣಾಮಲೈ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಟಾಲಿನ್ ದೆಹಲಿಗೆ ಹೋಗಬೇಕಾಗಿರುವ ತನ್ನ ನೈಜ ಕಾರ್ಯಸೂಚಿಯಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಧಾನಿಗೆ ಅಪಾಯಿಂಟ್‌ಮೆಂಟ್ ಕೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸ್ಟಾಲಿನ್ ದೆಹಲಿಯಲ್ಲಿರುವುದರಿಂದ ನಮ್ಮ ಗೌರವಾನ್ವಿತ ಪ್ರಧಾನಿಯವರೊಂದಿಗೆ ಭೇಟಿ ಅವಕಾಶ ಪಡೆಯಲು ನಿರ್ಧರಿಸಿದ್ದಾರೆ, ಇದು ಅವರ ನಿಜವಾದ ಪ್ರಯಾಣದ ಅಜೆಂಡಾದಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಕೊನೆಯ ಕ್ಷಣದ ಪ್ರಯತ್ನವಾಗಿದೆ ಎಂದು ಅಣ್ಣಾಮಲೈ ಹೇಳಿದರು.
The CM of TN, who is expected to monitor and be on the ground to facilitate relief for the people affected by flood in the Southern districts of TN, is busy attending I.N.D.I. Alliance meeting in Delhi.
— K.Annamalai (@annamalai_k) December 19, 2023
The famous saying “Nero played a Fiddle while Rome burnt” comes to life with…
ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ತಮಿಳು ಚಲನಚಿತ್ರ ನಿರ್ದೇಶಕರೊಬ್ಬರೊಂದಿಗೆ ತಿರುನಲ್ವೇಲಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದಾರೆ.
ಸಿಎಂ ಅವರ ಮಗ ಉದಯನಿಧಿ ಸಿಎಂ ಪರವಾಗಿ ನಿಯೋಜಿತರಾಗಿದ್ದಾರೆ. ಅವರು ಚಲನಚಿತ್ರ ನಿರ್ದೇಶಕರೊಂದಿಗೆ ಪ್ರವಾಹ ಪರಿಸ್ಥಿತಿ ಮೇಲ್ವಿಚಾರಣೆ ಮಾಡಲು ಇಲ್ಲಿಗೆ ಬಂದಿದ್ದಾರೆ. 26/11 ರ ಸಮಯದಲ್ಲಿ ಶೂಟಿಂಗ್ ಮತ್ತು ಬಾಂಬ್ ಸ್ಫೋಟಗಳು ನಡೆಯುತ್ತಿದ್ದಾಗ ಒಬೆರಾಯ್ ಹೋಟೆಲ್‌ನ ಹೊರಗೆ ಚಲನಚಿತ್ರ ನಿರ್ಮಾಪಕರನ್ನು ಕರೆತಂದ ಮಹಾರಾಷ್ಟ್ರದ ಮಾಜಿ ಸಿಎಂಗೆ ಇದು ಹೋಲುತ್ತದೆ. ರಾಜ್ಯ ಸರ್ಕಾರದ ಪರಿಹಾರವು ತಮಿಳುನಾಡಿನ ಜನರಿಗೆ ದೂರದ ಕನಸಿನಂತೆ ತೋರುತ್ತದೆ ಎಂದು ಅಣ್ಣಾಮಲೈ ಹೇಳಿದರು.
ಇಂಡಿಯಾ ಸಭೆಯಲ್ಲಿ ಸ್ಟಾಲಿನ್ ಭಾಗಿ:
ಮಂಗಳವಾರ ಡಿಸೆಂಬರ್ 19 ರಂದು ದೆಹಲಿಯಲ್ಲಿ ನಡೆಯಲಿರುವ ಇಂಡಿಯಾ ಬಣದ ಸಭೆಗಾಗಿ ತಮಿಳುನಾಡು ಸಿಎಂ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ದೆಹಲಿ ತಲುಪಿದ್ದಾರೆ. ಸ್ಟಾಲಿನ್ ಅವರು ಸೋಮವಾರ ದೆಹಲಿಯಲ್ಲೇ ದಕ್ಷಿಣ ತಮಿಳುನಾಡಿನಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಿದರು.
ಮುಖ್ಯ ಕಾರ್ಯದರ್ಶಿ ಶಿವದಾಸ್ ಮೀನಾ, ಮೇಲ್ವಿಚಾರಣಾ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಇಂದು ಬೆಳಿಗ್ಗೆ ನಿರ್ಣಾಯಕ ಇಂಡಿಯಾ ಬಣದ ಸಭೆಗೆ ಮುಂಚಿತವಾಗಿ ಸ್ಟಾಲಿನ್ ಅವರು ದೆಹಲಿ ಸಿಎಂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು.












Click it and Unblock the Notifications