ಲೋಕ್ ಪಾಲ್ ವಿಳಂಬ, ಹೋರಾಟದ ಎಚ್ಚರಿಕೆ ನೀಡಿದ ಅಣ್ಣ ಹಜಾರೆ
ನವದೆಹಲಿ, ಆಗಸ್ಟ್ 30 : ಜನಲೋಕ್ ಪಾಲ್ ಮಸೂದೆಯನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರ ವಿರುದ್ಧ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮತ್ತೆ ಹೋರಾಟದ ಹಾದಿ ತುಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಲೋಕ್ ಪಾಲ್ ಮಸೂದೆ ಜಾರಿ ಮಾಡುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಜಾರಿ ಮಾಡದೇ ಇದ್ದರೇ ಮತ್ತೆ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಲೋಕಪಾಲ್ ನೇಮಕ ವಿಚಾರದಲ್ಲಿ ನಿರಾಸಕ್ತಿ ತೋರಿರುವ ಮೋದಿ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಪತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಭಷ್ಟ್ರಾಚಾರ ಮುಕ್ತ ಭಾರತ ನಿರ್ಮಿಸುವ ಉದ್ದೇಶದಿಂದ ಐತಿಹಾಸಿಕ ಚಳವಳಿ ನಡೆದು 6 ವರ್ಷ ಕಳೆದಿವೆ. ಆದರೆ, ಭಷ್ಟ್ರಾಚಾರಕ್ಕೆ ಮುಕ್ತಿಗೆ ಒಂದು ನಿರ್ದಿಷ್ಟವಾದ ಕಾನೂನಿನ ಕರಡು ಸಿದ್ಧಪಡಿಸಿಲ್ಲ ಎಂದು ಪತ್ರದಲ್ಲಿ ಅಣ್ಣಾ ಹಜಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕ್ ಪಾಲ್ ಹಾಗೂ ಲೋಕಾಯುಕ್ತ ನೇಮಕದ ಬಗ್ಗೆ 3 ವರ್ಷಗಳಿಂದ ನಾನು ನಿಮ್ಮ ಸರ್ಕಾರಕ್ಕೆ ನೆನಪಿಸುತ್ತಲೇ ಇದ್ದೇನೆ. ಆದರೆ, ನೀವು ನನ್ನ ಪತ್ರಗಳಿಗೆ ಸ್ಪಂಧಿಸಿಲ್ಲವವೆಂದು ಅಣ್ಣ ಹಜಾರೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications