Get Updates
Get notified of breaking news, exclusive insights, and must-see stories!

Tirumala Darshana: ತಿರುಮಲ ಶ್ರೀವಾರಿಯ ಭಕ್ತರಿಗೆ ಸಿಹಿ ಸುದ್ದಿ.. ಈ ಟೋಕನ್‌ ತೆಗೆದುಕೊಂಡರೆ ದರ್ಶನ ಸುಲಭ, ಸಮಯ ಉಳಿತಾಯ

ಕಲಿಯುಗದ ಜೀವಂತ ದೇವರು ತಿಮ್ಮಪ್ಪನ ದರ್ಶನ್ ಪಡೆಯಲು ತಿರುಮಲಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಹೀಗಾಗಿ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಟಿಟಿಡಿ ಸದಾ ಶ್ರಮಿಸುತ್ತಿದೆ. ಆದರೆ ದಟ್ಟಣೆಯ ಸಮಯದಲ್ಲಿ ಭಕ್ತರು ಶ್ರೀವಾರಿ ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾಗುತ್ತದೆ.

ಈ ಸಮಯವನ್ನು ಕಡಿಮೆ ಮಾಡಲು ಟಿಟಿಡಿ ಕ್ರಮಗಳನ್ನು ಪ್ರಾರಂಭಿಸಿದೆ. ಟಿಟಿಡಿ ಇಒ ಶ್ಯಾಮಲಾ ರಾವ್ ಅವರು ಟಿಟಿಡಿ ಆಡಳಿತ ಭವನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ನೌಕರರನ್ನು ಉದ್ದೇಶಿಸಿ ಮಾತನಾಡಿದರು.

Andhra pradesh tirupati ttd eo comments on tirumala darshan ssd tokens

ತಿರುಮಲ ಶ್ರೀಗಳ ದರ್ಶನಕ್ಕೆ ವಿಶ್ವದೆಲ್ಲೆಡೆಯಿಂದ ಆಗಮಿಸುವ ಭಕ್ತರಿಗೆ ಉತ್ತಮ ಸೇವೆ ನೀಡಲು ಶ್ರಮಿಸುತ್ತಿದ್ದೇವೆ. ಟಿಟಿಡಿಯ ಆಡಳಿತದಲ್ಲಿರುವ ಎಲ್ಲ ದೇವಾಲಯಗಳಲ್ಲಿ ತಜ್ಞರ ಸಲಹೆ ಮೇರೆಗೆ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದರು.

ಸಾಮಾನ್ಯ ಭಕ್ತರ ದರ್ಶನದ ಸಮಯವನ್ನು ಹೆಚ್ಚಿಸಲು ಜುಲೈ 22 ರಿಂದ ಕೇವಲ ಒಂದು ಸಾವಿರ ಶ್ರೀವಾರಿ ಟಿಕೆಟ್‌ಗಳನ್ನು ಆಫ್‌ಲೈನ್‌ನಲ್ಲಿ ನೀಡಲಾಗುತ್ತಿದೆ. ಶ್ರೀವಾರಿ ದಾನಿಗಳಿಗೆ ತಿರುಮಲ ಗೋಕುಲಂ ವಿಶ್ರಾಂತಿ ಗೃಹದಲ್ಲಿ 900 ಟಿಕೆಟ್‌ಗಳನ್ನು ನೀಡಲಾಗುತ್ತಿದ್ದು, ಉಳಿದ 100 ಟಿಕೆಟ್‌ಗಳನ್ನು ವಿಮಾನ ನಿಲ್ದಾಣದ ಕರೆಂಟ್ ಬುಕ್ಕಿಂಗ್ ಕೌಂಟರ್‌ನಲ್ಲಿ ನೀಡಲಾಗುತ್ತಿದೆ ಎಂದು ವಿವರಿಸಿದರು.

Andhra pradesh tirupati ttd eo comments on tirumala darshan ssd tokens

ಸರತಿ ಸಾಲಿನಲ್ಲಿ ಭಕ್ತರು ಕಾಯುವ ಸಮಯವನ್ನು ಕಡಿಮೆ ಮಾಡಲು ಈ ಹಿಂದೆ ವಾರಕ್ಕೆ 1.05 ಲಕ್ಷ ಎಸ್‌ಎಸ್‌ಡಿ ಟೋಕನ್ ನೀಡುತ್ತಿದ್ದರು. ಆದರೆ ಈಗ 1.59 ಲಕ್ಷ ಟೋಕನ್ ನೀಡುತ್ತಿದ್ದಾರೆ ಎಂದು ಟಿಟಿಡಿ ಈವೋ ಹೇಳಿದರು. ಇವುಗಳನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಮೂಲಕ ದರ್ಶನಕ್ಕಾಗಿ ಭಕ್ತರ ಕಾಯುವುದನ್ನು ಸಮಯವನ್ನು ಕಡಿಮೆ ಮಾಡಬಹುದು ಎಂದು ಅವರು ವಿವರಿಸಿದ್ದಾರೆ. ಈ ಟೋಕನ್ ಪಡೆಯುವ ಭಕ್ತರಿಗೆ ಸಮಯವನ್ನು ನೀಡಲಾಗುತ್ತದೆ. ಈ ಸಮಯದನುಸಾರ ದೇವಸ್ಥಾನಕ್ಕೆ ಭೇಟಿ ನೀಡಿದರೆ, ಬಹುಬೇಗ ಶ್ರೀವಾರಿ ದರ್ಶನವನ್ನು ಭಕ್ತರು ಪಡೆಯಬಹುದಾಗಿದೆ.

ಗುಣಮಟ್ಟದ ಪ್ರಸಾದ

ಜತೆಗೆ ಗುಣಮಟ್ಟದ ಅಕ್ಕಿ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ಅನ್ನ ಪ್ರಸಾದದ ಗುಣಮಟ್ಟ ಹೆಚ್ಚಿಸಲಾಗುತ್ತಿದೆ. ತಿರುಮಲದಲ್ಲಿ ಕುಡಿಯುವ ನೀರು, ಆಹಾರ ಮತ್ತು ಕಚ್ಚಾ ವಸ್ತುಗಳನ್ನು ನಿಯಮಿತವಾಗಿ ಪರೀಕ್ಷಿಸಲು ಎಫ್‌ಎಸ್‌ಎಸ್‌ಎಐ ಆಶ್ರಯದಲ್ಲಿ ಅತ್ಯಾಧುನಿಕ ಲ್ಯಾಬ್ ಅನ್ನು ಸ್ಥಾಪಿಸಲಾಗುತ್ತಿದೆ. ಭಕ್ತಾದಿಗಳಿಗೆ ಗುಣಮಟ್ಟದ ಊಟ ನೀಡಲು ಹೋಟೆಲ್ ವ್ಯವಸ್ಥಾಪಕರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ನಿರಂತರವಾಗಿ ಕುಡಿಯುವ ನೀರು, ಹಾಲು, ಅನ್ನದಾನ ಮಾಡಲು ಕ್ರಮಕೈಗೊಳ್ಳಲಾಗುತ್ತಿದ್ದು, ಕಾಲಕಾಲಕ್ಕೆ ನೈರ್ಮಲ್ಯ ನಿರ್ವಹಣೆ ಹಾಗೂ ಇತರೆ ಅಂಶಗಳ ಮೇಲ್ವಿಚಾರಣೆಗೆ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಟಿಟಿಡಿ ಇಒ ತಿಳಿಸಿದರು.

ವಸತಿ, ದರ್ಶನ, ಆರ್ಜಿತಸೇವಾ ಟಿಕೆಟ್ ವಿಚಾರದಲ್ಲಿ ಭಕ್ತರನ್ನು ವಂಚಿಸುತ್ತಿರುವ ಹಲವು ದಲ್ಲಾಳಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಟಿಟಿಡಿಯ ಐಟಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಮತ್ತು ಬುಕ್ಕಿಂಗ್, ದರ್ಶನ, ವಸತಿ ಇತ್ಯಾದಿ ದೋಷಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ನವೆಂಬರ್ ತಿಂಗಳ ಸೇವೆಗಳ ಟಿಕೆಟ್ ಬಿಡುಗಡೆ
ತಿರುಮಲ ಶ್ರೀವಾರಿ ನವೆಂಬರ್ ತಿಂಗಳ ಕೋಟಾ ಟಿಕೆಟ್ ಸೋಮವಾರ ಬಿಡುಗಡೆಯಾಗಲಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆನ್‌ಲೈನ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಟಿಕೆಟ್ ಬಿಡುಗಡೆಯಾಗಲಿದೆ. ಎಲೆಕ್ಟ್ರಾನಿಕ್ ಡಿಪ್ ವ್ಯವಸ್ಥೆಯ ಮೂಲಕ ಈ ಟಿಕೆಟ್‌ಗಳನ್ನು ಹಂಚಿಕೆ ಮಾಡಲಾಗುತ್ತದೆ. ಆಗಸ್ಟ್ 19 ರಂದು ಬೆಳಿಗ್ಗೆ 10 ರಿಂದ ಆಗಸ್ಟ್ 21 ರ ಬೆಳಿಗ್ಗೆ 10 ರವರೆಗೆ ಭಕ್ತರು ತಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಟಿಟಿಡಿ ಪ್ರಕಟಿಸಿದೆ. ಆಗಸ್ಟ್ 21ರಂದು ಲಕ್ಕಿ ಡಿಪ್ ನಡೆಯಲಿದ್ದು, ಟಿಕೆಟ್ ಪಡೆದ ಭಕ್ತರು 23ರ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಬೇಕು.

ಇದಲ್ಲದೆ, ಊಂಜಾಲ್ ಸೇವೆ, ಕಲ್ಯಾಣೋತ್ಸವಂ, ಆರ್ಜಿತ ಬ್ರಹ್ಮೋತ್ಸವಂ ಮತ್ತು ಸಹಸ್ರದೀಪಾಲಂಕರ ಸೇವಾ ಟಿಕೆಟ್‌ಗಳನ್ನು ಆಗಸ್ಟ್ 22 ರಂದು ಬೆಳಿಗ್ಗೆ 10 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಪ್ರಕಟಿಸಿದೆ. ಇವುಗಳ ಜೊತೆಗೆ ನವೆಂಬರ್ 9 ರಂದು ನಡೆಯಲಿರುವ ಪುಷ್ಪಯಾಗಂ ಸೇವೆಯ ಟಿಕೆಟ್ ಕೂಡ ಬಿಡುಗಡೆಯಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+