ಚಿತ್ತೂರು: 51 ವರ್ಷದ ಪಾದ್ರಿಯಿಂದ ಬಾಲಕಿ ಅತ್ಯಾಚಾರ

ಆಂಧ್ರ ಪ್ರದೇಶದಲ್ಲಿ 51 ವರ್ಷದ ಪಾದ್ರಿಯಿಂದ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ. ಚಿತ್ತೂರಿನ ರೇಣಿಗುಂಟ ಮಂಡಲದ ಕುರುವಾಕಲುವಾ ಎಂಬ ಹಳ್ಳಿಯಲ್ಲಿ ನಡೆದ ಘಟನೆ.

ಚಿತ್ತೂರು, ಸೆಪ್ಟೆಂಬರ್ 7: ಇಲ್ಲಿನ ಕುರುವಾಕಲುವಾ ಎಂಬ ಹಳ್ಳಿಯಲ್ಲಿ 51 ವರ್ಷದ ಪಾದ್ರಿಯೊಬ್ಬ ಅದೇ ಹಳ್ಳಿಯ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆಂಬ ಆರೋಪ ಕೇಳಿಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪಾದ್ರಿಯನ್ನು ಪನ್ನೀರ್ ಸೆಲ್ವಂ ಎಂದು ಹೇಳಲಾಗಿದ್ದು, ಸೋಮವಾರ ರಾತ್ರಿ (ಸೆಪ್ಟೆಂಬರ್ 4) ಈ ಘಟನೆ ನಡೆದಿದ್ದು ಪ್ರಕರಣದ ತಡವಾಗಿ ಬೆಳಕಿಗೆ ಬಂದಿದೆ.

Andhra Pradesh pastor rapes 12-year-old in chittoor

ಈ ಹಳ್ಳಿಯಲ್ಲಿರುವ ಪುಟ್ಟ ಚರ್ಚ್ ಗೆ ಕೆಲ ಕ್ರೈಸ್ತ ಬಾಂಧವರು ಆಗಮಿಸುತ್ತಿದ್ದರು. ಪ್ರತಿ ಭಾನುವಾರ ಇಲ್ಲಿ ಸಾಮಾನ್ಯ ಪ್ರಾರ್ಥನೆಗಳು ನಡೆಯುತ್ತಿದ್ದವು. ಹಾಗೆಯೇ, ಪ್ರತಿ ದಿನ ಸಂಜೆಯೂ ಪ್ರಾರ್ಥನೆಗಳು ಜರುಗುತ್ತಿದ್ದವು. ಹೀಗೆ ಜನರು ಬಂದು ಹೋಗುತ್ತಿದ್ದಾಗ ಈ ಚರ್ಚ್ ನ ಸುತ್ತ ಮುತ್ತ ಜನಸಂದಣಿ ಕಾಣುತ್ತಿತ್ತೇ ಹೊರತು ಮಿಕ್ಕ ಸಮಯದಲ್ಲಿ ಇಲ್ಲಿ ಯಾರೂ ತಿರುಗಾಡುತ್ತಿರಲಿಲ್ಲ ಎಂದು ಹೇಳಲಾಗಿದೆ.

ಸೋಮವಾರ ರಾತ್ರಿ, ಸುಮಾರು 8 ಗಂಟೆ ಸುಮಾರಿಗೆ ಬಾಲಕಿಯು ಚರ್ಚ್ ಬಳಿಯಿಂದ ಹಾದು ಹೋಗುವಾಗ ಈಕೆ ಬಲವಂತಪಡಿಸಿರುವ ಪಾದ್ರಿಯು ಈಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+