ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಇಂದು ಆಂಧ್ರಪ್ರದೇಶ ಬಂದ್
ವಿಜಯವಾಡ, ಏಪ್ರಿಲ್ 16: ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಇಂದು(ಏ.16) ಆಂಧ್ರ ಬಂದ್ ಗೆ ಕರೆನೀಡಲಾಗಿದೆ. ಆಂಧ್ರಪ್ರದೇಶ ಪ್ರತ್ಯೇಕ ಹೊಡಾ ಸಾಧನ ಸಮಿತಿ ಕರೆದಿರುವ ಈ ಬಂದ್ ಗೆ ಆಂಧ್ರದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಬಂದ್ ಗೆ ವೈ ಎಸ್ ಆರ್ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಬೆಂಬಲ ಸೂಚಿಸಿವೆ. ಆಂಧ್ರ ಬಂದ್ ನಿಮಿತ್ತ ಕರ್ನಾಟಕದಿಂದ ಆಂಧ್ರಕ್ಕೆ ತೆರಳುವ ಬಸ್ಸುಗಳು ಆಂಧ್ರ ಗಡಿಯವರೆಗೆ ಮಾತ್ರ ತೆರಳಲಿವೆ ಎಂದು ಕೆಎಸ್ ಆರ್ ಟಿಸಿ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ) ತಿಳಿಸಿದೆ.
#AndhraPradesh: Statewide bandh called by Andhra Pradesh Pratyeka Hoda Saadhana Samiti over the demand of #SpecialStatus for the state. Opposition parties such as YSR Congress Party, Congress and Left parties have extended support to the bandh. Visuals from Vijayawada. pic.twitter.com/AdF3pfHf2z
— ANI (@ANI) April 16, 2018

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಹಲವು ದಿನಗಳಿಂದ ಎದ್ದಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಎನ್ ಡಿಎ ಮೈತ್ರಿಕೂಟದಿಂದ ಆಂಧ್ರದ ಆಡಳಿತ ಪಕ್ಷವಾದ ಟಿಡಿಪಿ(ತೆಲಗು ದೇಶಂ ಪಕ್ಷ) ಮೈತ್ರಿ ಕಡಿದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications