Anant Ambani wedding: ಕೆಂಪು ಉಡುಗೆಯಲ್ಲಿ ಮಿಂಚಿದ ತಾರೆಯರು
ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಈ ವೇಳೆ ನವ ವಧು ವರರನ್ನು ಆಶೀರ್ವದಿಸಲು ದೇಶ ವಿದೇಶದಿಂದ ಗಣ್ಯರು ಬಂದಿದ್ದಾರೆ. ಈ ಶುಭ ಸಮಾರಂಭದಲ್ಲಿ ಭಾಗವಹಿಸಿದ್ದ ಹಲವು ಗಣ್ಯರ ಉಡುಗೆಗಳು ರೆಡ್ ಕಲರ್‌ನ್ನಾಗಿದ್ದು ವಿಶೇಷ..
ಈ ವರ್ಣರಂಜಿತ ಸಮಾರಂಭಕ್ಕೆ ಮುಂಬೈನ ಜಿಯೋ ವರ್ಲ್ಡ್ ಸಾಕ್ಷಿಯಾಗಿದೆ. ಈ ಮದುವೆಯಲ್ಲಿ ಭಾಗವಹಿಸಿದ್ದ ತಾರೆಯರು ಭಿನ್ನ ವಿಭಿನ್ನ ಬಟೆಯಲ್ಲಿ ಕಂಗೊಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುತೇಕ ತಾರೆಯರು ಕಡುಗೆಂಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇಶೀಯ ಹಾಗೂ ವಿದೇಶಿ ಅತಿಥಿಗಳು ಕೆಂಪು ಬಣ್ಣದ ಡ್ರೆಸ್ ತೊಟ್ಟಿದ್ದೇ ವಿಶೇಷವಾಗಿತ್ತು.

ಹಿಂದು ಸಂಪ್ರದಾಯದಂತೆ ಶುಭ ಸಮಾರಂಭಗಳಲ್ಲಿ ಕೆಂಪು ಬಣ್ಣದ ಬಟ್ಟೆಗಳನ್ನು ಬಳಸುತ್ತಾರೆ. ಇದರಂತೆ ಅನಂತ್ ಮದುವೆಯ ಸಮಾರಂಭದಲ್ಲಿ ಹೆಚ್ಚಾಗಿ ತಾರೆಯರು ಇದೇ ಪೋಶಾಕಿನಲ್ಲಿ ಕಂಡು ಬಂದರು. ಬಾಲಿವುಡ್ ನಟಿ ಮತ್ತು ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್ ಗಮನ ಸೆಳೆದರು.
ಹೌದು, ಈ ಮದುವೆಗೆ ಐಶ್ವರ್ಯಾ ರೈ ಸ್ಕಾರ್ಲೆಟ್ ಡ್ರೆಸ್ ಆಯ್ಕೆ ಮಾಡಿಕೊಂಡಿದ್ದರು. ಐಶ್ವರ್ಯಾ ರೈ ಕೆಂಪು ಬಣ್ಣದ ಡ್ರೆಸ್‌ನಲ್ಲಿ ಕಾಣಿಸಿಕೊಂಡರು.
ಬರೀ ಐಶ್ವರ್ಯಾ ಅವರು ಅಷ್ಟೇ ಅಲ್ಲಾ ಬಾಲಿವುಡ್ ನಟಿ ಕತ್ರಿನಾ ಸಹ ಕೆಂಪು ಬಣ್ಣದ ಉಡುಗೆಯನ್ನು ತೊಟ್ಟಿದ್ದರು. ವಿಕ್ಕಿ ಕೌಶಲ್ ಜೊತೆ ಕತ್ರಿನಾ ಕೂಡ ಈ ಮದುವೆಗೆ ಎಂಟ್ರಿ ನೀಡಿದರು. ಈ ವೇಳೆ ಎಲ್ಲರ ಕಣ್ಣು ಈ ಜೋಡಿಯ ಮೇಲಿತ್ತು.

ಕತ್ರಿನಾ ಕೆಂಪು ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಕತ್ರಿನಾ ಮಾತ್ರವಲ್ಲದೆ ಆಕೆಯ ಪತಿಯ ಉಡುಗೆಯ ಸಹ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವಂತೆ ಮಾಡಿತು.
ಹಾಲಿವುಡ್ ನಟಿ ಕಿಮ್ ಕಾರ್ಡಶಿಯಾನ್ ಕೂಡ ಭಾಗವಹಿಸಿದ್ದರು. ಈ ಸಮಯದಲ್ಲಿ, ಕಿಮ್ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡರು. ದೇಸಿ ಲುಕ್ ಮಾತ್ರವಲ್ಲದೆ ಕಿಮ್ ಕೆಂಪು ಬಣ್ಣದ ಉಡುಗೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡರು.
ಕಿಮ್ ಅವರು ಸ್ಕಾರ್ಲೆಟ್ ಲೆಹೆಂಗಾದೊಂದಿಗೆ ಡೀಪ್ ನೆಕ್ ಬ್ಲೌಸ್ ಅನ್ನು ಧರಿಸಿದ್ದರು, ಅದರಲ್ಲಿ ಅವರು ತುಂಬಾ ಹಾಟ್ ಆಗಿ ಕಾಣಿಸಿಕೊಂಡರು.

ದೀಪಿಕಾ ಪಡುಕೋಣೆ
ಈ ದಿನಗಳಲ್ಲಿ ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ದೀಪಿಕಾ ಕೆಂಪು ಡ್ರೆಸ್‌ನಲ್ಲಿ ಮದುವೆಗೆ ಆಗಮಿಸಿದರು. ನಟಿಯ ಲುಕ್ ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಾಜಿ ಬ್ರಿಟಿಷ್ ಪ್ರಧಾನಿಯ ಪತ್ನಿ
ಬ್ರಿಟಿಷ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ಅವರ ಪತ್ನಿ ಅನಂತ್ ಮತ್ತು ರಾಧಿಕಾ ಅವರ ವಿವಾಹ ಸಮಾರಂಭದಲ್ಲಿ ಭಾರತೀಯ ಉಡುಗೆಯಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ, ಟೋನಿ ಬ್ಲೇರ್ ಅವರ ಪತ್ನಿ ಶುದ್ಧ ಕೆಂಪು ಉಡುಪನ್ನು ಧರಿಸಿದ್ದರು, ಅದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದರು.












Click it and Unblock the Notifications