• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಮೆಂಟರಿಯೊಂದಿಗೆ ಮಕ್ಕಳ ಕ್ರಿಕೆಟ್: ಬಾಲ್ಯ ನೆನೆದ ಆನಂದ್ ಮಹೀಂದ್ರಾ

|
Google Oneindia Kannada News

ಒಂದಲ್ಲಾ ಒಂದು ವಿಷಯಗಳ ಕುರಿತು ಟ್ವೀಟ್ ಮಾಡುವ ಮೂಲಕ ಉದ್ಯಮಿ ಆನಂದ್ ಮಹೀಂದ್ರಾ ಸದಾ ಟ್ವಿಟ್ಟರ್‌ನಲ್ಲಿ ಸಕ್ರಿಯವಾಗಿದ್ದಾರೆ.

ಹಾಗೆಯೇ ಕಾಮೆಂಟರಿಯೊಂದಿಗೆ ಮಕ್ಕಳು ಕ್ರಿಕೆಟ್ ಆಡುತ್ತಿರುವ ಹಾಗೂ ಟಿವಿ ಮೂಲಕ ಒಂದಷ್ಟು ಮಕ್ಕಳು ಅದನ್ನು ನೋಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಅವರು ಹೇಳಿದ್ದಿಷ್ಟು: ಇದು ಹಳೆಯ ಆದರೆ ಸಾಂಕ್ರಾಮಿಕವು ನಮ್ಮ ಪ್ರತಿಯೊಂದು ಚಟುವಟಿಕೆಗಳನ್ನೂ ಹೇಗೆ ಸ್ಕ್ರೀನ್‌ನೊಳಗೆ ಬಂಧಿಸಲಾಗಿದೆ ಎಂಬುದು ವಿಡಿಯೋ ತೋರಿಸಿದೆ.

ಮಹೀಂದ್ರಾ ಅವರು ಭಾನುವಾರ ರಾತ್ರಿ ಈ ಟ್ವೀಟ್ ಮಾಡಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ 1.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅನೇಕರು ಟ್ವಿಟ್ಟರ್ ಸಂದೇಶದ ಕ್ರಿಯಾಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿರುವುದು ಟಿವಿ ಒಳಗಿಂದ ಕಾಣಿಸುತ್ತಿರುತ್ತದೆ, ಹೊರಗಡೆ ಕುಳಿತ ಮಕ್ಕಳು ಕಾಮೆಂಟರಿ ಹಿನ್ನೆಲೆ ಧ್ವನಿಯೊಂದಿಗೆ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬ್ಯಾಟ್ಸ್‌ಮನ್ ಹೊಡೆದು ಚೆಂಡು ಟಿವಿ ಪರದೆ ದಾಟಿ ಹೊರಗೆ ಕುಳಿತವರ ಬಳಿ ಬರುತ್ತದೆ.

ಇದಾದ ಬಳಿಕ ಟಿವಿ ಒಳಗಿನಿಂದ ಓಡಿ ಬರುವ ಬಾಲಕನೊಬ್ಬ ಹೊರಗೆ ಇರುವವರ ಬಳಿಯಿಂದ ಚೆಂಡನ್ನು ಕೇಳಿ ಪಡೆಯುತ್ತಾರೆ. ಅಂದರೆ, ಸ್ಕ್ರೀನ್ ಇಲ್ಲದ ಟೊಳ್ಳು ಟಿವಿಯೊಂದನ್ನು ಅಲ್ಲಿಇಡಲಾಗಿದ್ದಷ್ಟೇ ಆಚೆ ಬದಿಯಲ್ಲಿ ಮಕ್ಕಳು ನೈಜವಾಗಿ ಕ್ರಿಕೆಟ್ ಆಡುತ್ತಿದ್ದರು.

ಮಕ್ಕಳು ಟಿವಿಯಲ್ಲಿ ಕ್ರಿಕೆಟ್ ನೋಡುವ ದೃಶ್ಯದ ಮೂಲಕ ಈ 19 ಸೆಕೆಂಡಿನ ವಿಡಿಯೋ ಕ್ಲಿಪ್ ಶುರುವಾಗುತ್ತದೆ. ಟಿವಿಯಲ್ಲಿಯೂ ಮಕ್ಕಳು ಕ್ರಿಕೆಟ್ ಆಡುವ ದೃಶ್ಯವನ್ನು ನೋಡಬಹುದಾಗಿದೆ. ಅಷ್ಟರಲ್ಲಿ ಬ್ಯಾಟ್ಸ್‌ಮನ್ ಚೆಂಡನ್ನು ವೇಗವಾಗಿ ಬೀಸುತ್ತಾನೆ.

ಆದರೆ, ವೇಗವಾಗಿ ಬರುವ ಚೆಂಡು ಟಿವಿ ಪರದೆಯಿಂದಲೇ ಹೊರಗೆ ಬರುತ್ತದೆ! ಬರೀ ಅಷ್ಟೇ ಅಲ್ಲ, ಹೀಗೆ ಟಿವಿ ಪರದೆಯಿಂದ ಹೊರಗೆ ಬಂದ ಚೆಂಡನ್ನು ಮಕ್ಕಳು ಕ್ಯಾಚ್ ಹಿಡಿಯುತ್ತಾರೆ. ಇತ್ತ, ಈ ಚೆಂಡನ್ನೇ ಹಿಂಬಾಲಿಸಿಕೊಂಡು ಬಂದ ಬಾಲಕ ಟಿವಿ ವೀಕ್ಷಿಸುತ್ತಿದ್ದ ಹುಡುಗರಲ್ಲಿ ಚೆಂಡನ್ನು ಕೇಳಿ ಪಡೆಯುತ್ತಾನೆ.

ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯ. ಇವರ ಬಹುತೇಕ ಪೋಸ್ಟ್‌ಗಳು ಬಹುಬೇಗ ನೆಟ್ಟಿಗರ ಗಮನ ಸೆಳೆಯುತ್ತವೆ. ಇವುಗಳಲ್ಲಿ ಕೆಲವೊಂದು ದೃಶ್ಯಗಳು ಮೊಗದಲ್ಲಿ ನಗುವುಕ್ಕಿಸುತ್ತವೆ. ಸದ್ಯ ಆನಂದ್ ಮಹೀಂದ್ರಾ ಅವರು ಅಂತಹದ್ದೇ ಇನ್ನೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಹಳೆಯ ವಿಡಿಯೋ. ಆದರೆ, ಈ ವಿಡಿಯೋವನ್ನು ನೆಟ್ಟಿಗರು ಮತ್ತೆ ನೋಡಿ ಖುಷಿಪಡುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ಬೊಲೆರೋ ನೀರಿನಲ್ಲಿ ಸಿಲುಕಿದ್ದ ಕುರಿತು ಟ್ವೀಟ್ ಮಾಡಿದ್ದರು. ಅದರಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ-ಕೆರೆಗಳಂತಾದ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸವಾರರು ಭಾರೀ ಪರಿಪಾಟಿಲು ಅನುಭವಿಸುತ್ತಿದ್ದಾರೆ.

ಅಲ್ಲದೆ, ಈ ರಸ್ತೆಯಲ್ಲಿ ಕೋಟ್ಯಂತರ ರು. ಬೆಲೆಬಾಳುವ ಜಾಗ್ವಾರ್‌ ಕಾರೊಂದು ಮಳೆಯ ನೀರಿನಲ್ಲಿ ಚಲಿಸಲಾಗದ ಸ್ಥಿತಿಯಲ್ಲಿ ನಿಂತಿರುವ ಮತ್ತು ಹೊಂಡದಂತಹ ಇದೇ ರಸ್ತೆಯಲ್ಲಿ ಮಹಿಂದ್ರಾ ಕಂಪನಿಯ ಬೊಲೆರೋ ಕಾರು ಬಾಸ್‌ ರೀತಿ ಸಲೀಸಾಗಿ ಚಲಿಸುತ್ತಿರುವ ಫೋಟೋವೊಂದನ್ನು ಮಹಿಂದ್ರಾ ಕಾರು ಕಂಪನಿ ಮಾಲೀಕ ಆನಂದ್‌ ಮಹೀಂದ್ರಾ ಅವರು ಟ್ವೀಟ್‌ ಮಾಡಿದ್ದರು.

ಅಲ್ಲದೆ, ಇದಕ್ಕೆ ತಾವೇಕೆ ಬೊಲೆಲೋ ಕಾರನ್ನು ಇಷ್ಟಪಡುತ್ತೇನೆ ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದಾರೆ. ಮುಂಬೈ ಪ್ರವಾಹದಲ್ಲಿ ಜಾಗ್ವಾರ್‌ ಕಾರು ಚಲಿಸಲು ಪರದಾಡುತ್ತಿದೆ. ಆದರೆ, ಬೊಲೆರೋ ಬಾಸ್‌ ರೀತಿಯಾಗಿ ಚಲಿಸುತ್ತಿದೆ. ಅಲ್ಲದೆ, ಬೊಲೆರೋ ಕಾರು ಯಾವುದೇ ರೀತಿಯ ರಸ್ತೆಯಲ್ಲೂ ನಿರಾಯಾಸವಾಗಿ ಚಲಿಸುತ್ತದೆ. ಇದಕ್ಕಾಗಿಯೇ ನಾನು ಬೊಲೆರೋ ಕಾರನ್ನೇ ಇಷ್ಟಪಡುತ್ತೇನೆ ಎಂದು ಟ್ವೀಟ್‌ ಮಾಡಿದ್ದರು.

ಇದಕ್ಕೆ ಹಲವು ಟ್ವೀಟಿಗರು ಧ್ವನಿಗೂಡಿಸಿದರೆ, ಮತ್ತೆ ಕೆಲವರು ತಮ್ಮ ಕಂಪನಿಯ ಕಾರನ್ನು ಮಾರ್ಕೆಂಟಿಂಗ್‌ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದರು.

English summary
Anand Mahindra recently posted an old picture of some kids in a village watching a television screen, with a voice-over of commentary along with the noise of the fans. As the kids are enacting a cricket game, we can see the bowler bowling the ball and the batsmen sending the incoming delivery out of the field.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X