ದೆಹಲಿಯಲ್ಲಿ ಭಾರಿ ಮಳೆ: 4 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ನವದೆಹಲಿ, ಮೇ 14: ದೆಹಲಿಯ ಘಾಜಿಯಾಬಾದ್ ಹಾಗೂ ನೊಯ್ಡಾದಲ್ಲಿ ದೂಳಿನ ಬಿರುಗಾಳಿ ಬಳಿಕ ಈಗ ಆಲಿಕಲ್ಲು ಮಳೆ ಬಿದ್ದಿದೆ.

ಮೋಡದ ವಾತಾವರಣ ಮುಂದುವರೆದಿದ್ದು ಇಂದೂ ಕೂಡ ಮಳೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಬೆಳಗ್ಗೆ ಸೂರ್ಯನ ದರ್ಶನವೂ ಆಗಿತ್ತು, ಸೆಕೆಯು ವಿಪರೀತವಿತ್ತು ಕೆಲ ಸಮಯ ಕಳೆದಂತೆ ಮೋಡಕವಿದ ವಾತಾವರಣ ನಿರ್ಮಾಣವಾಗಿ ವಿಪರೀತ ಮಳೆ ಬಂದಿದೆ.

ದೆಹಲಿಯ ನಾಲ್ಕು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಘಾಜಿಯಾಬಾದ್, ಮೋದಿನಗರ,ಹಾಪುರ್, ಮೀರತ್‌ನಲ್ಲಿ ಆರೆಂಜ್ ಅಲರ್ಟ್ ಇದೆ. ಮೇ 15 ರಂದು ಕೂಡ ಮೋಡಕವಿದ ವಾತಾವರಣ ಮುಂದುವರೆಯಲಿದೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಇದೆ.

ಮೇ 16-18ರವರೆಗೆ ಮಳೆ ನಿರೀಕ್ಷೆ ಕಡಿಮೆ ಇದೆ. ಆದರೆ 19-21ರಂದು ಮಳೆಯಾಗುವ ಸಾಧ್ಯತೆ ಇದೆ. ಗಾಳಿಯು ಗಂಟೆಗೆ 60 ಕಿ.ಮೀ ವೇಗದಲ್ಲಿ ಬೀಸುತ್ತಿದೆ.

ಕರ್ನಾಟಕದಲ್ಲಿ ಮಳೆ

ಕರ್ನಾಟಕದಲ್ಲಿ ಮಳೆ

ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ವಿಪರೀತ ಮಳೆಯಾಗುತ್ತಿದೆ. ಮೂರ್ನಾಡು, ಕಿರವತ್ತಿ, ಕಲಘಟಗಿ, ವಿಜಯಪುರ, ಜಯಪುರ, ಸೋಮವಾರಪೇಟೆ, ರಾಮಗಿರಿ, ಆಲೂರು, ಮೂಡಬಿದಿರೆ, ಸೋಮವಾರಪೇಟೆ, ಉಪ್ಪಿನಂಗಡಿ, ಕಾರ್ಕಳ, ನರಗುಂದ, ಧಾರವಾಡ, ಯಲ್ಲಾಪುರ, ರಾಣೆಬೆನ್ನೂರು, ನರಗುಂದ, ಹೊಸನಗರ, ಹಾಸನ, ಬಾಳೆಹೊನ್ನೂರು, ಭರಮಸಾಗರ, ಹುಂಚದಕಟ್ಟೆಯಲ್ಲಿ ಮಳೆಯಾಗಿದೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ಮಳೆ

ಮುಂದಿನ 48 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ಮಳೆ

ಬೆಳಗ್ಗೆ ಬಿಸಿಲಿದ್ದು ಮಧ್ಯಾಹ್ನ 3 ಗಂಟೆಯ ಸುಮಾರು ಗುಡುಗು ಕೇಳಿಬರುತ್ತದೆ. ಬಳಿಕ ಒಂದೆರೆಡು ತಾಸುಗಳ ಕಾಲ ಮಳೆ ಸುರಿಯುತ್ತದೆ. ಕರ್ನಾಟಕದ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ.

ಎಲ್ಲೆಲ್ಲಿ ಮಳೆ ಬರುತ್ತೆ

ಎಲ್ಲೆಲ್ಲಿ ಮಳೆ ಬರುತ್ತೆ

ದಕ್ಷಿಣ ಕನ್ನಡದ ಬಹುತೇಕ ಪ್ರದೇಶ, ಉಡುಪಿ, ಉತ್ತರ ಕನ್ನಡದಲ್ಲಿ ವಿಪರೀತ ಮಳೆಯಾಗಲಿದೆ.ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಸಾಮಾನ್ಯ ಮಳೆಯಾಗಲಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಸಾಧಾರಣ ಮಳೆಯಾಗಲಿದೆ.

ಬೆಂಗಳೂರು ಹವಾಮಾನ ಹೇಗಿದೆ?

ಬೆಂಗಳೂರು ಹವಾಮಾನ ಹೇಗಿದೆ?

ಬೆಂಗಳೂರಿನಲ್ಲಿ ಎಂದಿನಂತೆ ಸೂರ್ಯೋದಯವಾಗಿದೆ ಸೂರ್ಯನ ಕಿರಣಗಳು ಕೂಡ ತೀಕ್ಷ್ಣವಾಗಿದೆ. ಮಧ್ಯಾಹ್ನದಷ್ಟೊತ್ತಿಗೆ ಮೋಡಕವಿದ ವಾತಾವರಣ ನಿರ್ಮಾಣವಾಗಲಿದೆ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ 35 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.ಕಲಬುರಗಿಯಲ್ಲಿ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+