ಅತ್ಯಂತ ಮಲಿನಕಾರಿ ನದಿಯಾಗಿ ಕುಖ್ಯಾತಿ ಪಡೆದ ಪಾವನ ಗಂಗೆ!
ಭಾರತೀಯರ ಪಾಲಿಗೆ ಪವಿತ್ರ ನದಿ ಎನ್ನಿಸಿದ ಪಾವನ ಗಂಗೆ ವಿಶ್ವದ ಎರಡನೇ ಅತ್ಯಂತ ಮಾಲಿನ್ಯಯುಕ್ತ ನದಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ದಿ ಓಷ್ಯನ್ ಕ್ಲೀನ್ ಅಪ್ ಎಂಬ ಡಚ್ ಫೌಂಡೇಶನ್(ನೆದರ್ಲೆಂಡ್) ವೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಗಂಗಾನದಿ ಪ್ರತಿ ವರ್ಷ ಗಂಗೆಯಿಂದ 1.15 ಲಕ್ಷ ಟನ್ ತ್ಯಾಜ್ಯಗಳು ಸಮುದ್ರಕ್ಕೆ ಸೇರುತ್ತವೆ.

ಚೀನಾದ ಯಾಂಗ್ ಟ್ಸೆ ಎಂಬ ನದಿಯಿಂದ ಪ್ರತೀವರ್ಷ, ಸಮುದ್ರಕ್ಕೆ 3,33,000 ಟನ್ ತ್ಯಾಜ್ಯ ಸೇರುತ್ತದೆ. ಈ ನದಿಯನ್ನು ಬಿಟ್ಟರೆ ಸಮುದ್ರಕ್ಕೆ ಅತೀ ಹೆಚ್ಚು ತ್ಯಾಜ್ಯವನ್ನು ಕಳಿಸುವ ನದಿ ಎಂದರೆ ಗಂಗಾನದಿಯೇ!
ಗಂಗೆಯನ್ನು ಭಾರತೀಯರ ಪಾಲಿನ ಪಾಪನಾಶಿನಿ ಎನ್ನುವವರಿಗೆ ಈ ಸಮೀಕ್ಷೆ ಇರಿಸುಮುರಿಸುಂಟುಮಾಡಿರುವುದು ದಿಟ. ಈಗಾಗಲೇ ಗಂಗಾ ಶುದ್ಧೀಕರಣಕ್ಕಾಗಿ ನಮಾಮಿ ಗಂಗೆ ಎಂಬ ಯೋಜನೆ ಆರಂಭವಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಗಂಗೆ ಈ ಕುಖ್ಯಾತಿಯಿಂದ ಹೊರಬರುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications