ಗಗನಕ್ಕೇರಿದ ಅಮಿತ್ ಶಾ ಪುತ್ರನ ಆದಾಯ: ಮೋದಿ, ಶಾ ಬೆಂಡೆತ್ತಿದ ಟ್ವಿಟ್ಟಿಗರು
ಒಂದೇ ವರ್ಷದಲ್ಲಿ ಅಮಿತ್ ಶಾ ಪುತ್ರನ ಕಂಪೆನಿಯ ಆದಾಯ ಗಗನಕ್ಕೇರಿರುವ ಸುದ್ದಿ ಸಾಮಾಜಿಕ ತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. #AmitShahKiLoot ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ, ಒಂದೇ ವರ್ಷದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರನ ಕಂಪೆನಿಯ ಆದಾಯ ಗಗನಕ್ಕೇರಿರುವ ಸುದ್ದಿ ಸಾಮಾಜಿಕ ತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಅಮಿತ್ ಶಾ ಪುತ್ರ ಜಯ್ ಅಮಿತ್ ಭಾಯ್ ಶಾ ಒಡೆತನದ ಸಂಸ್ಥೆಯ ಆದಾಯ ಹದಿನಾರು ಸಾವಿರ ಪಟ್ಟು ಹೆಚ್ಚಾಗಿದೆ ಎಂದು 'ದಿ ವೈರ್' ಪತ್ರಿಕೆ ವರದಿ ಪ್ರಕಟಿಸಿದ ನಂತರ, #AmitShahKiLoot ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಆಯ್ಕೆಯಾದ ನಂತರ, 2013-14ರ ವರ್ಷಾಂತ್ಯಕ್ಕೆ, ರಿಜಿಸ್ಟ್ರಾರ್ ಆಫ್ ಕಂಪನೀಸಿಗೆ (RoC) ಶಾ ಪುತ್ರನ ಕಂಪೆನಿಯಾದ ಟೆಂಪಲ್ ಎಂಟರ್ಪ್ರೈಸಸ್ ಸಂಸ್ಥೆ ಸಲ್ಲಿಸಿದ್ದ ಬ್ಯಾಲನ್ಸ್ ಶೀಟ್ ಮತ್ತು ವಾರ್ಷಿಕ ವರದಿಯಲ್ಲಿ 6,230 ರೂಪಾಯಿ ನಷ್ಟ ಎಂದು ಘೋಷಿಸಿತ್ತು.
ಇದಾದ ನಂತರ ಪ್ರತೀ ವರ್ಷ ಲಾಭದ ಲಾಭ ದಾಖಲಿಸಲಾರಂಬಿಸಿದ ಟೆಂಪಲ್ ಎಂಟರ್ಪ್ರೈಸಸ್ ಸಂಸ್ಥೆ, ಕಳೆದ ವರ್ಷಾಂತ್ಯಕ್ಕೆ 80.5 ಕೋಟಿ ರೂಪಾಯಿ ಲಾಭದಲ್ಲಿದೆ ಎಂದು ಘೋಷಿಸಿತ್ತು. ಆದರೆ, ಕಳೆದ ಅಕ್ಟೋಬರ್ 2016ರಲ್ಲಿ ಸಂಸ್ಥೆ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸಿತ್ತು.
ಈ ಸಂಬಂಧ ದಿ ವೈರ್ ಪತ್ರಿಕೆಯ ವರದಿಗಾರರು, ಜಯ್ ಶಾ ಅವರನ್ನು ಸಂಪರ್ಕಿಸಿದಾಗ, ಪ್ರವಾಸದಲ್ಲಿದ್ದು ನಗರಕ್ಕೆ ಬಂದ ಮೇಲೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. ಒಂದೇ ವರ್ಷದಲ್ಲಿ ಈ ಮಟ್ಟದಲ್ಲಿ ಶಾ ಪುತ್ರನ ಸಂಸ್ಥೆ ವಹಿವಾಟು ನಡೆಸಿದ್ದಕ್ಕೆ, ಟ್ವಿಟ್ಟಿಗರು ಅಚ್ಚೇದಿನ್ ಅಂದರೆ ಅಮಿತ್ ಶಾ ಕುಟುಂಬಕ್ಕಾ ಎನ್ನುವ ಪ್ರಶ್ನೆಗಳ ಸುರಿಮಳೆಯನ್ನು ಪ್ರಧಾನಿ ಮೋದಿಗೆ ಎಸೆದಿದ್ದಾರೆ. ಕೆಲವೊಂದು ಸ್ಯಾಂಪಲ್..

ಟೆಂಪಲ್ ಎಂಟರ್ಪ್ರೈಸಸ್ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರ
ಅಮಿತ್ ಶಾ ಪುತ್ರ ತನ್ನ ಸಂಸ್ಥೆಯಾದ ಟೆಂಪಲ್ ಎಂಟರ್ಪ್ರೈಸಸ್ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರವನ್ನು RoCಗೆ ಸಲ್ಲಿಸಿದ್ದು ಹೀಗೆ..
2013-14ರ ವರ್ಷಾಂತ್ಯ - 6,230 ರೂಪಾಯಿ ನಷ್ಟ
2014-15ರ ವರ್ಷಾಂತ್ಯ - 18,728 ರೂಪಾಯಿ ಲಾಭ
2015-16ರ ವರ್ಷಾಂತ್ಯ - 80.5 ಕೋಟಿ ರೂಪಾಯಿ ಟರ್ನೌರ್

ಇದು ಮೋದಿ ನಂಬಿರುವ ಆರ್ಥಿಕತೆ
ಒಂದೇ ವರ್ಷದಲ್ಲಿ ಅಮಿತ್ ಶಾ ಪುತ್ರನ ಸಂಸ್ಥೆಯ ಆದಾಯ ಐವತ್ತು ಸಾವಿರದಿಂದ ಎಂಬತ್ತು ಕೋಟಿಗೆ!. ಮೋದಿಜೀ ನಂಬಿರುವ ಆರ್ಥಿಕತೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎನ್ನುವ ಟ್ವೀಟ್.

ದಿನೇಶ್ ಗುಂಡೂರಾವ್, ಕೆಪಿಸಿಸಿ ಟ್ವೀಟ್
ಅಮಿತ್ ಶಾ ಮಗನ ಸಂಸ್ಥೆ ದೇಶದಲ್ಲಿ ಭಾರೀ ವೇಗದಲ್ಲಿ ಬೆಳೆಯುತ್ತಿರುವ ಸಂಸ್ಥೆ, ಹೊಸ ಗಿನ್ನೆಸ್ ದಾಖಲೆ ಎಂದು ಅಣಕವಾಡುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಟ್ವೀಟ್

ಹಣಕಾಸು ಸಚಿವಾಲಯ ಈಗ ಏನು ಕ್ರಮ ತೆಗೆದುಕೊಳ್ಳುತ್ತದೆ
ಕೌಟುಂಬಿಕ ರಾಜಕಾರಣ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಬಿಜೆಪಿ ಕಳೆದುಕೊಂಡಿದೆ. ಹಣಕಾಸು ಸಚಿವಾಲಯ ಈಗ ಏನು ಕ್ರಮ ತೆಗೆದುಕೊಳ್ಳುತ್ತದೆ, ಯಾವ ಏಜೆನ್ಸಿಯ ಮೂಲಕ ತನಿಖೆ ನಡೆಸುತ್ತದೆ.

ಕಾಂಗ್ರೆಸ್ ನಲ್ಲಿ ವಾಧ್ರಾ, ಬಿಜೆಪಿಯಲ್ಲಿ ಜಯ್ ಅಮಿತ್ ಶಾ
ಕಾಂಗ್ರೆಸ್; ನಮ್ಮಲ್ಲಿ ನೆಹರೂ ಇದ್ದಾರೆ
ಬಿಜೆಪಿ: ನಮ್ಮಲ್ಲಿ ದೀನ್ ದಯಾಳ್ ಉಪಾಧ್ಯಾಯ
ಕಾಂಗ್ರೆಸ್: ನಮ್ಮಲ್ಲಿ ರಾಬರ್ಟ್ ವಾಧ್ರಾ
ಬಿಜೆಪಿ: ನಮ್ಮಲ್ಲಿ ಜಯ್ ಅಮಿತ್ ಶಾ..
|
ಬಿಜೆಪಿ ಇದೇ ವಿಕಾಸದ ಬಗ್ಗೆ ಮಾತನಾಡುತ್ತಿರಬೇಕು
ಜಯ್ ಕಾ ವಿಕಾಸ್, ಇಡೀ ದೇಶ ಅಚ್ಚೇ ದಿನ್ ಇನ್ನೂ ಹುಡುಕುತ್ತಿದೆ.. ಇದು ಮೋದಿಯ ಗುಜರಾತ್ ಅಭಿವೃದ್ದಿ ಮಾದರಿ.












Click it and Unblock the Notifications