ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತ್ ಶಾ ಅಧ್ಯಕ್ಷಗಿರಿಗೆ 3 ವರ್ಷ, ಸಂಭ್ರಮ ನುಂಗಿದ ಗುಜರಾತ್ ಸೋಲು

By Sachhidananda Acharya
|
Google Oneindia Kannada News

ನವದೆಹಲಿ, ಆಗಸ್ಟ್ 9: ಅಮಿತ್‌ ಶಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಇಂದಿಗೆ ಮೂರು ವರ್ಷ. ಆದರೆ, ಸಂಭ್ರಮಾಚರಣೆ ಖುಷಿಯನ್ನು ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಾದ ಮುಖಭಂಗ ನುಂಗಿ ಹಾಕಿದೆ.

ಅಗ್ನಿ ಪರೀಕ್ಷೆಯಲ್ಲಿ ಅಹ್ಮದ್ ಗೆ ಜಯ ಮತ್ತು ಇತರ ಸುದ್ದಿಗಳುಅಗ್ನಿ ಪರೀಕ್ಷೆಯಲ್ಲಿ ಅಹ್ಮದ್ ಗೆ ಜಯ ಮತ್ತು ಇತರ ಸುದ್ದಿಗಳು

ಹಾಗೆ ನೋಡಿದರೆ ಅಮಿತ್ ಶಾ ಅಧಿಕಾರ ವಹಿಸಿಕೊಂಡ ನಂತರ ದೇಶದಾದ್ಯಂತ ಬಿಜೆಪಿ ಕ್ಷಿಪ್ರವಾಗಿ ಬೆಳವಣಿಗೆ ಕಂಡಿದೆ. ಹಲವು ರಾಜ್ಯಗಳಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಸೋತ ರಾಜ್ಯಗಳಲ್ಲೂ ಮತಗಳಿಕೆಯನ್ನು ಬಿಜೆಪಿ ಹೆಚ್ಚಿಸಿಕೊಂಡಿರುವುದು ಶಾ ಹೆಚ್ಚುಗಾರಿಕೆಯೇ ಸರಿ.

Amit Shah completes three years as BJP chief

ಬಿಜೆಪಿಯ ಚಾಣಾಕ್ಯ ಎಂದೇ ಗುರುತಿಸಿಕೊಂಡಿರುವ ಅಮಿತ್ ಶಾ, ತನ್ನ ವಿಶಿಷ್ಟ ಸಂಘಟನಾ ಕೌಶಲ್ಯ, ಚಾಣಾಕ್ಷ ತಂತ್ರಗಳಿಂದ ದೇಶದ 13 ರಾಜ್ಯಗಳನ್ನು ಬಿಜೆಪಿ ತೆಕ್ಕೆಗೆ ಬರುವಂತೆ ಮಾಡಿದ್ದಾರೆ. ಐದು ರಾಜ್ಯಗಳಲ್ಲಿ ಮೈತ್ರಿ ಪಕ್ಷಗಳೊಂದಿಗೆ ಕೇಸರಿ ಪಕ್ಷ ಅಧಿಕಾರ ನಡೆಸುತ್ತಿದೆ.

ಶಾ ನೇತೃತ್ವದಲ್ಲಿ ಪಂಜಾಬ್, ಬಿಹಾರ ಮತ್ತು ದೆಹಲಿಯಲ್ಲಿ ಮಾತ್ರ ಬಿಜೆಪಿ ಸೋಲುಂಡಿದೆ. ಅಸ್ಸಾಂ, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚಿಸುವಲ್ಲಿ ಶಾ ಯಶಸ್ವಿಯಾಗಿದ್ದಾರೆ.

ಇಬ್ಬರು ಶಾಸಕರು 'ಕೈ' ಕೊಟ್ಟರೂ ಅಹ್ಮದ್ ಪಟೇಲ್ ಗೆದ್ದಿದ್ದು ಹೇಗೆ?ಇಬ್ಬರು ಶಾಸಕರು 'ಕೈ' ಕೊಟ್ಟರೂ ಅಹ್ಮದ್ ಪಟೇಲ್ ಗೆದ್ದಿದ್ದು ಹೇಗೆ?

ಇದರ ಜತೆಗೆ ಮಹಾರಾಷ್ಟ್ರದಲ್ಲಿ ಸುದೀರ್ಘ ಕಾಲದ ಮಿತ್ರ ಪಕ್ಷ ಶಿವಸೇನೆಯ ಜತೆಯೇ ಸಂಬಂಧ ಕಡಿದುಕೊಂಡು ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ದುಸ್ಸಾಹಸ ಮಾಡಿ ಯಶಸ್ವಿಯೂ ಆಗಿದ್ದಾರೆ. ಮುಂದೆ ಇಲ್ಲಿ ಎರಡೂ ಪಕ್ಷಗಳು ಮತ್ತೆ ಒಂದಾಗಿ ಸರಕಾರ ರಚಿಸಿದ್ದವು.

ಸಂಪೂರ್ಣ ಬಹುಮತ ಇಲ್ಲದಿದ್ದರೂ ಗೋವಾ, ಮಣಿಪುರ ಮತ್ತು ಅರುಣಾಚಲ ಪ್ರದೇಶಗಳಂತಹ ರಾಜ್ಯಗಳಲ್ಲಿ ಸರ್ಕಾರ ರಚಿಸುವಲ್ಲಿ ಶಾ ಯಶಸ್ವಿಯಾಗಿದ್ದರು. ಅವರ ಇತ್ತೀಚೆಗಿನ ಯಶಸ್ಸಿಗೆ ಉದಾಹರಣೆ ಉತ್ತರ ಪ್ರದೇಶದ ಅಭೂತಪೂರ್ವ ಗೆಲುವು.

ಹೀಗೆ ಬಿಜೆಪಿಯಲ್ಲಿ ಅಮಿತ್ ಶಾ ಎಂಬ ಅಶ್ವಮೇಧದ ಕುದುರೆ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದಾಗ ಗುಜರಾತ್ ನಲ್ಲಿ ಅಹ್ಮದ್ ಪಟೇಲ್ ನೀಡಿದ ಹೊಡೆತಕ್ಕೆ ಮುಗ್ಗರಿಸಿದೆ. ಮೂರು ವರ್ಷದ ಸಂಭ್ರಮಾಚರಣೆಯನ್ನು ಒಂದು ಸೋಲಿನ ಕಹಿ ನುಂಗಿ ಹಾಕಿದೆ.

ಅದರಲ್ಲೂ ಅಹ್ಮದ್ ಪಟೇಲ್ ಸೋಲಿಸಲು ಇನ್ನಿಲ್ಲದ ಕಸರತ್ತು ಮಾಡಿ ಕೊನೆಯ ಕ್ಷಣದಲ್ಲಿಯೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗದೇ ಹೋದುದು ಶಾಗೆ ಇನ್ನಿಲ್ಲದ ಮುಖಭಂಗ ಉಂಟು ಮಾಡಿದೆ.

English summary
BJP president Amit Shah completes his three years in office, a period that saw the party rapidly expand its base and clinch states like Goa, Manipur and Arunachal Pradesh through some astute political manoeuvres despite lacking majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X